
ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಸಿನಿಮಾದ ಜೊತೆಗೆ ಕ್ರಿಕೆಟ್ ಮೇಲೂ ಅಷ್ಟೇ ಆಸಕ್ತಿ ಇದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಅವರು ಮೊದಲಿನಿಂದಲೂ ಭಾಗವಹಿಸುತ್ತಾ ಬಂದಿದ್ದಾರೆ. ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ‘ಕನ್ನಡ ಚಲನಚಿತ್ರ ಕಪ್’ (Kannada Chalanachitra Cup) ಅದ್ದೂರಿಯಾಗಿ ನಡೆಯಲಿದೆ. ಫೆಬ್ರವರಿ 24 ಮತ್ತು 25ರಂದು ಪಂದ್ಯಗಳು ನಡೆಯಲಿವೆ. 30 ದೇಶಗಳಲ್ಲಿ ಇದು ಪ್ರಸಾರ ಆಗಲಿದೆ. ಈ ಕುರಿತು ಮಾಹಿತಿ ನೀಡಲು ಕಿಚ್ಚ ಸುದೀಪ್ ಅವರು ಬೆಂಗಳೂರಿನಲ್ಲಿ ಇಂದು (ಫೆ.12) ಸುದ್ದಿಗೋಷ್ಠಿ ನಡೆಸಿದ್ದಾರೆ. ಒಟ್ಟಾರೆ ‘ಕೆಸಿಸಿ’ (KCC) ಟೂರ್ನಿ ಹೇಗೆ ನಡೆಯಲಿದೆ ಎಂಬುದನ್ನು ಸುದೀಪ್ ವಿವರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.