ಚಿತ್ರದುರ್ಗದಲ್ಲಿ ವಿಜೃಂಭಣೆಯ 20ನೇ ವರ್ಷದ ಹಿಂದೂ ಮಹಾಗಣಪತಿ ಉತ್ಸವ:ಯುವಜನತೆಯಲ್ಲಿ ರಾಷ್ಟ್ರೀಯ ಚೈತನ್ಯ ತುಂಬಲು ಗೋಪಾಲ್ ಕರೆ.

ಸಮಗ್ರ ಸುದ್ದಿ, ಚಿತ್ರದುರ್ಗ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಅ. 03: ನಗರದಲ್ಲಿ ವಿಶ್ವ ಹಿಂದೂ ಪರಿಷತ್ (VHP) ಹಾಗೂ ಭಜರಂಗದಳದ ವತಿಯಿಂದ ಪ್ರತಿವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ‘ಹಿಂದೂ ಮಹಾಗಣಪತಿ ಮಹೋತ್ಸವ’ದ ಅಂಗವಾಗಿ ಶನಿವಾರ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ 19 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಈ ಗಣೇಶೋತ್ಸವವು ಈ ವರ್ಷ ಯಶಸ್ವಿಯಾಗಿ 20ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಅಪಾರ ಜನಸ್ತೋಮದ ನಡುವೆ ಶೋಭಾಯಾತ್ರೆ ಸಂಪನ್ನಗೊಂಡಿತು.

ರಾಷ್ಟ್ರೀಯ ಚೈತನ್ಯದ ವೇದಿಕೆ: ಗೋಪಾಲ್

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ್, ಇದೊಂದು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ದೇಶದ ಯುವಜನತೆಯಲ್ಲಿ ಉತ್ಸಾಹ ಮತ್ತು ಚೈತನ್ಯವನ್ನು ತುಂಬುವ ಸಾಮಾಜಿಕ ಹಾಗೂ ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದರು. ಗಣೇಶ ಮತ್ತು ಹನುಮಂತ ಯಾವುದೇ ನಿರ್ದಿಷ್ಟ ಜಾತಿಗೆ ಸೀಮಿತವಾಗಿರದೆ, ಸಮಸ್ತ ಸಮಾಜವನ್ನು ಒಗ್ಗೂಡಿಸುವ ಸಂಕೇತವಾಗಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿರುವುದು ಭಾರತದ ಸ್ವಾಭಿಮಾನದ ಜಾಗೃತಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.

ರಾಜ್ಯದ ಪ್ರಸ್ತುತ ಪರಿಸ್ಥಿತಿ ಹಾಗೂ ಸರ್ಕಾರದ ನಿರ್ಧಾರಗಳನ್ನು ಪರೋಕ್ಷವಾಗಿ ವಿಮರ್ಶಿಸಿದ ಅವರು, ಗಣೇಶೋತ್ಸವ ಮತ್ತು ಶೋಭಾಯಾತ್ರೆಗಳಿಗೆ ಆಡಳಿತಾತ್ಮಕ ಅನುಮತಿ ಪಡೆಯಲು ಜನಪ್ರತಿನಿಧಿಗಳು ಮಧ್ಯಪ್ರವೇಶಿಸಬೇಕಾದ ವಾತಾವರಣ ನಿರ್ಮಾಣವಾಗಿರುವುದು ಹಾಗೂ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿರುವುದನ್ನು ಖಂಡಿಸಿದರು. ಇಂತಹ ಕ್ರಮಗಳಿಗೆ ಕಾನೂನು ಮತ್ತು ನ್ಯಾಯಾಲಯದ ಮೂಲಕವೇ ಸೂಕ್ತ ಉತ್ತರ ನೀಡಲಾಗುವುದು. ವಿಎಚ್‌ಪಿ ಹಾಗೂ ಭಜರಂಗದಳ ಸಂಘಟನೆಗಳು ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಸೀಮಿತವಾಗಿಲ್ಲ, ರಾಷ್ಟ್ರಹಿತವೇ ನಮ್ಮ ಮುಖ್ಯ ಆದ್ಯತೆ ಎಂದು ಸ್ಪಷ್ಟಪಡಿಸಿದರು.

ಧಾರ್ಮಿಕ ಹಾಗೂ ರಾಷ್ಟ್ರೀಯ ಭಾವನೆ ಒಗ್ಗೂಡಿಸುವ ವೇದಿಕೆ: ಅರುಣ್ ಶ್ಯಾಮ್

ಶೋಭಾಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್, ದೇಶದಲ್ಲಿ ಜಾತಿ, ರಾಜಕೀಯ ಹಾಗೂ ಸಿದ್ಧಾಂತಗಳನ್ನು ಬದಿಗಿಟ್ಟು ಹಿಂದೂ ಬಾಂಧವರೆಲ್ಲರೂ ಒಂದಾಗುವಂತಹ ಭಾವನೆಯನ್ನು ಮೂಡಿಸುವಲ್ಲಿ ಗಣೇಶೋತ್ಸವ ಪ್ರಮುಖ ಪಾತ್ರ ವಹಿಸುತ್ತದೆ. ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಸಂಗ್ರಾಮಕ್ಕೆ ವೇಗ ನೀಡಲು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವದ ಪರಂಪರೆಯಂತೆ, ಚಿತ್ರದುರ್ಗದಲ್ಲೂ ನಡೆಯುತ್ತಿರುವ ಈ ಉತ್ಸವವು ದೇಶದಲ್ಲೇ ಎರಡನೇ ಅತಿ ದೊಡ್ಡ ಗಣೇಶೋತ್ಸವ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.

ಇತ್ತೀಚೆಗೆ ನಡೆದ ವಿಮಾನ ಆಕ್ರಮಣ ಯತ್ನ ಹಾಗೂ ಪುಲ್ವಾಮಾ ದಾಳಿಯಂತಹ ಸಂದರ್ಭಗಳಲ್ಲಿ ಭಾರತೀಯ ಯೋಧರು ಮತ್ತು ಪೈಲಟ್‌ಗಳ ಸಮಯಪ್ರಜ್ಞೆ, ಧೈರ್ಯದಿಂದ ದೊಡ್ಡ ಅನಾಹುತಗಳು ತಪ್ಪಿವೆ ಎಂದು ಶ್ಲಾಘಿಸಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಭಜರಂಗದಳದಂತಹ ಸಂಘಟನೆಗಳು ದೇಶಭಕ್ತಿ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಸದಾ ನಿರತವಾಗಿವೆ ಎಂದರು.

ಸಾಧು-ಸಂತರು ಹಾಗೂ ಗಣ್ಯರ ಉಪಸ್ಥಿತಿ

ವೇದಿಕೆಯಲ್ಲಿ ನಾಡಿನ ಪ್ರಮುಖ ಮಠಾಧೀಶರಾದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಮಾದಾರ ಚನ್ನಯ್ಯ ಗುರುಪೀಠದ ಡಾ. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ, ಕುಂಚಿಟಗ ಮಹಾಸಂಸ್ಥಾನದ ಡಾ. ಶ್ರೀ ಶಾಂತವೀರ ಶ್ರೀಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಯಾದವ ಮಹಾಸಂಸ್ಥಾನದ ಕೃಷ್ಣ ಯಾದವಾನಂದ ಶ್ರೀಗಳು, ಭಗೀರಥ ಪೀಠದ ಪುರೋತ್ತಮಾನಂದಪುರಿ ಶ್ರೀಗಳು ಹಾಗೂ ಲಂಬಾಣಿ ಗುರುಪೀಠದ ಸೇವಾಲಾಲ್ ಶ್ರೀಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಡಾ. ಎಂ. ಚಂದ್ರಪ್ಪ, ಕೆ.ಸಿ. ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಸಿ.ಟಿ. ರವಿ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ ಉಪಸ್ಥಿತರಿದ್ದರು. ವಿಎಚ್‌ಪಿ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ, ಬಜರಂಗದಳದ ಕರ್ನಾಟಕ ದಕ್ಷಿಣದ ಪ್ರಾಂತ ಸಂಯೋಜಕ್ ಪ್ರಭಂಜನ್ ಸೂರ್ಯ, ಗಣಪತಿ ಸಮಿತಿ ಅಧ್ಯಕ್ಷ ಜಿ.ಆರ್. ಸುಧೀರ್, ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ಉಪಾಧ್ಯಕ್ಷ ಅಶೋಕ್ ಕುಮಾರ್, ಸಲಹಾ ಸಮಿತಿ ಸದಸ್ಯರಾದ ಶರಣ್ ಕುಮಾರ್, ಜಿ.ಎಂ. ಸುರೇಶ್, ಸಂದೀಪ್ ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಉತ್ಸಾಹದಿಂದ ಕೂಡಿದ್ದ ಹರಾಜು ಪ್ರಕ್ರಿಯೆ:

ಶೋಭಾಯಾತ್ರೆಯ ಸಂದರ್ಭದಲ್ಲಿ ಹಿಂದೂ ಮಹಾಗಣಪತಿಗೆ ಅರ್ಪಿಸಲಾಗಿದ್ದ ವಿವಿಧ ಪೂಜಾ ಸಾಮಗ್ರಿಗಳ ಹರಾಜು ಪ್ರಕ್ರಿಯೆ ತೀವ್ರ ಪೈಪೋಟಿಯಿಂದ ನಡೆಯಿತು. ಇದರ ಸಂಪೂರ್ಣ ವಿವರ ಇಲ್ಲಿದೆ:

  • ಗಣಪತಿಯ ಧ್ವಜ: 4 ಲಕ್ಷ ರೂ. (ಮಧುಗಿರಿಯ ಬಿಜೆಪಿ ಮುಖಂಡ ಹನುಮಂತೇಗೌಡ)
  • ಗಣಪತಿ ಕೂರಳಿಯ ಹಾರ: 1.30 ಲಕ್ಷ ರೂ. (ಲವಕುಮಾರ್)
  • ಉಯ್ಯಾಲೆ ಗಣಪತಿ: 1.30 ಲಕ್ಷ ರೂ. (ಪಲ್ಲವಿ ಪ್ರಸನ್ನ)
  • ಹಣ್ಣಿನ ಪುಟ್ಟಿ: 1.10 ಲಕ್ಷ ರೂ. (ಚಳ್ಳಕೆರೆಯ ಡಾ. ಮಂಜುನಾಥ್)
  • ಗಣಪತಿಯ ಲಡ್ಡು: 60 ಸಾವಿರ ರೂ. (ಮಧು)
  • ಏಲಕ್ಕಿ ಹಾರ: 50 ಸಾವಿರ ರೂ. (ಸಮಿತಿಯ ಅಧ್ಯಕ್ಷ ಸುಧೀರ್)
  • ಗಣಪತಿಯ ಚಿತ್ರಪಟ: 50 ಸಾವಿರ ರೂ. (ಮಂಜಣ್ಣ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group
Join WhatsApp Group

🔵 Facebook Page
Follow Facebook Page

🟣 ShareChat
Follow on sharechat.com

⚫ Twitter / X
Follow on X (Twitter)

🟣 Threads
Follow on Threads

🟠 Instagram
Follow on Instagram

🔵 Telegram
Join Telegram Channel

🟢 WhatsApp Channel
Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *