ಹಿರೇಗುಂಟನೂರಿನಲ್ಲಿ ಹಿಂದೂ ಸಂಗಮ ಕಾರ್ಯಕ್ರಮ — ಸಂಘಟನೆ, ಸಂಸ್ಕೃತಿ ಮತ್ತು ಜಾಗೃತಿಗೆ ಕರೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 9

ರಾಷ್ಟ್ರೀಯ ಸ್ವಯಂ ಸೇವಕರು ಗಲ್ಲಿ ಗಲ್ಲಿಯಲ್ಲಿ ರಾರಾಜಿಸಿ ಸಾಂಸ್ಕೃತಿಕ ದೇಶ ಕಟ್ಟುತ್ತಾರೆ. ಊರು ಊರುಗಳಲ್ಲಿ ಸಂಚರಿಸಿ ಹಿಂದೂ ಜಾಗೃತಿ ಮೂಡಿಸಬೇಕು. ದೇಶದಿಂದ ಯಾವುದೇ ಪ್ರಾಂತ್ಯ ವಿಭಾಗವಾಗದಂತೆ ಗಟ್ಟಿ ಎಚ್ಚರಿಕೆ ನೀಡಿ ಸಮಾವೇಶ ಮಾಡೋಣ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ ಕರೆ ನೀಡಿದರು.

ಹಿರೇಗುಂಟನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಹಿಂದೂ ಸಂಗಮ ಆಯೋಜನಾ ಸಮಿತಿವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ಹಲವಾರು ಮಂದಿ ಶ್ರಮಿಸಿದ್ದು ಹಿಂದೂಭಾರತ ಕ್ಕಾಗಿಯೇ, ಹಿಂದುತ್ವದ ಬಗ್ಗೆ ಮಕ್ಕಳಿಗೆ ತಿಳಿಸ ಬೇಕು. ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಕುಟುಂಬ ಪ್ರಬೋಧನೆ ಬೆಳೆಸಬೇಕು. ಇದಕ್ಕೆ ಭಜನೆ, ಸಹ ಭೋಜನ ಕಾರ್ಯಕ್ರಮ ನಡೆಯಬೇಕು. ಜಾತಿ, ಪಕ್ಷ, ಧರ್ಮ ಬೇಧ ಅಂತ ಸಾಮರಸ್ಯ ಇಲ್ಲದಂತೆ ಮಾಡಿದ್ದಾರೆ ಅದನ್ನು ಸರಿಪಡಿಸಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಬಂಜಾರ ಗುರುಪೀಠದ ಸೇವಾಲಾಲ್ ಶ್ರೀಗಳು ಮಾತನಾಡಿ ನಮಗಿರೋದು ಒಂದೇ ದೇಶ ಅದರಲ್ಲೂ ಸಂಸ್ಕೃತಿಯ ಸಭ್ಯತೆಯಿದೆ. ಬೇರೆ ಬೇರೆ ದೇಶಗಳಲ್ಲಿ ಇರುವವರು ಶಾಂತಿಯಾಗಿದ್ದಾರೆ. ಅದು ಸನಾತನ ಶಿಸ್ತು. ಶತ ಶತಮಾನಗಳಿಂದ ಧರ್ಮ ವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತದೆ. ಜಾತಿಗಳನ್ನು ಒಡೆಯುವುದಕ್ಕಾಗಿ ರಾಜ್ಯ ದಲ್ಲಿ ಪ್ರತ್ಯೇಕ ಕಾನೂನು ಜಾರಿಯಾಗುವ ದಿನಗಳು ದೂರವಿಲ್ಲ. ಅದ್ದರಿಂದ ಜಾಗೃತರಾಗುವ ಮೂಲಕ ಕುತಂತ್ರಗಳನ್ನು ನಿಯಂತ್ರಿಸಬೇಕು ಹಿಂದೂಗಳಿಗೆ ಇರುವ ಏಕೈಕ ದೇಶ ಭಾರತ, ಭಾವನಾತ್ಮಕ, ರಾಗ ದ್ವೇಷಗಳಿಲ್ಲದ, ತಾರತಮ್ಯಗಳಿಲ್ಲದ ಭವ್ಯ ದಿವ್ಯ ದೇಶ ನಮ್ಮದು. ದೇಶ, ಸಂಸ್ಕೃತಿ ಬೆಳೆಯಲು ಮನೆಮನೆಗಳಲ್ಲಿ ದೇಶಾಭಿ ಮಾನ ಮೂಡಿಸಬೇಕು. ಎಂದರು.

ಅಧ್ಯಕ್ಷೀಯ ನುಡಿಗಳನ್ನು ಆಡಿದ ಯುವ ಮುಖಂಡರಾದ ಜಿ.ಎಸ್ ಅನೀತ್ ಕುಮಾರ ರವರು ದೇಶಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊಡುಗೆ ,ಹಾಗೂ ದೇಶ ಮೊದಲು ಎನ್ನುವ ಪ್ರಧಾನಿಯನ್ನ ಕೊಟ್ಟ ಸಂಘವನ್ನು ಸ್ಮರಿಸಿದರು.ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಹಿಂದೂಗಳ ಮೇಲೆ ಹೇರುತ್ತಿರುವ ವಿದೇಶಿ ವಸ್ತುಗಳ ಬಗ್ಗೆ ಮಾತನಾಡಿದರು. ಸರ್ಕಾರಿ ಶಾಲಾ ಆವರಣದಿಂದ ಪ್ರಾರಂಭವಾದ ಶೋಭಾಯಾತ್ರೆ ವಿವಿಧ ಕಲಾ ತಂಡಗಳಿಂದ ಗ್ರಾಮದ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು.ಕುಂಭ ಹೊತ್ತ ಮಹಿಳೆಯರು ದಾರಿಯುದ್ದಕ್ಕೂ ಸಾಗಿದರು.

ಈ ಕಾರ್ಯಕ್ರಮದಲ್ಲಿ ಹಿರೇಗುಂಟನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರುಗಳು. ಮಾಜಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ಗ್ರಾಮದ ಮಹಿಳೆಯರು , ಸಾರ್ವಜನಿಕರು ಆಗಮಿಸಿದ್ದರು.

Leave a Reply

Your email address will not be published. Required fields are marked *