ಮುರುಘಾ ಮಠದ ಸೇವಾ ಕಾರ್ಯಗಳ ಮೇಲೆ ಸಂಶೋಧನೆ: ಉಷಾ ಜಿ. ಡಾಕ್ಟರೇಟ್ ಸಾಧನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಜ. 15

ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಚಿತ್ರದುರ್ಗ ನಗರದ ಉಷಾ ಜಿ. ಅವರಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗಿದೆ.

ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯ ಗಂಗಾಧರಪ್ಪ ಅವರ ಪುತ್ರಿಯಾದ ಉಷಾ ಜಿ., ಡಾ. ತಾರಿಹಳ್ಳಿ ಹನುಮಂತಪ್ಪ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ಜಗದೀಶಕುಮಾರ್ ಸಿ.ಎನ್. ಅವರ ಸಹ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಇವರು “ಚಿತ್ರದುರ್ಗ ಮುರುಘಾ ಮಠದ ಸಮಾಜಮುಖಿ ಕಾರ್ಯಗಳು : ಒಂದು ಸಾಮಾಜಿಕ ಅಧ್ಯಯನ” ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಮಂಡಿಸಿ, ಪಿಎಚ್.ಡಿ. ಪದವಿಗೆ ಅರ್ಹರಾಗಿದ್ದಾರೆ.

ಚಿತ್ರದುರ್ಗದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿರುವ ಮುರುಘಾ ಮಠದ ಸಮಾಜ ಸೇವಾ ಚಟುವಟಿಕೆಗಳ ಕುರಿತು ನಡೆಸಿದ ಈ ಅಧ್ಯಯನ, ಸಾಮಾಜಿಕ ಅಧ್ಯಯನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಸಂಶೋಧನಾ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಉಷಾ ಜಿ. ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬದವರು, ಸ್ನೇಹಿತರು ಹಾಗೂ ವಿವಿಧ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Views: 147

Leave a Reply

Your email address will not be published. Required fields are marked *