ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 24:
ರಾಜ್ಯಪಾಲರು ಭಾಶಣ ಮಾಡಿ ನಿರ್ಗಮಿಸುವ ವೇಳೆ ಅಗೌರವದಿಂದ ನಡೆದುಕೊಂಡು ಕಾಂಗ್ರೆಸ್ನ ಶಾಸಕರು ಸಚಿವರು ರಾಜ್ಯದ ಮಾನ ಬೀದಿಪಾಲು ಮಾಡಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ಹೊರಟು ನಿಂತ ರಾಜ್ಯಪಾಲರಿಗೆ ಅಡ್ಡಗಟ್ಟಿ ಅಗೌರವ ತೋರಿರುವುದು ೭೦ ವರ್ಷ ದೇಶ ಆಳಿದ ಪಕ್ಷದಲ್ಲಿನ ಬೌದ್ಧಿಕ ದಿವಾಳಿತನ ತೋರಿಸುತ್ತದೆ ಎಂದು ಅವರು ಕಟುವಾಗಿ ಟೀಕಿಸಿದ್ದು, ರಾಜ್ಯಪಾಲರದ್ದು ಸಾಂವಿಧಾನಿಕ ಹುದ್ದೆಯಾಗಿದ್ದು, ಸರ್ಕಾರ ಹಾಗೂ ರಾಜ್ಯಪಾಲರಿಬ್ಬರಿಗೂ ಸಂವಿಧಾನದ ಇತಿಮಿತಿ ಯಲ್ಲಿ ಅಧಿಕಾರ ಇದ್ದು, ರಾಜ್ಯಪಾಲರ ಮೂಲಕ ತನ್ನ ಪಕ್ಷ ರಾಜಕಾರಣ ಮಾಡುವಂತ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ರಾಜ್ಯಪಾಲರ ಸರ್ಕಾರದ ಭಾಷಣದ ಉದ್ದೇಶ ಕಾರ್ಯವೈಖರಿಯ ಅವಲೋಕನ, ಯೋಜನೆಗಳ ಪ್ರಸ್ತಾಪ, ಆಡಳಿತದ ಮುನ್ನೋಟ ಮತ್ತು ಹಿನ್ನೋಟವೇ ಹೊರತು, ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ದೂಷಣೆ ಮಾಡುವ ಅಧಿಕಾರವಿಲ್ಲ. ಆದರೆ ಸಿದ್ರಾಮಯ್ಯ ಸರ್ಕಾರ ರಾಜ್ಯಪಾಲರನ್ನು ಕಾಂಗ್ರೆಸ್ ಪಕ್ಷದ ವಕ್ತಾರರಂತೆ ಬಳಸಿಕೊಳ್ಳಲು ಯತ್ನಿಸಿತ್ತು. ಆದರೆ ಸ್ಥಿತಪ್ರಜ್ಞರಾದ ರಾಜ್ಯಪಾಲರು ಇದನ್ನು ಸಮಯೋಚಿತವಾಗಿ ತಿರಸ್ಕರಿಸಿದ್ದಾರೆ. ರಾಜ್ಯಪಾಲರು ಕ್ರಮವನ್ನು ಕೈಗೊಂಡಿದ್ದಾರೆ. ಸರಿಯಾದ ಆದರೆ ಈ ಹುದ್ದೆಯ ದುರ್ಬಳಕೆಯ ತನ್ನ ದುರುದ್ದೇಶ ವಿಫಲವಾಗಿದ್ದರಿಂದ ಕಂಗೆಟ್ಟ ಕಾಂಗ್ರೆಸ್ ಶಾಸಕರು ಸಚಿವರ ಮೂಲಕ ರಾಜ್ಯಪಾಲರ ಸಂವಿಧಾನಿಕ ಹುದ್ದೆಯ ಘನತೆ ಮತ್ತು ಗೌರವವನ್ನು ತಗ್ಗಿಸಲು ಮುಂದಾಗಿದ್ದು ತೀವ್ರ ನಾಚಿಕೆಗೇಡಿನ ಸಂಗತಿಯಾಗಿದ್ದು, ಕರ್ನಾಟಕದ ಗೌರವ ಮಣ್ಣುಪಾಲು ಮಾಡಿದ್ದಾರೆ ಎಂದರು.
ವಿಬಿ ಜಿರಾಮ್ ಜಿ ಗ್ರಾಮೀಣ ಜನರ ಹಿತದೃಷ್ಟಿಯಿಂದ ಅತ್ಯುತ್ತಮವಾಗಿ ಅದನ್ನು ರೂಪಗೊಳಿಸಲಾಗಿದೆ. ಗ್ರಾಮೀಣರ ಬದುಕು ಯೋಜನೆಯಾಗಿ ಮಾರ್ಪಟ್ಟಿದೆ. ಬದಲಾಯಿಸುವ ರಾಜಕೀಯವಾಗಿ ಟೀಕಿಸುವುದು ಬೇರೆ ವಿಚಾರ ಆದರೆ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ಟೀಕಿಸಲು ಮುಂದಾಗಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಸಂವಿಧಾನಿಕ ಹುದ್ದೆಯ ದುರ್ಬಳಕೆಯಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವ ಸಂಘರ್ಷ ಏರ್ಪಡುವ ಲಕ್ಷಣ ಮತ್ತು ಅತಾರ್ಕಿಕ ವಿಚಾರಗಳನ್ನು ತಮ್ಮ ಭಾಷಣದಲ್ಲಿ ಸೇರ್ಪಡೆ ಮಾಡಿದ ಅತಿರೇಕವನ್ನು ಮನಗಂಡ ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಆಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಹಣಕಾಸು ಆಯೋಗದ ಮುಂದೆ ರಾಜ್ಯದ ಪರಿಸ್ಥಿತಿ ವಿವರಿಸಲು ವಿಫಲವಾದ ಮುಖ್ಯಮಂತ್ರಿಗಳು ಈಗ ಜನಪರ ಯೋಜನೆಯನ್ನು ವಿರೋಧಿಸುವ ಮೂಲಕ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೆಸರೆರಚಾಟ ಮಾಡುತ್ತಿದ್ದಾರೆ ಎಂದು ನಾಗರಾಜ್ ಬೇದ್ರೇ ಆರೋಪಿಸಿದ್ದಾರೆ.
Views: 10