ದಿನದ ವಿಶೇಷ: ಆರ್ಥಿಕ ಹೂಡಿಕೆಯ ಕಡೆಗೆ ವಿಶೇಷ ಗಮನ, ಉದ್ಯಮ ವಿಸ್ತರಣೆಗೆ ಪೂರಕ ವಾತಾವರಣ, ಮಕ್ಕಳ ಏಳಿಗೆ ಹಾಗೂ ಸಾಧನೆಯ ಹೆಮ್ಮೆ ಈ ದಿನದ ಪ್ರಮುಖ ಆಕರ್ಷಣೆ. ಇಂದಿನ (ಶನಿವಾರ) ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಇಂದಿನ ಪಂಚಾಂಗ (ಏಪ್ರಿಲ್ 18, 2026):
- ಸಂವತ್ಸರ: ಶಾಲಿವಾಹನ ಶಕೆ ೧೯೪೯, ಪರಾಭವ ಸಂವತ್ಸರ
- ಆಯನ ಹಾಗೂ ಋತು: ಉತ್ತರಾಯಣ, ವಸಂತ ಋತು
- ಮಾಸ ಹಾಗೂ ಪಕ್ಷ: ವೈಶಾಖ ಮಾಸ, ಶುಕ್ಲ ಪಕ್ಷ
- ತಿಥಿ ಹಾಗೂ ವಾರ: ಪ್ರತಿಪತ್, ಶನಿವಾರ
- ನಕ್ಷತ್ರ ಹಾಗೂ ಯೋಗ: ಕೃತ್ತಿಕಾ ನಕ್ಷತ್ರ, ವೈಧೃತಿ ಯೋಗ
- ಸೂರ್ಯೋದಯ – ಸೂರ್ಯಾಸ್ತ: ಬೆಳಿಗ್ಗೆ 06:10 – ಸಂಜೆ 06:37
- ರಾಹು ಕಾಲ: ಬೆಳಿಗ್ಗೆ 09:17 ರಿಂದ 10:50 ರವರೆಗೆ
- ಯಮಗಂಡ ಕಾಲ: ಮಧ್ಯಾಹ್ನ 01:57 ರಿಂದ 03:31 ರವರೆಗೆ
- ಗುಳಿಕ ಕಾಲ: ಬೆಳಿಗ್ಗೆ 06:10 ರಿಂದ 07:44 ರವರೆಗೆ
ಮೇಷ ರಾಶಿ
ವಿಶ್ಲೇಷಣಾತ್ಮಕ ಚಿಂತನೆ ನಿಮ್ಮ ಕೈಹಿಡಿಯಲಿದೆ. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರವಿರಲಿ ಮತ್ತು ನಿಖರತೆ ಕಾಯ್ದುಕೊಳ್ಳಿ. ಕಚೇರಿಯಲ್ಲಿ ನಿಮ್ಮ ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ಪ್ರೀತಿಪಾತ್ರರ ತಪ್ಪುಗಳನ್ನು ಕಡೆಗಣಿಸುವಿರಿ. ಮಕ್ಕಳೊಂದಿಗೆ ಕಾಲ ಕಳೆಯುವುದು ನೆಮ್ಮದಿ ತರಲಿದೆ. ಬಾಕಿ ಬರಬೇಕಾದ ಹಣದ ಬಗ್ಗೆ ಕೊಂಚ ಚಿಂತೆ ಕಾಡಬಹುದು.
ವೃಷಭ ರಾಶಿ
ಹಣಕಾಸು ವ್ಯವಹಾರಗಳಲ್ಲಿ ಜಾಗರೂಕತೆ ಅತ್ಯಗತ್ಯ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದ ಮಹತ್ವದ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರ. ಸರಳ ಕೆಲಸಗಳನ್ನು ಸಂಕೀರ್ಣ ಮಾಡಿಕೊಳ್ಳಬೇಡಿ ಹಾಗೂ ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿಟ್ಟುಕೊಳ್ಳಿ.
ಮಿಥುನ ರಾಶಿ
ಹಿಂದಿನ ಆರ್ಥಿಕ ನಷ್ಟಗಳನ್ನು ಸರಿದೂಗಿಸಲು ಒತ್ತು ನೀಡುವಿರಿ. ಮಾನಸಿಕ ಶಾಂತಿಗಾಗಿ ಆಧ್ಯಾತ್ಮಿಕ ಚಟುವಟಿಕೆಗಳತ್ತ ಮುಖಮಾಡುವಿರಿ. ಆಸ್ತಿ ಅಥವಾ ಜಾಗದ ವಿಸ್ತರಣೆಯ ಬಗ್ಗೆ ಚಿಂತನೆ ನಡೆಸುವಿರಿ. ದಿಢೀರ್ ಖರ್ಚುಗಳಿಂದ ಆರ್ಥಿಕ ಒತ್ತಡ ಉಂಟಾಗಬಹುದು. ನಾಯಕತ್ವದ ಸ್ಥಾನದಲ್ಲಿರುವವರಿಗೆ ಶುಭ ಸುದ್ದಿ ಕಾದಿದೆ. ಅಸಾಧ್ಯವಾದ ಕೆಲಸಗಳಿಗೆ ಸಮಯ ವ್ಯರ್ಥ ಮಾಡದಿರಿ.
ಕರ್ಕಾಟಕ ರಾಶಿ
ಬಹುದಿನಗಳ ನಂತರ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ ಒದಗಲಿದೆ. ಪ್ರತಿಫಲಾಪೇಕ್ಷೆ ಇಲ್ಲದ ನಿಮ್ಮ ನಿಸ್ವಾರ್ಥ ಸೇವೆಯಿಂದ ಆತ್ಮಸಂತೋಷ ದೊರೆಯುವುದು. ವೃತ್ತಿಜೀವನದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಕಾಲ. ಲೆಕ್ಕಪತ್ರಗಳಲ್ಲಿನ ಸಣ್ಣ ತಪ್ಪಿನಿಂದ ನಷ್ಟವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆಯಾಗುವ ಸಂಭವವಿದೆ.
ಸಿಂಹ ರಾಶಿ
ಹಂತ ಹಂತದ ಪ್ರಗತಿಯು ಜೀವನದಲ್ಲಿ ಸದಾ ಸಂತಸ ತರಲಿದೆ. ಸೃಜನಶೀಲ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಮಾನಸಿಕ ನೆಮ್ಮದಿ ನೀಡುತ್ತದೆ. ಇತರರ ಮಾತು ಕೇಳಿ ಹೂಡಿಕೆ ಮಾಡಿ ನಷ್ಟ ಅನುಭವಿಸದಿರಿ. ದೂರದ ಸಂಬಂಧಿಗಳ ಭೇಟಿಯು ಸಂಭ್ರಮ ತರಲಿದೆ. ಕಚೇರಿಯ ಒತ್ತಡವನ್ನು ಮನೆಗೆ ತಂದು ನೆಮ್ಮದಿ ಹಾಳುಮಾಡಿಕೊಳ್ಳುವುದು ಬೇಡ.
ಕನ್ಯಾ ರಾಶಿ
ವ್ಯವಹಾರದಲ್ಲಿ ಅತಿಯಾದ ಗೌಪ್ಯತೆ ಬೇಡ, ಮುಂದೊಂದು ದಿನ ಇದರಿಂದ ಪಶ್ಚಾತ್ತಾಪ ಪಡಬೇಕಾಗಬಹುದು. ಆರ್ಥಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ಕೈಗೊಳ್ಳಿ. ಮಹಿಳೆಯರಿಗೆ ಇಂದು ತಾಳ್ಮೆಯ ಪರೀಕ್ಷೆ ಎದುರಾಗಬಹುದು. ಕೌಟುಂಬಿಕ ಕೆಲಸಗಳಲ್ಲಿ ಹೆಚ್ಚು ಮಗ್ನರಾಗುವಿರಿ. ಸಹೋದರಿಯರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು.
ತುಲಾ ರಾಶಿ
ಇತ್ತೀಚಿನ ಹಿನ್ನಡೆಗಳಿಂದ ಹೊರಬರಲು ಸಕಾರಾತ್ಮಕ ಯೋಚನೆ ಬೆಳೆಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಸಂಗಾತಿಯೊಂದಿಗೆ ಚರ್ಚೆ ನಡೆಯಲಿದೆ. ಸಹೋದರರ ಬೆಂಬಲ ನಿಮಗೆ ಆನೆಬಲ ತರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಮತ್ತು ಶಾಂತಿ ಇರಲಿ. ಅನಗತ್ಯ ಕೋಪವನ್ನು ಬಿಟ್ಟುಬಿಡಿ.
ವೃಶ್ಚಿಕ ರಾಶಿ
ಹಣಕಾಸಿನ ನಷ್ಟ ತಪ್ಪಿಸಲು ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಜೀವನದ ಹೊಸ ಬದಲಾವಣೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಹಳೆಯ ಮನೆ ದುರಸ್ತಿ ಕಾರ್ಯದ ಬಗ್ಗೆ ಒಲವು ಮೂಡಲಿದೆ. ಕೇವಲ ಅವಶ್ಯಕತೆ ಇದ್ದಾಗ ಮಾತ್ರ ನಿಮ್ಮನ್ನು ಬಳಸಿಕೊಳ್ಳುವವರಿಂದ ದೂರವಿರಿ. ಆಸ್ತಿ ವಿಚಾರದಲ್ಲಿ ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬರಬಹುದು.
ಧನು ರಾಶಿ
ಹೊಸ ಆರ್ಥಿಕ ಒಪ್ಪಂದಗಳಿಂದ ಉತ್ತಮ ಲಾಭ ನಿರೀಕ್ಷಿಸಬಹುದು. ಸಂಗಾತಿಯೊಂದಿಗೆ ಸಣ್ಣಪುಟ್ಟ ಮನಸ್ತಾಪಗಳು ಬರಬಹುದು. ಅಪರಿಚಿತರ ಮಾತುಗಳನ್ನು ನಂಬಿ ಹೂಡಿಕೆ ಮಾಡುವ ಸಾಹಸಕ್ಕೆ ಕೈಹಾಕದಿರಿ. ವೃತ್ತಿ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆ ಇದೆ. ಎಲ್ಲವೂ ತಾನಾಗಿಯೇ ಸರಿಯಾಗುತ್ತದೆ ಎಂಬ ನಿರ್ಲಕ್ಷ್ಯ ಬೇಡ.
ಮಕರ ರಾಶಿ
ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಬಾಕಿ ಉಳಿದಿರುವ ಸಾಲಗಳನ್ನು ತೀರಿಸುವಿರಿ. ಸಂಜೆ ಹೊತ್ತಿಗೆ ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಹಳೆಯ ತಪ್ಪುಗಳನ್ನು ಮರೆತು ಹೊಸ ಉತ್ಸಾಹದಿಂದ ಮುನ್ನಡೆಯಿರಿ. ತಾಯಿಯ ಆರೋಗ್ಯದ ಕಡೆ ವಿಶೇಷ ಕಾಳಜಿ ವಹಿಸಿ. ಹಳೆಯ ಮಿತ್ರರ ಭೇಟಿ ಸಂತಸ ತರಲಿದೆ.
ಕುಂಭ ರಾಶಿ
ಹಣಕಾಸು ವ್ಯವಹಾರಗಳಲ್ಲಿ ವಿವೇಕದಿಂದ ವರ್ತಿಸಿ, ತಪ್ಪಾದ ನಿರ್ಧಾರಗಳು ನಷ್ಟಕ್ಕೆ ದಾರಿಮಾಡಿಕೊಡುತ್ತವೆ. ಕುಟುಂಬದಲ್ಲಿ ಹಿರಿಯರ ಸಲಹೆ ಮಾರ್ಗದರ್ಶನಗಳನ್ನು ಗೌರವಿಸಿ. ಸ್ನೇಹಿತರೊಂದಿಗಿನ ಚರ್ಚೆಗಳಲ್ಲಿ ನಿಮ್ಮ ನಿಲುವು ಸ್ಪಷ್ಟವಾಗಿರಲಿ. ಪೋಷಕರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಒಂದೇ ರೀತಿಯ ದಿನಚರಿಯಿಂದ ಕೊಂಚ ಬೇಸರ ಉಂಟಾಗಬಹುದು.
ಮೀನ ರಾಶಿ
ಪ್ರೀತಿಪಾತ್ರರೊಂದಿಗೆ ಮಧುರ ಕ್ಷಣಗಳನ್ನು ಕಳೆಯುವಿರಿ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಪ್ರತಿಭೆ ಪ್ರದರ್ಶಿಸಲು ಇದು ಸೂಕ್ತ ಸಮಯ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ದಿನಚರಿಯಲ್ಲಿ ಕೊಂಚ ಬದಲಾವಣೆಯಾಗಬಹುದು. ನಿಮ್ಮ ವ್ಯವಹಾರಗಳನ್ನು ಕಾನೂನುಬದ್ಧವಾಗಿ ನಡೆಸುವುದು ಒಳಿತು. ಅನಗತ್ಯ ಕೋಪದ ಮೇಲೆ ನಿಯಂತ್ರಣವಿರಲಿ.