ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 02
ಭಾರತದಲ್ಲಿ ರಾಷ್ಟ್ರದ ಪರಿಕಲ್ಪನೆಗೆ ಬಹು ಪ್ರಾಚೀನ ಇತಿಹಾಸವಿದೆ. ಭೂಮಿಯನ್ನು ತಾಯಿಯ ಸ್ವರೂಪದಲ್ಲಿ ಕಂಡವರು ನಾವು. ಹೀಗಾಗಿಯೇ ಈ ದೇಶವನ್ನು ಭಾರತಮಾತೆ ಎನ್ನುತ್ತೇವೆ, ಭಾರತದ ಜನರಿಗೆ ಒಳಿತು-ಕೆಡುಕು, ಧರ್ಮ-ಅಧರ್ಮದ ಅರಿವಿದೆ. ಸಮಾಜದ ಒಳಿತಿಗೆ ಬದುಕಿದ, ಅನ್ಯಾಯವನ್ನು ಮಟ್ಟ ಹಾಕಿದ ಶ್ರೀರಾಮ, ಶ್ರೀಕೃಷ್ಣ ನಮಗೆ ಆದರ್ಶ ಎಂದು ಯುವ ವಾಗ್ಮೀಗಳಾದ ವಿಕಾಸ್ ಪುತ್ತೂರು ತಿಳಿಸಿದರು.

ಹಿಂದೂ ಸಂಗಮ ಆಯೋಜನ ಸಮಿತಿ ಚಿತ್ರದುರ್ಗ ನಗರದವತಿಯಿಂದ ನಗರದ ವಾಸವಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದೊಡ್ಡಪೇಟೆ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರಲ್ಲಿ ರಕ್ತಗತವಾಗಿದ್ದ ಇಂತಹ ಹಿಂದೂ ಮೌಲ್ಯಗಳನ್ನು ಮರೆತಿದ್ದರಿಂದಲೇ ಭಾರತವು ಸಾವಿರ ವರ್ಷ ಆಕ್ರಮಣ, ಗುಲಾಮಗಿರಿ ಅನುಭವಿಸಬೇಕಾಯಿತು. ಆದ್ದರಿಂದ ಮತ, ಪಂಥ, ಭಾಷೆ, ಪ್ರಾಂತ್ಯಗಳ ಹೆಸರಿನಲ್ಲಿ ಹಂಚಿಹೋಗದೆ, ಹಿಂದೂ ಎಂಬ ಏಕಭಾವದಲ್ಲಿ ಸಂಘಟಿತರಾಗಬೇಕು. ನಿರಂತರ ಪರಿಶ್ರಮದಿಂದಾಗಿ ಗರ್ವದಿಂದ ಹಿಂದೂ ಅಂತಾ ಹೇಳಿಕೊಳ್ಳುವ ಕಾಲ ಬಂದಿದೆ 1925ರಲ್ಲಿ ಸ್ಥಾಪನೆಯಾದ ಆರೆಸ್ಸೆಸ್, ರಾಷ್ಟ್ರೀಯವಾದಿ ಸಂಘಟನೆಯಾಗಿ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾ ನೂರು ವರ್ಷ ಪೂರೈಸಿದೆ. ಇಂತಹ ಸಂದರ್ಭದಲ್ಲಿ ದೇಶ, ಧರ್ಮದ ಮುಂದಿರುವ ಸವಾಲುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಮತಾಂತರ, ಲವ್ ಜಿಹಾದ್, ಶ್ರದ್ಧಾಕೇಂದ್ರಗಳ ಮೇಲಿನ ದಾಳಿಯನ್ನು ಜಾಗೃತ ಸಮಾಜ ಸಂಘಟಿತವಾಗಿ ಎದುರಿಸಬೇಕು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸ್ಥಾಪನೆಯಾಗುವ ಮುನ್ನ ಜನರನ್ನು ಒಂದು ಕಡೆ ಸೇರಿಸುವುದು ಕಷ್ಟವಾಗಿತ್ತು. ಅಂದಿನ ಮಹಾನ್ ನಾಯಕರೊಬ್ಬರು ತಮ್ಮನ್ನು ಕತ್ತೆ ಅಂತಾ ಕರೆದರೂ ಹಿಂದೂವಾಗಿ ಗುರುತಿಸದಂತೆ ಹೇಳಿದ್ದರು. ಕೆಲವು ಕಡೆಗಳಲ್ಲಿ ಹಿಂದೂ ಅಂದರೆ ಜಾತಿ, ಹೇಡಿ ಎಂಬ ಭಾವನೆ ಇತ್ತು. ಶವ ಹೊರುವಾಗ ಮಾತ್ರ ಹಿಂದೂಗಳು ಒಂದು ಕಡೆ ಸೇರುವ ಪರಿಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಯಾರೂ ತಮ್ಮ ಮಕ್ಕಳಿಗೆ ರಾವಣ, ದುರ್ಯೋಧನ, ಶೂರ್ಪನಖಿ ಹೆಸರಿಡುವುದಿಲ್ಲ ಎಂದ ಅವರು, ಪ್ರತಿಯೊಬ್ಬ ವ್ಯಕ್ತಿಯೂ ತಾನು ಹಿಂದೂ ಎಂಬ ಆತ್ಮವಿಶ್ವಾಸವನ್ನು ಗೌರವದಿಂದ ಪ್ರದರ್ಶಿಸಬೇಕಾಗಿದೆ ಹಲವಾರು ವರ್ಷ ಗಳಿಂದ ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುವಂತಹ ಕೃತ್ಯಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಹಿಂದೂ ಸಮಾಜ ಇಂದು ಅತ್ಯಂತ ವಿಶಾಲವಾಗಿ ಸದೃಢವಾಗಿ ಬೆಳೆದಿದೆ. ತನ್ನ ವಿರುದ್ಧ ನಡೆಯುವ ಎಲ್ಲ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಶಕ್ತಿ ಸಾಮರ್ಥ ಹಿಂದೂ ಸಮಾಜಕ್ಕಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಹಿರಿಯೂರಿನ ಆಲೂರಿನ ಶ್ರೀ ಆನಂದಾಶ್ರಮದ ಶ್ರೀ ಶಂಕರಾನಂದ ಸ್ವಾಮಿಗಳು ಮಾತನಾಡಿ, ಯಾವುದೇ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಸಮಾಜದ ಸಂಘಟನೆಗಾಗಿ ಸದೃಢರಾಗಿ ಹಿಂದೂ ಧರ್ಮ ಸಮಾನತೆಯನ್ನು ಸಾರು ಧರ್ಮವಾಗಿದೆ. ಸಂಸ್ಕೃತಿ, ಸಂಸ್ಕಾರ, ಸಂವೇದನೆ, ಭ್ರಾತೃತ್ವ, ಗೌರವ, ಗೋಪೂಜೆ ಮುಂತಾದ ಧರ್ಮ ಪ್ರೇರಣೆಯಾಗುವ ಕಾರ್ಯಕ್ರಮಗಳು ಮಾತ್ರ ನಮ್ಮಲ್ಲಿ ನಡೆಯುತ್ತಿವೆ. ನೂರಾರು ವರ್ಷಗಳಿಂದ ನಾವೆಲ್ಲರೂ ಸಹೋದರ ಭಾವನೆಯಿಂದ ಎಲ್ಲರೊಂದಿಗೆ ಸೇರಿ ನಮ್ಮ ಬದುಕನ್ನು ಕಟ್ಟಿಕೊಂಡಿದ್ದೇವೆ. ಕಷ್ಟ-ಸುಖಗಳನ್ನು ಸಮಾನತೆಯಿಂದ ಕಾಣುತ್ತಿವೆ. ಎಲ್ಲರಲ್ಲೂ ಗೌರವ, ವಿಶ್ವಾಸ ಹುಟ್ಟುಹಾಕುವ ಹಿಂದೂ ಧರ್ಮದ ಬಗ್ಗೆ ನಮ್ಮೆಲ್ಲರಲ್ಲೂ ಗೌರವ ಭಾವನೆಇದೆ. ಈ ಭಾವನೆಗಳಿಗೆ ಚ್ಯುತಿಯಾಗದಂತೆ ಜಾಗ್ರತೆ ವಹಿಸಬೇಕಿದೆ ಎಂದರು.

ವಿಶಾಲವಾದ ಹಿಂದೂ ಧರ್ಮದ ಮರ್ಮವನ್ನು ಅರಿಯುವ ಕಾರ್ಯ ವ್ಯವಸ್ಥಿತವಾಗಿ ನಡೆದಿಲ್ಲ. ಕೇವಲ ಯಾವುದೋ ಒಂದು ಸಮುದಾಯಕ್ಕೆ ಈ ಧರ್ಮ ಸೀಮಿತವಾಗಿದೆ ಎಂಬ ತಪ್ಪು ಭಾವನೆ ಈ ಧರ್ಮದ ಬೆಳವಳಿಗೆಗೆ ಸ್ವಲ್ಪಅಡಚಣೆಯಾಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ, ಮೌಲ್ಯ ಹಾಗೂ ಗೌರವಗಳಿಸಿದಕೀರ್ತಿ ಹಿಂದೂಧರ್ಮಕ್ಕಿದೆ. ಇಂದು ಪ್ರಪಂಚದಾದ್ಯಂತ ಹಿಂದೂ ಧರ್ಮದ ಆಚಾರ, ವಿಚಾರಗಳ ಬಗ್ಗೆ ಎಲ್ಲರಲ್ಲೂ ಅಸಕ್ತಿ ಮೂಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ನಗರದ ಏಕನಾಥೇಶ್ವರಿ ಪಾದಗುಡಿಯಿಂದ ಪ್ರಾರಂಭವಾದ ಶೋಭಾಯತ್ರೆಯಲ್ಲಿ ಜಾನಪದ ಕಲಾತಂಡಗಳೊಂದಿಗೆ ಭಜನಾ ತಂಡ, ಟ್ಯಾಷ್ಯೊ, ಭಾರತಾಂಭೆಯ ಭಾವಚಿತ್ರ, ಗೋವಿನ ಪ್ರತಿಮೆ, ಹಾಗೂ ಭಾರತವನ್ನು ಸ್ವಾತಂತ್ರ್ಯಗೊಳಿಸಿದ ಮಹಾನ ನಾಯಕರುಗಳ ವೇಷ ಭೂಷಣಗಳನ್ನು ವಿವಿಧ ಮಕ್ಕಳು ಹಾಕಿದ್ದು ನೋಡುಗರ ಮನಸ್ಸುನ್ನು ಸೂರೆಗೊಳಿಸಿತು.
ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷರಾದ ನವೀನ್ ಚಾಲುಕ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದಲ್ಲಿ ಮಂಜುನಾಥ್ಅವಣ್ಣನವರ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀಮತಿ ಸುನೀತಾ ಮುರಳಿ ಪ್ರಸ್ತಾವಿಕವಾಗಿ ಮಾತನಾಡಿದರು, ಜಿತೇಂದ್ರ ಹುಲಿಕುಂಟೆ, ಓಂಕಾರ್, ಮೋಹನ್ ಕುಮಾರ್ ಜಿ.ಎಚ್, ಪಟಾಕಿ ಸತೀಶ್, ಚಲವಾದಿ ತಿಪ್ಪೇಸ್ವಾಮಿ, ದರ್ಶನ್, ಲಿಂಗರಾಜು, ಜಯಶೇಖರ್, ವಿಜಯ್, ನಾಗರಾಜ್ ಬೇದ್ರೇ ವಾಸವಿ ಶಾಲೆಯ ಸತ್ಯನಾರಾಯಣ ಶೆಟ್ಟಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.