ಶ್ರೀ ಕ್ಷೇತ್ರ ಕೊಟ್ಟೂರು ರಥೋತ್ಸವದ ಪ್ರಯುಕ್ತ 28ನೇ ವರ್ಷದ ಪಾದಯಾತ್ರೆ ಫೆ.10ರಂದು ಆರಂಭ.

ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತಾಧಿಗಳ ನೋಂದಣಿಗೆ ಸಮಿತಿ ಸಂಪರ್ಕ ಸಂಖ್ಯೆಗಳನ್ನು ಪ್ರಕಟಿಸಿದೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ 16:

ನಗರದ ದೊಡ್ಡಪೇಟೆಯ ಶ್ರೀ ಗುರು ಕೊಟ್ಟೂರು ಬಸವೇಶ್ವರ ಪಾದಯಾತ್ರೆ ಸಮಿತಿ ವತಿಯಿಂದ ಕನ್ನಡನಾಡಿನ ಹಾಗೂ ವಿಶ್ವಗುರು ಬಸವಣ್ಣನವರ ಹಿರಿಮೆಯನ್ನು ಸಾರುತ್ತಾ ವಿಶ್ವಶಾಂತಿಗಾಗಿ ಫೆ.12 ರಂದು ಶ್ರೀ ಕ್ಷೇತ್ರ ಕೊಟ್ಟೂರಿನಲ್ಲಿ ನಡೆಯಲಿರುವ ರಥೋತ್ಸವದ ಪ್ರಯುಕ್ತ 28ನೇ ವರ್ಷದ ಸಮಗ್ರ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ.

ಫೆ. 10ರ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ದೊಡ್ಡಪೇಟೆಯ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಮಹಾಮಂಗಳಾರತಿಯೊಂದಿಗೆ ಪಾದಯಾತ್ರೆ ಪ್ರಾರಂಭವಾಗಲಿದೆ. ಈ ಪಾದಯಾತ್ರೆಯೂ ಮಲ್ಲಾಪುರ, ಗುಡ್ಡದರಂಗವ್ವನಹಳ್ಳಿ, ಬೋಗಳೇರಹಟ್ಟಿ, ಕಲ್ಲೇದೇವರಪುರ, ದೊಣ್ಣೆಹಳ್ಳಿ, ಜಗಳೂರು, ಕೆಚೇನಹಳ್ಳಿ, ಹೊಸಕೆರೆ, ಗಡಿಮಾಕುಂಟೆ, ಉಜ್ಜನಿಯಿಂದ ಕೊಟ್ಟೂರು ತಲುಪಲಿದೆ.

ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತಾಧಿಗಳು 9972975010, 99864 28930, 99020 23444 ಮತ್ತು 99015 64288 ಈ ದೂರವಾಣಿಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ.

Views: 46

Leave a Reply

Your email address will not be published. Required fields are marked *