ಬೆಂಗಳೂರು:
ಹೊಸ ವರ್ಷದ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ದಕ್ಷಿಣ ಭಾರತದ ಜನಪ್ರಿಯ ಪ್ರವಾಸಿ ತಾಣಗಳನ್ನು ಒಳಗೊಂಡ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಮೈಸೂರು, ಊಟಿ ಮತ್ತು ಕೊಡೈಕೆನಾಲ್ ಪ್ರವಾಸವನ್ನು ಒಳಗೊಂಡ ಈ ಪ್ಯಾಕೇಜ್‌ನಲ್ಲಿ ಪ್ರವಾಸಿಗರಿಗೆ ಶೇಕಡಾ 20 ರಿಯಾಯಿತಿ ನೀಡಲಾಗಿದ್ದು, ಕಡಿಮೆ ವೆಚ್ಚದಲ್ಲಿ ಪ್ರಕೃತಿ ಸೌಂದರ್ಯವನ್ನು ಅನುಭವಿಸಲು ಇದು ಉತ್ತಮ ಅವಕಾಶವಾಗಿದೆ.
ದಕ್ಷಿಣ ಭಾರತ ಪ್ರವಾಸಗಳ ತವರು ಎಂದೇ ಹೆಸರುವಾಸಿಯಾದ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಅನನ್ಯ ಪ್ರಕೃತಿ ಸೌಂದರ್ಯವನ್ನು ಹೊಂದಿವೆ. ಆದರೆ ಹೆಚ್ಚಿನ ವೆಚ್ಚದ ಕಾರಣ ಅನೇಕರು ಪ್ರವಾಸದಿಂದ ಹಿಂದೆ ಸರಿಯುತ್ತಾರೆ. ಈ ಹಿನ್ನೆಲೆ KSTDC ನಿಯಮಿತವಾಗಿ ಆಕರ್ಷಕ ಪ್ರವಾಸ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೀಗ ಹೊಸ ವರ್ಷದ ಎರಡನೇ ವಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದೆ.
ಪ್ಯಾಕೇಜ್‌ನಲ್ಲಿ ಒಳಗೊಂಡ ಪ್ರಮುಖ ನಗರಗಳು
ಮೈಸೂರು (ಅರಮನೆ ನಗರಿ)
ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮೈಸೂರು ತನ್ನ ಭವ್ಯ ಅರಮನೆ, ಮ್ಯೂಸಿಯಂಗಳು, ಚರ್ಚುಗಳು ಮತ್ತು ಮೃಗಾಲಯಕ್ಕಾಗಿ ಪ್ರಸಿದ್ಧವಾಗಿದೆ. ಪ್ರವಾಸಿಗರು ಇಲ್ಲಿ ಸ್ಮರಣೀಯ ಕ್ಷಣಗಳನ್ನು ಕಳೆಯಬಹುದು.
ಊಟಿ (ಗಿರಿದಾಮಗಳ ರಾಣಿ)
ಚಹಾ ತೋಟಗಳಿಗೆ ಹೆಸರುವಾಸಿಯಾದ ಊಟಿಯಲ್ಲಿ ಮಸಾಲಾ, ಮಲ್ಲಿಗೆ, ಏಲಕ್ಕಿ ಹಾಗೂ ಚಾಕೊಲೇಟ್ ಫ್ಲೇವರ್‌ನ ವಿವಿಧ ಚಹಾಗಳನ್ನು ಸವಿಯಬಹುದು. ಬೆಟ್ಟಗುಡ್ಡಗಳು ಮತ್ತು ಹಸಿರು ವಾತಾವರಣ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಕೊಡೈಕೆನಾಲ್ (ಗಿರಿಧಾಮಗಳ ರಾಜಕುಮಾರಿ)
ಶಾಂತ ವಾತಾವರಣ ಮತ್ತು ಸುಂದರ ಬೆಟ್ಟ ಪ್ರದೇಶಗಳಿಂದ ಪ್ರಸಿದ್ಧವಾಗಿರುವ ಕೊಡೈಕೆನಾಲ್ ದಂಪತಿಗಳಿಗೆ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವಾಗಿದೆ.
ನೋಡಬೇಕಾದ ಪ್ರಮುಖ ಸ್ಥಳಗಳು
- ಶ್ರೀರಂಗಪಟ್ಟಣ: ಟಿಪ್ಪು ಸುಲ್ತಾನನ ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ
- ಮೈಸೂರು: ಸೇಂಟ್ ಫಿಲೋಮಿನಾ ಚರ್ಚ್, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ, ಬೃಂದಾವನ ಗಾರ್ಡನ್
- ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧ ನಂಜುಂಡೇಶ್ವರ ದೇವಸ್ಥಾನ
- ಊಟಿ ಮತ್ತು ಕೊಡೈಕೆನಾಲ್: ಪ್ರಸಿದ್ಧ ಗಿರಿಧಾಮಗಳ ವೀಕ್ಷಣೆ
ಸಾರಿಗೆ ಮತ್ತು ವಾಸ್ತವ್ಯದ ವಿವರ
ಸಾರಿಗೆ
- ಸುಸಜ್ಜಿತ ಡಿಲಕ್ಸ್ ಕೋಚ್ ಮೂಲಕ ಪ್ರಯಾಣ
ಹೋಟೆಲ್ ವಾಸ್ತವ್ಯ
- ಮೈಸೂರು: ಹೋಟೆಲ್ ಮಯೂರ ಹೊಯ್ಸಳ (KSTDC)
- ಊಟಿ: ಹೋಟೆಲ್ ಮಯೂರ ಸುದರ್ಶನ್ ಅಥವಾ ಸಮಾನ ದರ್ಜೆಯ ಹೋಟೆಲ್
- ಕೊಡೈಕೆನಾಲ್: ಹೋಟೆಲ್ ಎಸ್.ವಿ. ಇಂಟರ್ನ್ಯಾಷನಲ್
ಪ್ಯಾಕೇಜ್ ದರ ಮತ್ತು ಸೌಲಭ್ಯಗಳು
- ಮೈಸೂರು–ಊಟಿ–ಕೊಡೈಕೆನಾಲ್ ಪ್ರವಾಸ ಪ್ಯಾಕೇಜ್ ದರ: ₹9,310 (ಪ್ರತಿ ವ್ಯಕ್ತಿಗೆ)
- ಹಿರಿಯ ನಾಗರಿಕರಿಗೆ 20% ರಿಯಾಯಿತಿ
- ಪ್ರತಿಯೊಂದು ಪ್ರವಾಸಿ ತಾಣ ವೀಕ್ಷಣೆಗೆ ಸಾಕಷ್ಟು ಸಮಯ
- ಪ್ರವಾಸಿ ತಾಣಗಳ ಇತಿಹಾಸ ಮತ್ತು ಮಹತ್ವ ವಿವರಿಸುವ ಪರಿಣಿತ ಗೈಡ್ ಸೌಲಭ್ಯ
- ರಾಜ್ಯ, ಕೇಂದ್ರ ಹಾಗೂ ಸಾರ್ವಜನಿಕ ವಲಯದ (PSU) ನೌಕರರಿಗೆ LTC (Leave Travel Concession) ಸೌಲಭ್ಯ ಲಭ್ಯ
Views: 56