ಚಿತ್ರದುರ್ಗ ಜ. 27
ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಾವೆಲ್ಲರೂ ಕೂಡ ಕಾನೂನಿಗೆ ಸರಿಸಮಾನರು, ಎಲ್ಲರಿಗೂ ಕಾನೂನು ಒಂದೇ ಯಾರು ಮೇಲಲ್ಲ ಯಾರು ಕೀಳಲ್ಲ ಎಂದು ಹಿರಿಯ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್ ತಿಳಿಸಿದರು.
ನಗರದ ನಮ್ಮ ಎಕ್ಸ್ಪಟ್ರ್ಸ್ ಪಿಯು ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ ಭಾರತೀಯ ಸಂವಿಧಾನ, ಗಣರಾಜ್ಯೋತ್ಸವ, ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು, ಭಾರತ ದೇಶದ ಸಂವಿಧಾನ ಬೃಹತ್ ಗಾತ್ರವಾದದ್ದು ಅದರ ಕಾನೂನುಗಳು ಕೂಡ ಅಷ್ಟೇ ಕಠಿಣವಾಗಿವೆ ಹಾಗಾಗಿ ಭಾರತೀಯ ಸಂವಿಧಾನವನ್ನ ಎಲ್ಲಾ ಎಲ್ಲಾ ದೇಶಗಳು ಗೌರವಿಸುತ್ತವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಉತ್ತಮವಾದ ವ್ಯಾಸಂಗ ವೃತ್ತಿಯಲ್ಲಿ ಬೇರೆಯ ಕಡೆಗೆ ಆಲೋಚನೆ ಮಾಡದೆ ಓದುವುದರ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಿದೆ, ಅದನ್ನು ಹೊರತುಪಡಿಸಿ ಪ್ರೀತಿ ಪ್ರೇಮ ಎಂದು ತಮ್ಮ ಜೀವನಗಳನ್ನ ಹಾಳು ಮಾಡಿಕೊಳ್ಳದಿರಿ, ತಂದೆ ತಾಯಿಗಳನ್ನು ಗೌರವಿಸುವುದರ ಜೊತೆಗೆ ಅವರ ಮಾತುಗಳನ್ನು ಕೇಳಿ ತಮ್ಮ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಪಕ್ಷ ಕಾಯ್ದೆಗಳು ಜೊತೆಗೆ ಬಾಲ್ಯ ವಿವಾಹಗಳ ಪ್ರಕರಣಗಳು ಕೂಡ ದಾಖಲಾಗುತ್ತಿವೆ ಪ್ರಕರಣಗಳಲ್ಲಿ ಭಾಗಿಯಾಗುವಂತಹ ಯುವಕ ಯುವತಿಯರಿಗೆ ಕಾನೂನಿನ ಪಾಠ ಏನೆಂದು ತಿಳಿದಿದೆ ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಇರುವ ಯುವಕ ಯುವತಿಯರು ಉತ್ತಮ ರೀತಿಯಲ್ಲಿ ಓದಿನ ಕಡೆಗೆ ಗಮನ ಹರಿಸಿ ನಾಡಿನಲ್ಲಿ ಉತ್ತಮ ಪ್ರಜೆಯಾಗಲು ಪಣ ತೊಡಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಮ್ಮ ಎಕ್ಸ್ಪಟ್ರ್ಸ್ ಕಾಲೇಜ್ ಡೈರೆಕ್ಟರ್ ಸೈಯದ್ ಗೌಸ್, ಪ್ರಾಂಶುಪಾಲರಾದ ರಾಮ್ ಶರ್ಮ ಸತ್ಯನಾರಾಯಣ ಹಾಗೂ ಎಜಿಎಂ ಶಿವಕುಮಾರ್ ಹಾಗೂ ಕಾಲೇಜು ಸಿಬ್ಬಂದಿ ವರ್ಗದವರು ಇದ್ದರು.
Views: 98