ರಾಜಧಾನಿ ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ಪ್ರತಿಷ್ಠಿತ ‘ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ದಲ್ಲಿ (KIMSH) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ರಾಜ್ಯ ಒಕ್ಕಲಿಗರ ಸಂಘದ ಆಡಳಿತಕ್ಕೆ ಒಳಪಡುವ ಈ ಆಸ್ಪತ್ರೆಯಲ್ಲಿ ಒಟ್ಟು 27 ತಾಂತ್ರಿಕ ಹಾಗೂ ಕ್ಲರ್ಕ್ (ಬೋಧಕೇತರ) ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ
ವಿವಿಧ ವಿಭಾಗಗಳಲ್ಲಿ ಅಗತ್ಯವಿರುವ ಹುದ್ದೆಗಳು ಹಾಗೂ ಅದಕ್ಕೆ ಬೇಕಾದ ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿ ಇಲ್ಲಿದೆ:
- ಇಸಿಜಿ ಟೆಕ್ನಿಷಿಯನ್ (01 ಹುದ್ದೆ): B.Sc Echo ಅಥವಾ Cardiology ಪದವಿ ಪೂರ್ಣಗೊಳಿಸಿರಬೇಕು.
- ಬೆಡ್ ಸೈಡ್ ಲ್ಯಾಬ್ ಟೆಕ್ನಿಷಿಯನ್ (08 ಹುದ್ದೆಗಳು): ಲ್ಯಾಬ್ ಟೆಕ್ನಿಷಿಯನ್ ವಿಭಾಗದಲ್ಲಿ B.Sc ಅಥವಾ M.Sc ಮುಗಿಸಿರಬೇಕು.
- ಮ್ಯಾನಿಫೋಲ್ಡ್ ಆಪರೇಟರ್ಸ್ (04 ಹುದ್ದೆಗಳು): ಮ್ಯಾನಿಫೋಲ್ಡ್ ಆಪರೇಟರ್ ಸರ್ಟಿಫಿಕೇಟ್ ಕೋರ್ಸ್ (Certificate Course) ಕಡ್ಡಾಯ.
- ಇಇಜಿ / ಇಎನ್ಎಮ್ಜಿ ಟೆಕ್ನಿಷಿಯನ್ (01 ಹುದ್ದೆ): B.Sc EEG Technician ಅಥವಾ Neurophysiology ಯಲ್ಲಿ ಅರ್ಹತೆ ಹೊಂದಿರಬೇಕು.
- ಒಟಿ / ಅನೆಸ್ಥೇಷಿಯಾ ಟೆಕ್ನಿಷಿಯನ್ (04 ಹುದ್ದೆಗಳು): B.Sc OT Technician ಓದಿರಬೇಕು.
- ಕೋಡಿಂಗ್ ಕ್ಲರ್ಕ್ (03 ಹುದ್ದೆಗಳು): ಯಾವುದೇ ಡಿಪ್ಲೊಮಾ ಪದವಿ ಜೊತೆಗೆ ಮೆಡಿಕಲ್ ಕೋಡಿಂಗ್ನಲ್ಲಿ ಕನಿಷ್ಠ 5 ವರ್ಷಗಳ ಸೇವಾ ಅನುಭವ ಇರಬೇಕು.
- ರೆಕಾರ್ಡ್ ಕ್ಲರ್ಕ್ (06 ಹುದ್ದೆಗಳು): ಯಾವುದೇ ವಿಷಯದಲ್ಲಿ ಪದವಿ (Degree) ಮುಗಿಸಿರಬೇಕು ಮತ್ತು ಮೆಡಿಕಲ್ ರೆಕಾರ್ಡ್ ಮ್ಯಾನೇಜ್ಮೆಂಟ್ನಲ್ಲಿ 5 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ ಹಾಗೂ ಆಯ್ಕೆ ಪ್ರಕ್ರಿಯೆ
- ವಯೋಮಿತಿ: ಮ್ಯಾನಿಫೋಲ್ಡ್ ಆಪರೇಟರ್ ಹುದ್ದೆಯನ್ನು ಹೊರತುಪಡಿಸಿ, ಅರ್ಜಿ ಸಲ್ಲಿಸುವ ಉಳಿದೆಲ್ಲಾ ಅಭ್ಯರ್ಥಿಗಳ ವಯಸ್ಸು 22 ರಿಂದ 30 ವರ್ಷಗಳ ಒಳಗಿರಬೇಕು.
- ಆಯ್ಕೆ ವಿಧಾನ: ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಶಾರ್ಟ್ಲಿಸ್ಟ್ ಆದ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಇ-ಮೇಲ್ ಅಥವಾ ದೂರವಾಣಿ ಕರೆ ಮೂಲಕ ನೇರ ಸಂದರ್ಶನದ (Interview) ದಿನಾಂಕ ಮತ್ತು ಸಮಯವನ್ನು ತಿಳಿಸಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತರು ತಮ್ಮ ಪರಿಪೂರ್ಣ ಸ್ವ-ವಿವರ (Bio-data) ಹಾಗೂ ಎಲ್ಲಾ ಶೈಕ್ಷಣಿಕ ಮತ್ತು ಅನುಭವ ಪ್ರಮಾಣಪತ್ರಗಳ ದೃಢೀಕೃತ ಜೆರಾಕ್ಸ್ ಪ್ರತಿಗಳನ್ನು (Attested Copies) ಲಗತ್ತಿಸಿ ಖುದ್ದಾಗಿ ಕಚೇರಿಗೆ ಸಲ್ಲಿಸಬೇಕಾಗುತ್ತದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 22, ಸಂಜೆ 05:00 ಗಂಟೆಯೊಳಗೆ.
- ಅರ್ಜಿ ಸಲ್ಲಿಸಬೇಕಾದ ವಿಳಾಸ: ಆಡಳಿತ ಕಚೇರಿ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (KIMSH), ಕೆ.ಆರ್. ರಸ್ತೆ, ವಿ.ವಿ.ಪುರಂ, ಬೆಂಗಳೂರು – 560 004.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j