20ಏಪ್ರಿಲ್ : ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಾದ ಇಂದು (ಸೋಮವಾರ), ದಿನ ಭವಿಷ್ಯ ಹೇಗಿದೆ? ಮೃಗಶಿರಾ ನಕ್ಷತ್ರದ ಪ್ರಭಾವದಿಂದ 12 ರಾಶಿಗಳ ಮೇಲೆ ಉಂಟಾಗುವ ಬದಲಾವಣೆಗಳೇನು? ಇಲ್ಲಿದೆ ಇಂದಿನ ಸಂಪೂರ್ಣ ದಿನಫಲ.
ದಿನದ ಪಂಚಾಂಗ
- ಸಂವತ್ಸರ: ಪರಾಭವ | ಋತು: ವಸಂತ
- ಮಾಸ: ಚಾಂದ್ರಮಾಸ – ವೈಶಾಖ, ಸೌರಮಾಸ – ಮೇಷ
- ತಿಥಿ: ತೃತೀಯಾ | ವಾರ: ಸೋಮವಾರ
- ಶುಭ ಕಾಲ: ಸೂರ್ಯೋದಯ 06:09 AM ರಿಂದ ಸೂರ್ಯಾಸ್ತ 06:37 PM ವರೆಗೆ.
- ಅಶುಭ ಕಾಲ (ರಾಹುಕಾಲ): ಸಂಜೆ 05:04 ರಿಂದ 06:37 ರವರೆಗೆ.
ದ್ವಾದಶ ರಾಶಿಗಳ ಫಲಫಲ
ಮೇಷ: ಇಂದು ಅನಿರೀಕ್ಷಿತ ಆಮಂತ್ರಣಗಳು ನಿಮ್ಮಲ್ಲಿ ಉತ್ಸಾಹ ಮೂಡಿಸಲಿವೆ. ಮಕ್ಕಳ ಏಳಿಗೆಗಾಗಿ ಧನ ವ್ಯಯ ಮಾಡುವ ಸಾಧ್ಯತೆ ಇದೆ. ಮಾತಿನ ಮೇಲೆ ನಿಗಾ ಇರಲಿ, ಇಲ್ಲದಿದ್ದರೆ ನಿಮ್ಮ ಮಾತೇ ನಿಮಗೆ ಮುಳುವಾಗಬಹುದು. ಶಿಸ್ತಿನ ಜೀವನ ರೂಢಿಸಿಕೊಳ್ಳಿ.
ವೃಷಭ: ಅನಾರೋಗ್ಯದ ಕಾರಣ ಕಿರಿಕಿರಿ ಉಂಟಾಗಬಹುದು. ದ್ವೇಷ ಭಾವನೆಯನ್ನು ಬಿಟ್ಟುಬಿಡಿ, ಇದು ನಿಮ್ಮ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ವ್ಯಾಪಾರದಲ್ಲಿ ಹಾನಿಯಾಗುವ ಸಂಭವವಿದ್ದು, ಹಣಕಾಸಿನ ನಿರ್ವಹಣೆಯಲ್ಲಿ ಜಾಣತನ ತೋರಿ.
ಮಿಥುನ: ಹಳೆಯ ಸ್ನೇಹಿತರ ಭೇಟಿ ಮತ್ತು ಪ್ರವಾಸದ ಯೋಜನೆ ಮನಸ್ಸಿಗೆ ಮುದ ನೀಡಲಿದೆ. ಆಪತ್ಕಾಲಕ್ಕೆ ಕೂಡಿಟ್ಟ ಹಣ ನೆರವಾಗಲಿದೆ. ಪ್ರೇಮ ವಿಚಾರದಲ್ಲಿ ಸಂಯಮವಿರಲಿ ಮತ್ತು ಹಿರಿಯರ ಮಾರ್ಗದರ್ಶನವನ್ನು ಅಲಕ್ಷಿಸಬೇಡಿ.
ಕರ್ಕಾಟಕ: ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ. ಕುಟುಂಬದ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ. ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಸಂಗಾತಿಯೊಂದಿಗೆ ಸುಂದರ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಯೋಗವಿದೆ.
ಸಿಂಹ: ಹೂಡಿಕೆ ಮಾಡುವ ಮುನ್ನ ಎಚ್ಚರವಿರಲಿ. ಮಕ್ಕಳೊಂದಿಗೆ ಕಾಲ ಕಳೆಯುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ನಿಮ್ಮ ಕೆಲಸಗಳು ಸುಗಮವಾಗಲಿವೆ. ಆದರೆ ಆಸ್ತಿ ವ್ಯವಹಾರದಲ್ಲಿ ತಜ್ಞರ ಸಲಹೆ ಪಡೆಯುವುದು ಉತ್ತಮ.
ಕನ್ಯಾ: ಸೃಜನಾತ್ಮಕ ಕೆಲಸಗಳಿಗೆ ಇಂದು ಶುಭ ದಿನ. ಭೂಮಿ ಅಥವಾ ಆಸ್ತಿ ಮೇಲಿನ ಹೂಡಿಕೆ ಲಾಭ ನೀಡಲಿದೆ. ಕುಟುಂಬದ ಸಮ್ಮತಿಯೊಂದಿಗೆ ಪ್ರೇಮ ವಿವಾಹದ ಹಾದಿ ಸುಗಮವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗುವಿರಿ.
ತುಲಾ: ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎರಡು ಬಾರಿ ಯೋಚಿಸಿ. ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ವಾಹನ ಚಾಲನೆಯಲ್ಲಿ ಜಾಗರೂಕತೆ ಅತ್ಯಗತ್ಯ. ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ.
ವೃಶ್ಚಿಕ: ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಹಳೆಯ ಗೆಳೆಯರ ಮಿಲನವಾಗಲಿದೆ. ನಿಮ್ಮ ಶಿಸ್ತುಬದ್ಧ ಕೆಲಸಗಳು ಯಶಸ್ಸಿಗೆ ದಾರಿಯಾಗಲಿವೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದ್ದು, ಕಠಿಣ ಸಂದರ್ಭಗಳನ್ನು ಧೈರ್ಯದಿಂದ ಎದುರಿಸುವಿರಿ.
ಧನು: ವಿವಿಧ ಮೂಲಗಳಿಂದ ಧನಲಾಭವಾಗಲಿದೆ. ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚಲಿದೆ. ಕಠಿಣ ಶ್ರಮಕ್ಕೆ ಅಂತಿಮವಾಗಿ ಪ್ರತಿಫಲ ಸಿಗುವ ಸಮಯ ಬಂದಿದೆ. ಯಾರೊಂದಿಗೂ ಅನಗತ್ಯವಾಗಿ ಮನಸ್ತಾಪ ಮಾಡಿಕೊಳ್ಳಬೇಡಿ.
ಮಕರ: ಸಣ್ಣ ಬದಲಾವಣೆಗಳು ಭವಿಷ್ಯದ ದೊಡ್ಡ ಯಶಸ್ಸಿಗೆ ಮುನ್ನುಡಿ ಬರೆಯಲಿವೆ. ಸಂಗಾತಿಯೊಂದಿಗೆ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಲಾಭದಾಯಕವಾಗಿರಲಿದೆ.
ಕುಂಭ: ಒತ್ತಡದ ನಡುವೆಯೂ ಇತರರಿಗೆ ಸಹಾಯ ಮಾಡುವ ಗುಣ ನಿಮ್ಮ ಮೌಲ್ಯವನ್ನು ಹೆಚ್ಚಿಸಲಿದೆ. ಹೂಡಿಕೆಗೆ ಇಂದು ಸೂಕ್ತ ದಿನ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಗೊಂದಲಗಳಿಗೆ ಕಿವಿಗೊಡದೆ ನಿಮ್ಮ ಗುರಿಯತ್ತ ಗಮನಹರಿಸಿ.
ಮೀನ: ಉದ್ಯೋಗದಲ್ಲಿ ಮೇಲಧಿಕಾರಿಗಳ ಒತ್ತಡವಿರಲಿದೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ದಾಂಪತ್ಯದಲ್ಲಿ ಪ್ರೀತಿ ಹೆಚ್ಚಲಿದೆ. ನಿಮ್ಮ ಅಹಂಕಾರವನ್ನು ಬದಿಗಿಟ್ಟು ಕೆಲಸದಲ್ಲಿ ಶ್ರದ್ಧೆ ತೋರಿದರೆ ಖಂಡಿತ ಯಶಸ್ಸು ನಿಮ್ಮದಾಗಲಿದೆ.