ಚಿತ್ರದುರ್ಗ : ಫೆಬ್ರವರಿ 4 ಮತ್ತು 5 ರಂದು  ಚನ್ನಕೇಶವಸ್ವಾಮಿಯ ರಥೋತ್ಸವ, ಕಲ್ಯಾಣೋತ್ಸವ

ಚಿತ್ರದುರ್ಗ, (ಫೆ.01) : ಕೆಳಗೋಟೆ ಸಿ.ಕೆ.ಪುರದಲ್ಲಿರುವ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಕಲ್ಯಾಣೋತ್ಸವ ಉಯ್ಯಾಲೋತ್ಸವ ಹಾಗೂ ರಥೋತ್ಸವ ಫೆಬ್ರವರಿ 4 ಮತ್ತು 5 ರಂದು ನಡೆಯಲಿದೆ.

ಫೆಬ್ರವರಿ ನಾಲ್ಕರಂದು ಬೆಳಿಗ್ಗೆ ಹತ್ತು ಗಂಟೆಯಿಂದ ಅಂಕುರಾರ್ಪಣ, ಧ್ವಜಾರೋಹಣ, ಕಳಶ ಸ್ಥಾಪನೆ, ನವಗ್ರಹ ಪೂಜೆ, ಹೋಮ, ವಾಸ್ತು ಶಾಂತಿ ಹೋಮ, ರಾಕ್ಷೋಘ್ನ ಹೋಮ, ಮಧ್ಯಾಹ್ನ ಮೂರು ಗಂಟೆಗೆ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಅಡ್ಡಪಲ್ಲಕ್ಕಿ ಮೆರವಣಿಗೆ. ಸಂಜೆ ಆರು ಗಂಟೆಗೆ ಚನ್ನಕೇಶವಸ್ವಾಮಿಯ ಕಲ್ಯಾಣೋತ್ಸವ. ಉಯ್ಯಾಲೋತ್ಸವ ನಂತರ ಪ್ರಸಾದ ವಿನಿಯೋಗ.

ಫೆಬ್ರವರಿ 5 ರಂದು ಮಧ್ಯಾಹ್ನ 12-35 ರಿಂದ 1-18 ರವರೆಗೆ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ರಥೋತ್ಸವ. ಮಧ್ಯಾಹ್ನ 2 ಗಂಟೆಗೆ ಅನ್ನಸಂತರ್ಪಣೆಯಿರುತ್ತದೆ.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನದೊಂದಿಗೆ ಸಹಕರಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಭಕ್ತಮಂಡಳಿ ವಿನಂತಿಸಿದೆ.

The post ಚಿತ್ರದುರ್ಗ : ಫೆಬ್ರವರಿ 4 ಮತ್ತು 5 ರಂದು  ಚನ್ನಕೇಶವಸ್ವಾಮಿಯ ರಥೋತ್ಸವ, ಕಲ್ಯಾಣೋತ್ಸವ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/YLgz5f6
via IFTTT

Leave a Reply

Your email address will not be published. Required fields are marked *