ಮಹಿಳಾ ಟಿ20 ಏಷ್ಯಾಕಪ್ 2026: ಸೆಮಿಫೈನಲ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಭಾರತಕ್ಕೆ ಇಂದು ಹಾಂಗ್ ಕಾಂಗ್ ಸವಾಲು

ನಿಖರತೆಗೆ ಮತ್ತೊಂದು ಹೆಸರು – ಸಮಗ್ರ ಸುದ್ದಿ

ದುಬೈನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು 94 ರನ್‌ಗಳ ಬೃಹತ್ ಅಂತರದಿಂದ ಮಣಿಸಿರುವ ಹರ್ಮನ್‌ಪ್ರೀತ್ ಕೌರ್ ಪಡೆ, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಹಾಂಗ್ ಕಾಂಗ್-ಚೀನಾ ತಂಡವನ್ನು ಎದುರಿಸಲು ಸಜ್ಜಾಗಿದೆ.

ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ. ‘ಎ’ ಗುಂಪಿನಲ್ಲಿರುವ ಭಾರತ ತಂಡವು ಸದ್ಯ +4.700 ನೆಟ್ ರನ್ ರೇಟ್ ಹಾಗೂ 2 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯುತ್ತಿದೆ.

ಪಂದ್ಯದ ಪ್ರಮುಖ ವಿವರಗಳು:

  • ಯಾವಾಗ? 3 ಸೆಪ್ಟೆಂಬರ್ 2026, ಗುರುವಾರ
  • ಎಲ್ಲಿ? ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ
  • ಸಮಯ: ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ (ಟಾಸ್ ಪ್ರಕ್ರಿಯೆ ಸಂಜೆ 7:30 ಕ್ಕೆ ನಡೆಯಲಿದೆ)
  • ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ಟೆನ್ 1, ಸೋನಿ ಸ್ಪೋರ್ಟ್ಸ್ ಟೆನ್ 3 ಮತ್ತು ಸೋನಿ ಸ್ಪೋರ್ಟ್ಸ್ ಟೆನ್ 4 ಚಾನೆಲ್‌ಗಳಲ್ಲಿ ವೀಕ್ಷಿಸಬಹುದು.

ಕಣಕ್ಕಿಳಿಯಲಿರುವ ಉಭಯ ತಂಡಗಳ ವಿವರ:

ಭಾರತ ಮಹಿಳಾ ಕ್ರಿಕೆಟ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಜಿ ಕಮಲಿನಿ, ಅರುಂಧತಿ ರೆಡ್ಡಿ, ಪ್ರೇಮಾ ರಾವತ್, ರಾಧಾ ಯಾದವ್, ಶ್ರೀ ಚರಣಿ, ರೇಣುಕಾ ಠಾಕೂರ್, ನಂದನಿ ಶರ್ಮಾ, ಕ್ರಾಂತಿ ಗೌಡ್, ಪ್ರತೀಕಾ ರಾವಲ್.

ಹಾಂಗ್ ಕಾಂಗ್-ಚೀನಾ ಮಹಿಳಾ ತಂಡ: ನತಾಶಾ ಮೈಲ್ಸ್ (ನಾಯಕಿ), ಮಾರಿಕೊ ಹಿಲ್, ಯಾಸ್ಮಿನ್ ದಸ್ವನಿ (ವಿಕೆಟ್ ಕೀಪರ್), ಮರಿಯಮ್ ಬೀಬಿ, ಕ್ಯಾರಿ ಚಾನ್, ಮರೀನಾ ಲ್ಯಾಂಪ್ಲೋ, ಅಲಿಸನ್ ಸಿಯು, ಇಕ್ರಾ ಸಹರ್, ಜಾಯ್ಲೀನ್ ಕೌರ್, ಶಾಂಝೀನ್ ಶಹಜಾದ್, ರುಚಿತಾ ವೆಂಕಟೇಶ್, ಷಾರ್ಲೆಟ್ ಚಾನ್, ಶಿಂಗ್ ಚಾನ್ ಡೊರೊಥಿಯಾ, ಕೌರ್ ಮಹೇಕ್ದೀಪ್, ಹೈಲಿ ವಾಂಗ್.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *