ಚಿತ್ರದುರ್ಗ| ಮೇ 31ರಂದು ಸಂತೋಷ್ ಲಾಡ್ ಫೌಂಡೇಶನ್‌ನಿಂದ ‘ಬುದ್ಧ, ಬಸವ ಮತ್ತು ಅಂಬೇಡ್ಕರ್’ ವಿಚಾರ ಸಂಕಿರಣ.

ಚಿತ್ರದುರ್ಗ ಮೇ. 29

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸಂತೋಷ್ ಲಾಡ್ ಫೌಂಡೇಶನ್-ಧಾರವಾಡ ಇದರ ವತಿಯಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ್ ಒಂದು ದಿನದ ವಿಚಾರ ಸಂಕಿರಣವನ್ನು ಮೇ.31ರ ಶನಿವಾರ ಬೆಳಿಗ್ಗೆ 8.30 ಗಂಟೆಯಿಂದ ಸಂಜೆ 5.30 ವರೆಗೆ ಚಳ್ಳಕೆರೆ ರಸ್ತೆಯ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂತೋಷ್ ಲಾಡ್ ಫೌಂಡೇಶನ್‍ನ ಸಂಚಾಲಕರಾದ ಕವಿತಾ ರೆಡ್ಡಿ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಧೀರ್ಘವಾದ ಮಾನವ ಜನಾಂಗ ಮತ್ತು ಅದರ ಅಭಿವೃದ್ಧಿಯ ಇತಿಹಾಸದಲ್ಲಿ ಅನೇಕ ಸಮಾಜಗಳು ಮತ್ತು ಉಪ ಸಮಾಜಗಳು ಅನೇಕ ತರಹದ ತಾರತಮ್ಯಗಳಿಗೆ ಮತ್ತು ದಬ್ಬಾಳಿಕೆಗೆ ಒಳಗಾಗಿದ್ದು ಇತಿಹಾಸ ಹೇಳುತ್ತದೆ. ಅಸಮಾನತೆಯು ಜನರ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಅವರ ಮೂಲಭೂತ ಹಕ್ಕುಗಳನ್ನು ಮತ್ತು ಅವಶ್ಯಕತೆಗಳನ್ನು ಕಸಿದುಕೊಂಡಾಗ ವಿಶೇಷ ಮತ್ತು ಬಲಿಷ್ಠ ಗುಣಗಳುಳ್ಳ ಅನೇಕ ಮಹಾಪುರುಷರು ಮತ್ತು ಮಹಾಮಹಿಳೆಯರು ಅಸಮಾನತೆಯ ವಿರುದ್ಧ ಸಿಡಿದೆದ್ದು ಜಾತಿ, ಮತ, ಅಂತಸ್ತು, ಲಿಂಗ ಮತ್ತು ಇತರ ತಾರತಮ್ಯಗಳ ವಿರುದ್ಧ ಹೋರಾಡಿ ಹೊಸ ಸಮಾಜ ನಿರ್ಮಿಸಿ ಯಶಸ್ವಿಯಾಗಿ ಮುನ್ನಡಿಸಿ ಇತಿಹಾಸ ಕಂಡಿದೆ ಎಂದರು.

ಭಾರತದಲ್ಲಿ ಅಸಮಾನತೆ ಮತ್ತು ತಾರತಮ್ಯಗಳ ವಿರುದ್ಧ ಹೋರಾಡಿದ ಮಹಾ ನಾಯಕರಲ್ಲಿ ಮೂವರು ಪ್ರಮುಖವಾಗಿ ನಿಂತವರು ಭಗವಾನ್ ಬುದ್ಧ, ಬಸವೇಶ್ವರರು ಮತ್ತು ಬಿ. ಆರ್ ಅಂಬೇಡ್ಕರ್. ಅವರು ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಸಮಾಜಗಳಲ್ಲಿ ಹೋರಾಡಿದವರು. ಶಾಂತಿ, ಘನತೆ, ಗೌರವ, ದಯೆ, ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ನೆಲೆಗಟ್ಟಿನಲ್ಲಿ ನಿಂತು ಹೊಸ ಸಮಾಜವನ್ನು ಸೃಷ್ಟಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚೌಕಟ್ಟುಗಳನ್ನು ಗಟ್ಟಿಗೊಳಿಸಿ ಸಮಾಜವನ್ನು ಮುನ್ನಡೆಸಿದರು. ಇಂದು, ಭಾರತದಲ್ಲಿ ಅಷ್ಟೇ ಅಲ್ಲ, ಜಗತ್ತಿನ ಇತರ ಭಾಗಗಳಲ್ಲಿ ಕೂಡ ಜಾತೀಯತೆ, ವರ್ಣಭೇಧ, ಧಾರ್ಮಿಕ ಮೂಲಭೂತವಾದ, ಉಗ್ರವಾದ ಮತ್ತು ಎತ್ತು ಅತಿ ಹಿಂಸಾತ್ಮಕತೆಯು ಸಮಾಜದ ಸಾಮಾಜಿಕ ರಚನೆಯನ್ನು ಅಭದ್ರಗೊಳಿಸುತ್ತಿವೆ ಎಂದು ದೂರಿದರು.

ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ್ ಮಾತನಾಡಿ, ಇಂದಿನ ಯುವ ಪಿಳೀಗೆಗೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ರವರ ಬಗ್ಗೆ ತಿಳಿಸುವುದರ ಅಗತ್ಯವಾಗಿದೆ, ಈಗಾಗಲೇ ಈ ರೀತಿಯಾದ ಮೂರು ಕಾರ್ಯಕ್ರಮಗಳನ್ನು ಮಾಡಲಾಗಿದೆ ಇದು ನಾಲ್ಕನೇ ಕಾರ್ಯಕ್ರಮವಾಗಿದೆ, ಈ ಮೂರು ಜನ ಉತ್ತಮವಾದ ಸಂದೇಶಗಳನ್ನು ನಮಗೆ ನೀಡಿದ್ದಾರೆ ಅದರಂತೆ ನಡೆಯಬೇಕಿದೆ, ಇವರು ಕೇವಲ ತಮ್ಮ ಸಮುದಾಯಕ್ಕೆ ಮಾತ್ರವೇ ಸಂದೇಶವನ್ನು ನೀಡಲಿಲ್ಲ ಎಲ್ಲ ಸಮುದಾಯಗಳಿಗೂ ಸಹಾ ನೀಡಿದ್ದಾರೆ. ಇದನ್ನು ಎಲ್ಲರು ಸಹಾ ಬಳಕೆ ಮಾಡಬೇಕಿದೆ, ಬೇರೆ ಸಮುದಾಯದವರಿಗೂ ಸಹಾ ಇದರ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.

ಸಂತೋಷ್ ಲಾಡ್ ಫೌಂಡೇಶನ್‍ನ ಸ್ವಯಂ ಸೇವಕರಾದ ಡಾ. ಸಂದೀಪ್ ಮಾತನಾಡಿ ಮೇ. 31 ರಂದು ನಡೆಯಲಿರುವ ಬುದ್ಧ, ಬಸವ ಮತ್ತು ಅಂಬೇಡ್ಕರ್ ಒಂದು ದಿನದ ವಿಚಾರ ಸಂಕಿರಣದಲ್ಲಿ ನಾಡಿನ ವಿವಿಧ ವಿದ್ವಾಂಸರು, ಸಾಹಿತಿಗಳು ಚಿಂತಕರು ಉಪನ್ಯಾಸವನ್ನು ನೀಡಲಿದ್ದಾರೆ. ಇದ್ದಲ್ಲದೆ ನಾಡಿನ ವಿವಿಧ ಮಠಾಧೀಶೀರು ದಿವ್ಯಸಾನೀಧ್ಯವನ್ನು ವಹಿಸಲಿದ್ದಾರೆ. ಬುದ್ದನ ಅಷ್ಠಾಂಗ ಮಾರ್ಗ ಒಂದು ವೈಜ್ಞಾನಿಕ ನೋಟದ ಬಗ್ಗೆ ಡಾ.ಸಂಜೀವ ಕುಲಕರ್ಣಿ, ಬುದ್ದನ ಧಮ್ಮ ಮತ್ತು ಮಹಿಳೆಯ ಬಗ್ಗೆ ಡಾ.ಅನುಸೂಯ ಕಾಂಬಳೆ, ಬಸವಣ್ಣನವರ ಅನನ್ಯ ಸಾಧನೆಗಳ ಬಗ್ಗೆ ರಂಜಾನ ದರ್ಗಾ, ಸಮಾನತೆ ಮತ್ತು ಅಂತರ್ಜಾತಿ ವಿವಾಹ ಬಸವಣ್ಣ ಉತ್ತುಂಗ ಸಾಧನೆಯ ಬಗ್ಗೆ ಡಾ.ವಿನಯ ವಕ್ಕುಂದ, ಡಾ.ಬಿ.ಆರ್. ಅಂಬೇಡ್ಕರ್ ಅವರ ಪಯಣ ಸಂಕಲ್ಪದಿಂದ ಸಂವಿಧಾನದವರೆಗೆ ಬಗ್ಗೆ ಡಾ.ಅಪ್ಪಗೆರೆ ಸೋಮಶೇಖರ್ ಹಾಗೂ ಡಾ.ಬಿ. ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳು 21ನೇ ಶತಮಾನದ ಭಾರತದಲ್ಲಿ ಪ್ರಸ್ತತತೆ ಬಗ್ಗೆ ಡಾ.ಜೆ ಸೋಮಶೇಖರ್ ಗೋಷ್ಟಿಗಳಲ್ಲಿ ಮಾತನಾಡಲಿದ್ದಾರೆ. ಎಂದರು.

ಗೋಷ್ಟಿಯಲ್ಲಿ ಶಿವಾನಂದ ಶ್ರೀಗಳು, ಬಸವಮಹಾಂತ ಶ್ರೀಗಳು ಹಾಗೂ ಶಾಂತವೀರ ಶ್ರೀಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *