ಹಿಂದುಳಿದ ವರ್ಗಗಳ ಒಗ್ಗಟ್ಟಿನಿಂದ ಕಾಂಗ್ರೆಸ್ ಬಲಪಡಿಸೋಣ: ಡಿ.ಟಿ.ಶ್ರೀನಿವಾಸ್.

ಚಿತ್ರದುರ್ಗ ಮೇ. 19

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಿಜವಾಗಿಯೂ ಪಕ್ಷವನ್ನು ನೆಚ್ಚಿಕೊಂಡಿರುವವರು ಅಧಿಕಾರ ಇಲ್ಲದಾಗಲೂ ಪಕ್ಷದ ಜೊತೆ ಇರುತ್ತಾರೆ. ಪಕ್ಷದಲ್ಲಿ ಎಲ್ಲಾ ಅಧಿಕಾರ ಅನುಭವಿಸಿದವರು ಅಧಿಕಾರ ಕಳೆದುಕೊಂಡಾಗ ಪಕ್ಷದಿಂದ ದೂರ ಸರಿಯುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಅವರುನ್ನು ಆತ್ಮೀಯವಾಗಿ ಬರಮಾಡಿಕೊಂಡ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ತದ ನಂತರ ಓಬಿಸಿ ಘಟಕ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳು ಪಕ್ಷದಲ್ಲಿ ಗಟ್ಟಿಯಾಗಿದ್ದರೆ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ. ಛಿದ್ರವಾದರೆ ಏನು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯ ಬೇಕಿದೆ. ನಿಮ್ಮ ಕಾರ್ಯ ಚಟುವಟಿಕೆಗಳನ್ನು ಪಕ್ಷ ನಿಮ್ಮನ್ನು ಗಮನಿಸುತ್ತಿರುತ್ತದೆ. ಆಶಾಭಾವನೆಯನ್ನಿಟ್ಟುಕೊಂಡಿದೆ. ಪಕ್ಷಕ್ಕೆ ಬೆನ್ನೆಲು ಬಾಗಿರುವವರನ್ನು ಮುಂದಿನ ದಿನಮಾನದಲ್ಲಿ ಗೌರವದಿಂದ ನಡೆಸಿಕೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದರು.

ಚುನಾವಣಾ ಬೂತ್‍ಗಳಲ್ಲಿ ಹನ್ನೊಂದರಿಂದ ಹದಿನೈದು ಮಂದಿಯನ್ನು ಗುರುತಿಸಿ ಸಮಿತಿಯನ್ನು ಮಾಡಬೇಕಿದೆ ಇದರಲ್ಲಿ ಎಲ್ಲಾ ವರ್ಗದವರು ಇರಬೇಕು ಹಾಗೂ ಮೂರರಿಂದ ನಾಲ್ವರು ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಬೇಕು. ಜಿಲ್ಲಾ ಅಧ್ಯಕ್ಚರರು ಮಾತ್ರ ಸಕ್ರಿಯವಾಗಿ ಇದ್ದರೆ ಸಾಲದು ತಾಲ್ಲೂಕು ಅಧ್ಯಕ್ಷರುಗಳು ಸಹಾ ಸಕ್ರಿಯವಾಗಿ ಇರುವುದರ ಮೂಲಕ ಒಬಿಸಿ ಘಟಕವನ್ನು ಸದೃಢವಾಗಿ ಇರಬೇಕಿದೆ ಇದರಿಂದ ಜಿಲ್ಲೆಯಲ್ಲಿ ಯಾರು ಕ್ರಿಯಾಶೀಲರಾಗಿರುತ್ತಾರೆನ್ನುವುದು ನನಗೆ ಗೊತ್ತಾಗುತ್ತದೆ. ಮುಂದಿನ ಹಲವಾಎರು ದಿನಗಳಲ್ಲಿ ರಾಜ್ಯ ಪ್ರವಾಸ ಮಾಡುವುದರ ಮೂಲಕ ಪಕ್ಷವನ್ನು ಸಂಘಟಿಸುವ ಕಾರ್ಯವನ್ನು ಮಾಡಲಾಗುವುದು ತದ ನಂತರ ಓಬಿಸಿ ರಾಜ್ಯಾಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕಾರ ಮಾಡಲಾಗುವುದು ಎಂದರು.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ಯ ಅಪ ಪ್ರಚಾರ, ಸುಳ್ಳು, ಟೀಕೆಗಳಿಗೆ ಕಾಂಗ್ರೆಸ್ನವರು ಪ್ರತಿಕ್ರಿಯಿಸುವುದನ್ನು ಕಲಿಯಬೇಕು. 2029 ರಲ್ಲಿ ಬಿಜೆಪಿ.ಯನ್ನು ಕಿತ್ತೆಸೆದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ನನಗೆ ಪಕ್ಷ ಕಟ್ಟುವ ಜವಾಬ್ದಾರಿಯನ್ನು ಹೈಕಮಾಂಡ್ ನನಗೆ ವಹಿಸಿದೆ. ಎಲ್ಲಾ ಉಪ ಜಾತಿಗಳನ್ನು ಜೊತೆಗೆ ಕರೆದುಕೊಂಡು ಸಂಘಟಿಸಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.

ಪ್ರವರ್ಗ ಜಾತಿಗಳ ಒಕ್ಕೂಟ ಮಾಡಿಕೊಂಡು ರಾಜ್ಯ ಸುತ್ತಾಡಿ ಹತ್ತು ಲಕ್ಷ ಸದಸ್ಯತ್ವ ನೊಂದಾಯಿಸಿದ್ದೇನೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮೂರರಿಂದ ನಾಲ್ಕು ಸಾವಿರ ಜನ ಹಿಂದುಳಿದ ವರ್ಗಗಳ ವಿಭಾಗಕ್ಕೆ ಬರಬೇಕು. ಓಬಿಸಿಯಲ್ಲಿ ಒಡಕಾಗುತ್ತಿದೆ. ಯಾವ ಸಮಾಜ ಗಟ್ಟಿಯಾಗುತ್ತಿದೆಯೋ ಅದನ್ನು ಛಿದ್ರಗೊಳಿಸುವ ಕೆಲಸವಾಗುತ್ತದೆ. ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಒಗ್ಗಟ್ಟಿನಿಂದ ಇರಬೇಕಿದೆ ಎಂದ ಅವರು ತಳ ಹಂತದಲ್ಲಿರುವವರನ್ನು ಮೇಲಕ್ಕೆತ್ತುವ ಕೆಲಸ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಹತ್ತು ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಜನತೆಗೆ ಕೊಟ್ಟಿದೆ. ಅವಕಾಶ ವಂಚಿತ ಸಮಾಜವನ್ನು ಮುಂದೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಓಬಿಸಿ. ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡಬೇಕೆಂದು ತಿಳಿಸಿದರು.

ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಕುರುಬ ಮತುನ ಯಾದವ್ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಇದೆ ಇದರ ಜೊತೆಯಲ್ಲಿ ಇತರೆ ಸಮುದಾಯಗಳನ್ನು ಸಹಾ ಜೋತೆಯಲ್ಲಿ ಕರೆದುಕೊಂಡು ಹೋÀಗುವ ಕಾರ್ಯವನ್ನು ಮಾಡಬೇಕಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ಮುದಾಸಿರ್ ನವಾಜ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತ ನಂದಿನಿಗೌಡ, ಜಿ.ವಿ.ಮಧುಗೌಡ ಗಂಜಿಗಟ್ಟೆ, ಲಕ್ಷ್ಮಿಕಾಂತ್, ನ್ಯಾಯವಾದಿ ಸುದರ್ಶನ್, ಗ್ಯಾರೆಂಟಿ ಯೋಜನೆ ಗಳ ಅಧ್ಯಕ್ಷ ಆರ್.ಶಿವಣ್ಣ, ಓಬಿಸಿ. ರಾಜ್ಯ ಉಪಾಧ್ಯಕ್ಷರುಗಳಾದ ಕೃಷ್ಣಮೂರ್ತಿ, ಟಿ.ಸ್ವಾಮಿ, ಕಾರ್ಯದರ್ಶಿ ಜೆ.ಎನ್.ಜಗದೀಶ್, ಡಾ.ವಿಜಯರಾಘವೇಂದ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *