ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಜ.10:
ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಎ. ವ್ಯಾಸಂಗ ಮಾಡುತ್ತಿರುವ ಎನ್ಸಿಸಿ ವಿದ್ಯಾರ್ಥಿ ತೇಜ್ ಕೆ. ಅವರು 2026ರ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಆಯ್ಕೆಯಾಗಿದ್ದಾರೆ.
ಮೂಲತಃ ಚಳ್ಳಕೆರೆ ತಾಲ್ಲೂಕಿನ ಬಿಜೆಕೆರೇ ಗ್ರಾಮದ ಕರಿಬಸಪ್ಪ ಎನ್.ಎಸ್. ಮತ್ತು ಈರಮ್ಮ ದಂಪತಿಗಳ ಪುತ್ರರಾದ ತೇಜ್ ಕೆ., ಕರ್ನಾಟಕ–ಗೋವಾ ಡೈರೆಕ್ಟರೇಟ್ನ ದಾವಣಗೆರೆ ಬಟಾಲಿಯನ್ ವ್ಯಾಪ್ತಿಗೆ ಒಳಪಡುವ ಈ ಕಾಲೇಜಿನಿಂದ ಆಯ್ಕೆಯಾದ ವಿದ್ಯಾರ್ಥಿಯಾಗಿದ್ದಾರೆ.
ದೆಹಲಿಯ ಗಣರಾಜ್ಯೋತ್ಸವ ಪೆರೇಡ್ಗೆ ಆಯ್ಕೆಯಾಗುವ ಮುನ್ನ ತೇಜ್ ಕೆ. ಅವರು 8 ಹಂತದ ಎನ್ಸಿಸಿ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿ ಆಯ್ಕೆಯಾಗಿದ್ದು, ಅಂತಿಮ ಹಂತದಲ್ಲಿ ದೆಹಲಿಗೆ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ.
ಇದು ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಂಪೂರ್ಣ ಚಳ್ಳಕೆರೆ ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದ್ದು, ವಿದ್ಯಾರ್ಥಿಯ ಮಾರ್ಗದರ್ಶಕರು ಹಾಗೂ ಎನ್ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ಡಾ. ಸಿ.ಆರ್. ಲೇಪಾಕ್ಷ ಮತ್ತು ಡಾ. ಎಂ.ಕೆ. ದೇವಪ್ಪ ಈ ಸಾಧನೆಯನ್ನು ಅಭಿನಂದಿಸಿದ್ದಾರೆ.
Views: 25