IND vs AUS: ನಾಗ್ಪುರ ಟೆಸ್ಟ್​ನಲ್ಲಿ ಹೀನಾಯ ಸೋಲು; ಆಸೀಸ್ ತಂಡಕ್ಕೆ ನ್ಯೂ ಪ್ಲೇಯರ್ ಎಂಟ್ರಿ..!

ND vs AUS Matt Kuhnemann called up as Australia face selection headaches vs india

ನಾಗ್ಪುರ ಟೆಸ್ಟ್‌ನಲ್ಲಿ (Nagpur Test) ಇನಿಂಗ್ಸ್ ಸೋಲಿನ ನಂತರ ಆಸ್ಟ್ರೇಲಿಯಾ ತಂಡ ತೀವ್ರ ಒತ್ತಡಕ್ಕೆ ಸಿಲುಕಿದೆ. ತಂಡದ ಕಳಪೆ ಪ್ರದರ್ಶನಕ್ಕೆ, ಮಾಜಿ ಕ್ರಿಕೆಟಿಗರು ಮತ್ತು ಮಾಧ್ಯಮಗಳಿಂದ ತಂಡದ ಆಟಗಾರರ ಮೇಲೆ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ಆಸ್ಟ್ರೇಲಿಯಾ ತಂಡ ಗೆಲುವಿನ ಲಯಕ್ಕೆ ಮರಳುವ ಸಲುವಾಗಿ ತನ್ನ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಆಸ್ಟ್ರೇಲಿಯಾದ ಆಯ್ಕೆಗಾರರು ಭಾರತದ ಪರಿಸ್ಥಿತಿಯನ್ನು ಪರಿಗಣಿಸಿ ಹೆಚ್ಚುವರಿ ಸ್ಪಿನ್ನರ್ ಅನ್ನು ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಬ್ರಿಸ್ಬೇನ್ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ (Matthew Kuhnemann) ಬಾರ್ಡರ್-ಗವಾಸ್ಕರ್ ಟ್ರೋಫಿಯ (Border-Gavaskar Trophy) ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮ್ಯಾಥ್ಯೂ ಕುಹ್ನೆಮನ್ ಎಡಗೈ ಸ್ಪಿನ್ನರ್ ಆಗಿದ್ದು, ದೇಶೀ ಕ್ರಿಕೆಟ್​ನಲ್ಲಿ ಬ್ರಿಸ್ಬೇನ್ ಪರ ಕಣಕ್ಕಿಳಿಯುತ್ತಾರೆ. ಈ ಆಟಗಾರ ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಮ್ಯಾಥ್ಯೂ ಕುಹ್ನೆಮನ್ ಇದುವರೆಗೆ 4 ಏಕದಿನ ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. ಇತ್ತೀಚೆಗೆ ನಡೆದ ಬಿಗ್ ಬ್ಯಾಷ್ ಲೀಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಕುಹ್ನೆಮನ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಈ ಹಿಂದಿನಿಂದಲೂ ಚರ್ಚೆ ನಡೆದಿತ್ತು.

ಲೈವ್ ಮ್ಯಾಚ್​ನಲ್ಲೇ ಪಠಾಣ್ ಮೂವಿ ಸಾಂಗ್​ಗೆ ಸ್ಟೆಪ್ ಹಾಕಿದ ಕೊಹ್ಲಿ, ಸಾಥ್ ನೀಡಿದ ಜಡೇಜಾ; ವಿಡಿಯೋ ನೋಡಿ

ಮ್ಯಾಥ್ಯೂ ಕುಹ್ನೆಮನ್ ತಂಡಕ್ಕೆ ಆಯ್ಕೆಯಾಗಿದ್ಯಾಕೆ?

ಆಸೀಸ್ ತಂಡಕ್ಕೆ ಎಂಟ್ರಿಕೊಟ್ಟಿರುವ ಮ್ಯಾಥ್ಯೂ ಕುಹ್ನೆಮನ್ ಬಗ್ಗೆ ಮಾತನಾಡುವುದಾದರೆ, ಈ ಎಡಗೈ ಸ್ಪಿನ್ನರ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿರುವ 18 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಅವರ ಎಕಾನಮಿ ದರವೂ ಪ್ರತಿ ಓವರ್‌ಗೆ 7.57 ರನ್ ಆಗಿದೆ. ಭಾರತದ ನೆಲದಲ್ಲಿ ಸ್ಪಿನ್ನರ್‌ಗಳ ಪ್ರಭಾವ ಹೆಚ್ಚಾಗಿರುವುದರಿಂದ ಕುಹ್ನೆಮನ್​ರನ್ನು ಭಾರತಕ್ಕೆ ಕರೆಸಿಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ. ಮೊದಲ ಪಂದ್ಯದಲ್ಲಿ ಭಾರತದ ಮೂವರು ಸ್ಪಿನ್ನರ್‌ಗಳು ಆಸ್ಟ್ರೇಲಿಯಾ ತಂಡವನ್ನು ಹೀನಾಯವಾಗಿ ಕಾಡಿದ್ದರು. ಟೀಂ ಇಂಡಿಯಾ 400 ರನ್ ಗಳಿಸಿದ ಪಿಚ್​ನಲ್ಲಿ ಆಸ್ಟ್ರೇಲಿಯ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 177 ರನ್ ಗಳಿಸಿದ್ದು, ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 91 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಹೀಗಾಗಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 132 ರನ್‌ಗಳ ಜಯ ಸಾಧಿಸಿದೆ.

ನಾಗ್ಪುರ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ನರ್‌ಗಳು 16 ವಿಕೆಟ್‌ಗಳನ್ನು ಕಬಳಿಸಿದ್ದು, ಮೂರನೇ ದಿನವೇ ಪಂದ್ಯ ಅಂತ್ಯಗೊಂಡಿತು ಈ ಕಾರಣಕ್ಕಾಗಿಯೇ ಈಗ ಆಸ್ಟ್ರೇಲಿಯಾ ತಂಡ ಭಾರತದ ತಂತ್ರವನ್ನು ಅನುಸರಿಸಲು ಮುಂದಾಗಿದ್ದು, ಮುಂದಿನ ಟೆಸ್ಟ್ ಪಂದ್ಯದಲ್ಲಿ 2 ಎಡಗೈ ಸ್ಪಿನ್ನರ್‌ಗಳು ಸೇರಿದಂತೆ 4 ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.

Matthew Kuhnemann

ಮ್ಯಾಥ್ಯೂ ಕುಹ್ನೆಮನ್

ಮ್ಯಾಥ್ಯೂ ಕುಹ್ನೆಮನ್ ಎಷ್ಟು ಪರಿಣಾಮ ಬೀರಬಹುದು?

ಮ್ಯಾಥ್ಯೂ ಕುಹ್ನೆಮನ್ ಕೇವಲ 12 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅನುಭವ ಹೊಂದಿದ್ದು, ಅದರಲ್ಲಿ ಅವರು 32 ವಿಕೆಟ್ಗಳನ್ನು ಪಡೆದಿದ್ದಾರೆ. ಒಂದೇ ಲೈನ್ ಅಂಡ್ ಲೆಂಗ್ತ್​ನಲ್ಲಿ ಸತತವಾಗಿ ಬೌಲಿಂಗ್ ಮಾಡುವುದು ಕುಹ್ನೆಮನ್ ಅವರ ವಿಶೇಷತೆಯಾಗಿದೆ. ಹೀಗಾಗಿ ಅವರು ಭಾರತದ ಪಿಚ್‌ಗಳಲ್ಲಿ ಸಂಪೂರ್ಣವಾಗಿ ಪ್ರಭಾವ ಬೀರುವ ಸಾಧ್ಯತೆಗಳಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-aus-matt-kuhnemann-called-up-as-australia-face-selection-headaches-vs-india-psr-au14-518795.html

Leave a Reply

Your email address will not be published. Required fields are marked *