ಗೋವಿಂದ ಕಾರಜೋಳ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಹಣ್ಣು, ಸಿಹಿ ವಿತರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 25:

ಬಂಜಾರ ಲಂಬಾಣಿ ಸಮಾಜ(ರಿ) ಮತ್ತು ಕರ್ನಾಟಕ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷರಾದ ಎಮ್ ಸತೀಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಸರಳ ಸಜ್ಜನಿಕೆಯ ನಿಷ್ಠಾವಂತ ರಾಜಕಾರಣಿ ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿಗಳು ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ಅವರ 76ನೇ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ತಂಪ ಪಾನೀಯ ಮತ್ತು ಸಿಹಿಯನ್ನು ಹಂಚಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಮ್ ಸತೀಶ್ ಕುಮಾರ್ ಗೋವಿಂದ ಕಾರಜೋಳ ರವರು ಐದು ಬಾರಿ ಶಾಸಕರಾಗಿ, ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಅವರು ನೀಡಿದ ಸೇವೆ ಸ್ಮರಣೀಯ. ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿದ್ದಾಗ ರಾಜ್ಯದಲ್ಲಿ ರಸ್ತೆ ಮತ್ತು ನೀರಾವರಿ ಸೌಲಭ್ಯಗಳನ್ನು ಒದಗಿಸಲು ಹಗಲಿರುಳು ಶ್ರಮಿಸಿದ್ದಾರೆ. ಅವರ ದೂರದೃಷ್ಟಿಯಿಂದ ಇಂದು ಅನೇಕ ಹಳ್ಳಿಗಳು ಪ್ರಗತಿ ಕಾಣುತ್ತಿವೆ. ಜನಸೇವೆಯನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ ಹಳ್ಳಿಹಳ್ಳಿ ಗಳಿಂದ ಹಿಡಿದು ವಿಧಾನಸೌಧದವರೆಗೆ ಜನರ ಧ್ವನಿಯಾಗಿ ಬೆಳೆದ ನಾಯಕರು. ಪ್ರಾಮಾಣಿಕ ರಾಜಕೀಯ, ದೃಢ ನಾಯಕತ್ವ ಮತ್ತು ಜನಪರ ರಾಜಕಾರಣದ ಮೂಲಕ ಅಪಾರ ವಿಶ್ವಾಸ ಗಳಿಸಿರುವ ನಿಮ್ಮ ಸಾಧನೆಗಳು ನಾಡಿಗೆ ಹೆಮ್ಮೆಯ ವಿಷಯವಾಗಿವೆ. ಎಲ್ಲಾ ಸಮುದಾಯಗಳ ನಾಯಕರಾಗಿ ನೀವು ಬೆಳೆದು ಬಂದಿದ್ದು, ಜಾತಿ ಮತ ಭೇದವಿಲ್ಲದೆ ಸಮಾಜವನ್ನು ಒಗ್ಗೂಡಿಸುವ ಸಾಮರಸ್ಯದ ರಾಜಕಾರಣ ನಿಮ್ಮ ವಿಶಿಷ್ಟ ಗುರುತು. ಇಂದು ರಾಜ್ಯ ಮಟ್ಟದ ಶಕ್ತಿಶಾಲಿ ನಾಯಕರಾಗಿ ಗುರುತಿಸಿಕೊಂಡಿರುವ ನೀವು, ಮುಂದೆ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಇನ್ನಷ್ಟು ಹೆಸರು ಮತ್ತು ಗೌರವ ಪಡೆಯಲಿ ಎಂಬುದು ನನ್ನ ಆಶಯ.

ಇಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೊಸ ವೇಗ ನೀಡುತ್ತಿದ್ದಾರೆ. ಅಭಿವೃದ್ಧಿಯ ಪಥದಲ್ಲಿ ಸದಾ ಮುನ್ನಡೆಯಲಿ ಕೇಂದ್ರದ ಯೋಜನೆಗಳನ್ನು ಜಿಲ್ಲೆಯ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಅವರು ಸದಾ ಮುಂದು. ಮತ್ತೊಮ್ಮೆ ನಮ್ಮ ಮಾರ್ಗದರ್ಶಕರು, ಇಂತಹ ಧೀಮಂತ ನಾಯಕರಿಗೆ ಭಗವಂತನು ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯವನ್ನು ನೀಡಿ, ಜನಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ಈ ೭೬ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ ನಿಮ್ಮ ಆರೋಗ್ಯ ಸದೃಢವಾಗಿರಲಿ, ಆಯುರಾರೋಗ್ಯ, ಶಕ್ತಿ ಹಾಗೂ ಇನ್ನಷ್ಟು ಜನಸೇವಾ ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.

ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ತುಳಸಿ ರಮೇಶ್ ಹೊಸದುರ್ಗದ ಅಧ್ಯಕ್ಷರಾದ ತಿಪ್ಪೇಶ್ ನಾಯಕ್ ಉಪಾಧ್ಯಕ್ಷರಾದ ಪ್ರವೀಣ್‌ನಾಯಕ್ ಹೊಸದುರ್ಗ ರೋಡ್ ಉಪಾಧ್ಯಕ್ಷರಾದ ಕರಿಯ ನಾಯಕ್ ಚಳ್ಳಕೆರೆ ಮಹಿಳಾ ಘಟಕದ ಅಧ್ಯಕ್ಷರಾದ ನಿರ್ಮಲ ಹಾಗೂ ಮಹಿಳಾ ಸಂಘಟನೆಯ ಲಕ್ಷ್ಮಮ್ಮ ಸುವರ್ಣಮ್ಮ ನಾಗರಾಜ್ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಆರ್.ಎಂ.ಓ ಆನಂದ ಪ್ರಕಾಶ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Views: 141

Leave a Reply

Your email address will not be published. Required fields are marked *