ಚಿತ್ರದುರ್ಗ| ಆರ್‌ಎಸ್‌ಎಸ್ ಶತಮಾನೋತ್ಸವ ಸಂಭ್ರಮ: ವಿಜಯದಶಮಿ ಅಂಗವಾಗಿ ಸ್ವಯಂಸೇವಕರಿಂದ ಪಥಸಂಚಲನ.

ಚಿತ್ರದುರ್ಗ ನ. 15

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮ ಶತಮಾನೋತ್ಸವದ 101ನೇ ವರ್ಷಾಚರಣೆ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಚಿತ್ರದುರ್ಗ ತಾಲೂಕು ವತಿಯಿಂದ ನಗರದಲ್ಲಿ ಪಥಸಂಚಲನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿಗಳು ಪಟ್ಟಣದಲ್ಲಿ ಶನಿವಾರ ನಡೆಸಿದ ಪಥಸಂಚಲನ ಆಕರ್ಷಕವಾಗಿತ್ತು. ಪಥಸಂಚಲನವೂ ನಗರದ ಬರಗೇರಮ್ಮ ದೇವಾಲಯದಿಂದ ಪ್ರಾರಂಭವಾದ ಪಥ ಸಂಚಲನವೂ ಬಿ.ವಿ.ಕೆ. ಕನಕವೃತ್ತ, ಲೇಔಟ್, ಅಗಸನಕಲ್ಲು, ಚೋಳಗುಡ್ಡ, ಜ್ಞಾನ ವಿಕಾಸ ಶಾಲೆ, ನೆಹರು ನಗರ 2ನೇ ಕ್ರಾಸ್ ಹಾಗೂ ಹೊಳಲ್ಕೆರೆ ಮುಖ್ಯ ರಸ್ತೆ ಮೂಲಕ ಸಾಗಿ ಬರಗೇರಮ್ಮ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಈ ಪಥಸಂಚಲನದಲ್ಲಿ ಸುಮಾರು 350ಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ವಯಂಸೇವಕರು ಭಾಗವಹಿಸಿದ್ದರು.

ಕಳೆದ ತಿಂಗಳು ಅಕ್ಟೋಬರ್ 20ರಿಂದ 27ರ ವರೆಗೆ ಚಿತ್ರದುರ್ಗದಲ್ಲಿ ಒಂದು ವಾರಗಳ ಕಾಲ ಶಾಖಾ ಸಪ್ತಾಹವನ್ನು ನಡೆಸಲಾಗಿದ್ದು, ಜಿಲ್ಲೆಯ ಒಟ್ಟು 311 ಕಡೆಗಳಲ್ಲಿ ಶಾಖೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಚಿತ್ರದುರ್ಗ ತಾಲೂಕಿನಲ್ಲಿ 45 ಕಡೆಗಳಲ್ಲಿ ವಿಜಯದಶಮಿ ಉತ್ಸವಗಳನ್ನು ಆಚರಿಸಲಾಗಿದೆಪಥಸಂಚಲನದಲ್ಲಿ ಧ್ವಜ ಪ್ರಮುಖರಾಗಿ ಚಂದ್ರಹಾಸ ಅವರು ಕಾರ್ಯನಿರ್ವಹಿಸಿದರು. ನಗರ ಸಂಘ ಚಾಲಕರಾದ ಡಾ. ನಾಗರಾಜ್ ಅವರು ಉಪಸ್ಥಿತರಿದ್ದರು.

ನಗರದ ವಿವಿಧ ವೃತ್ತಗಳಲ್ಲಿ ಭಾರತಮಾತೆ ಹಾಗೂ ಮಹಾಪುರುಷರ ಭಾವಚಿತ್ರಗಳನ್ನು ಇಟ್ಟು ಪುಷ್ಪಾರ್ಚನೆ ಮಾಡಲಾಯಿತು. ಭಗವದ್ಭ್ವಜಕ್ಕೆ ಸ್ವಾಗತ ಕೋರುವ ಸಲುವಾಗಿ ಬೀದಿಗಳಲ್ಲಿ ಸುಂದರ ರಂಗೋಲಿಗಳನ್ನು ಬಿಡಿಸಿ, ಸಿರಿ ತೋರಣಗಳನ್ನು ಕಟ್ಟಿ ಹಾಗೂ ಕೇಸರಿ ಬಟ್ಟೆಗಳನ್ನು ಅಲಂಕರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತ ಕೋರಿದರು.

ಸಂಘದ ಶತಮಾನೋತ್ಸವ ಹಾಗೂ ವಿಜಯದಶಮಿಯ ಸಂಭ್ರಮವನ್ನು ಸಾರುವ ಈ ಪಥಸಂಚಲನವು ಸಂಘಟನಾತ್ಮಕವಾಗಿ ಹಾಗೂ ಶಿಸ್ತುಬದ್ಧವಾಗಿ ಜರುಗಿತು. ತಾಲೂಕಿನಾದ್ಯಂತ ಸಂಘಟನೆಯ ಚಟುವಟಿ ಕೆಗಳನ್ನು ವಿಸ್ತರಿಸುವ ಹಾಗೂ ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿತ್ತುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ.

ಪಥ ಸಂಚಲನ ಸಾಗುವ ಮಾರ್ಗದುದ್ದಕ್ಕೂ ಅಲ್ಲಲ್ಲಿ ಭಾರತ ಮಾತೆಯ ಭಾವಚಿತ್ರಗಳನ್ನು ಇಟ್ಟು ಪುಷ್ಪಾರ್ಚನೆಗೈದು ಗೌರವ ಸಲ್ಲಿಸಲಾಯಿತು.ಪಥಸಂಚಲನ ಬೀದಿಯುದ್ದಕ್ಕೂ ಕಟ್ಟಿದ್ದ ಕೇಸರಿ ಧ್ವಜ, ಕೇಸರಿ ತೋರಣಗಳು ನೋಡುಗರನ್ನು ಆಕರ್ಷಿಸಿದವು ಮಾರ್ಗದುದಕ್ಕೂ ಕೇಸರಿ ರಂಗೋಲಿ ಗಮನ ಸೆಳೆದವು. ವಿವಿಧಡೆ ಕೇಸರಿ ಪ್ರವೇಶ ದ್ವಾರಗಳನ್ನು ಅಲಂಕಾರ ಮಾಡಲಾಗಿತ್ತು. ಕೆಲವಡೆ ಚಿಕ್ಕಮಕ್ಕಳು ರಾಷ್ಟ್ರನಾಯಕ ವೇಷಧರಿಸಿ ನಿಂತಿದ್ದರು.

ಕಾರ್ಯಕ್ರಮದಲ್ಲಿ ನಗರ ಸಂಘಚಾಲಕರಾದ ನಾಗರಾಜು, ಜಿಲ್ಲಾ ಪ್ರಚಾರಕರಾದ ಸುದೀಪ್ ಜಿ, ಚಿತ್ರದುರ್ಗ ತಾಲೂಕು ಪ್ರಚಾರಕರಾದ ಮೋಹನ್ ಮಾಜಿ ಶಾಸಕರಾದ ಎಸ್.ಕೆ.ಬಸವರಾಜು, ಬಿಜೆಪಿ ಉಪಾಧ್ಯಕ್ಷರಾದ ಡಾ. ಸಿದ್ಧಾರ್ಥ ಗುಂಡಾರ್ಪಿ, ಸಹ ಪ್ರಭಾರಿ ಎ. ಮುರಳಿ, ಪೃಧಾನ ಕಾರ್ಯದರ್ಶಿ ಮಾಧುರಿ ಗೀರೀಶ್, ವೆಂಕಟೇಶ್ ಯಾದವ್, ರಾಜಕುಮಾರ್, ದೇವರಾಜ್ ಕೋಟ್ಲ, ಮಲ್ಲಾಪುರ ನಾಗರಾಜು ಕೃಷ್ಣಮೂರ್ತಿ ಸೇರಿದಂತೆ ಸಂಘದ ಇತರೆ ಪ್ರಮುಖರು ಭಾಗವಹಿಸಿದ್ದರು. ಬಿಗಿಯಾದ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಒದಗಿಸಲಾಗಿತ್ತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *