ಪಾಟ್ನಾ: ಕಳ್ಳಬಟ್ಟಿ ಕುಡಿದು 65ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುತ್ತಲೇ ಇದೆ. ಇದು ಬಿಹಾರದ ಸಿಎಂ ಅವರ ಕೋಪವನ್ನು ಕೆರಳಿಸಿದೆ. ಸಿಎಂ ನಿತೀಶ್ ಕುಮಾರ್ ಈ ಘಟನೆ ಬಗ್ಗೆ ಕಳ್ಳಬಟ್ಟಿ ಕುಡಿದರೆ ನೀವೂ ಸಾಯ್ತೀರಿ ಎಂದಿದ್ದಾರೆ.
ಬಿಹಾರದಲ್ಲಿ ಜೆಡಿಯೂ ಮತ್ತು ಆರ್ಜೆಡಿಯ ಸಮ್ಮಿಶ್ರ ಸರ್ಕಾರವಿದೆ. ಸಮ್ಮಿಶ್ರ ಸರ್ಕಾರದ ವಿರುದ್ದ ಬಿಜೆಪಿ ಪಕ್ಷ ಹರಿಹಾಯ್ದಿದೆ. ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದೆ. ಮದ್ಯಪಾನ ವಿರುದ್ಧ ಕಾನೂನನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ. 2016ರಿಂದ ಮದ್ಯಪಾನದ ಮೇಲೆ ನಿಷೇಧ ಏರಿದ ಮೇಲೆ ಕಳ್ಳಬಟ್ಟಿ ದಂಧೆ ಹೆಚ್ಚಾಗಿದೆ. ಹೀಗಾಗಿ ಈ ರೀತಿಯ ಸಾವು ಸಂಭವಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ ಬಿಜೆಪಿ ನಾಯಕರು.
ಇನ್ನು ವಿಧಾನಸಭೆಯಲ್ಲಿ ಈ ಘಟನೆ ಬಗ್ಗೆ ಮಾತನಾಡಿದ ಸಿಎಂ ನಿತೀಶ್ ಕುಮಾರ್, ಮದ್ಯಪಾನ ನಿಷೇಧ ಮಾಡಿದಾಗಿನಿಂದ ಈ ರೀತಿಯ ಘಟನೆಗಳು ಕಡಿಮೆಯಾಗಿದೆ. ಸರ್ಕಾರದಿಂದ ಮದ್ಯಪಾನ ನಿಷೇಧ ಮಾಡಿದ ಮೇಲೂ ಕಳ್ಳಬಟ್ಟಿ ಸೇವಿಸಿ ಸಾವನ್ನಪ್ಪುತ್ತಿರುವವರಿಗೆ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರವನ್ನು ನೀಡುವುದಿಲ್ಲ ಎಂದಿದ್ದಾರೆ.
The post ಕಳ್ಳಬಟ್ಟಿ ಕುಡಿದು 65ಕ್ಕೂ ಹೆಚ್ಚು ಜನ ಸಾವು : ಬಿಹಾರದ ಸಿಎಂ ಕೊಟ್ಟ ಎಚ್ಚರಿಕೆ ಏನು..? first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/QgWPcL5
via IFTTT