ದೇಶಾದ್ಯಂತ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (NPCI) ಮಹತ್ವದ ಹೆಜ್ಜೆ ಇಟ್ಟಿದೆ. ಸಣ್ಣ ವ್ಯಾಪಾರಿಗಳು ಸುಲಭವಾಗಿ ಡಿಜಿಟಲ್ ವಹಿವಾಟು ನಡೆಸಲು ಅನುಕೂಲವಾಗುವಂತೆ ‘ಯುಪಿಐ ವ್ಯಾಪಾರ ಸಕ್ಷಮ್’ (UPI Vyapaar Saksham Scheme) ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯಡಿ ಸಣ್ಣ ವ್ಯಾಪಾರಿಗಳ ಅಂಗಡಿಗಳಲ್ಲಿ ಕ್ಯೂಆರ್ ಕೋಡ್ (QR Code) ಮತ್ತು ಧ್ವನಿ ಆಧಾರಿತ ಸೌಂಡ್‌ಬಾಕ್ಸ್‌ಗಳನ್ನು (Soundbox) ಅಳವಡಿಸಲು ಬ್ಯಾಂಕ್‌ಗಳಿಗೆ ಸರ್ಕಾರದಿಂದ ವಿಶೇಷ ಪ್ರೋತ್ಸಾಹ ಧನ ಸಿಗಲಿದೆ.
ಯೋಜನೆ ಯಾರಿಗೆ ಅನ್ವಯಿಸುತ್ತದೆ? ವಾರ್ಷಿಕ 40 ಲಕ್ಷ ರೂಪಾಯಿವರೆಗೆ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ಈ ಯೋಜನೆಯ ಲಾಭ ಪಡೆಯಬಹುದು. ವಿಶೇಷವಾಗಿ ಟೈರ್-3 ರಿಂದ ಟೈರ್-6 ವರೆಗಿನ ಸಣ್ಣ ನಗರಗಳು ಹಾಗೂ ಗ್ರಾಮೀಣ ಭಾಗದ ವ್ಯಾಪಾರಿಗಳಿಗೆ ಈ ಯೋಜನೆ ಹೆಚ್ಚು ಉಪಯುಕ್ತವಾಗಲಿದೆ. ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಾದ ‘ಪಿಎಂ ಸ್ವನಿಧಿ’ ಮತ್ತು ‘ಪಿಎಂ ವಿಶ್ವಕರ್ಮ’ ಫಲಾನುಭವಿಗಳು ಕೂಡ ಈ ವ್ಯಾಪ್ತಿಗೆ ಬರುತ್ತಾರೆ.
ಬ್ಯಾಂಕ್‌ಗಳಿಗೆ ಸಿಗಲಿದೆ ಬಂಪರ್ ಪ್ರೋತ್ಸಾಹಧನ! ಹೊಸ ವ್ಯಾಪಾರಿಗಳನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ಸೇರ್ಪಡೆಗೊಳಿಸುವ ಬ್ಯಾಂಕ್‌ಗಳಿಗೆ ಎನ್‌ಪಿಸಿಐ ಈ ಕೆಳಗಿನಂತೆ ಪ್ರೋತ್ಸಾಹಧನ ನೀಡಲಿದೆ:
- ಪ್ರತಿ ಹೊಸ ಕ್ಯೂಆರ್ ಕೋಡ್ ಅಳವಡಿಕೆಗೆ: 300 ರೂ. ವರೆಗೆ ಇನ್ಸೆಂಟಿವ್.
- ಸೌಂಡ್‌ಬಾಕ್ಸ್ ಅಳವಡಿಕೆಗೆ: 750 ರೂ. ವರೆಗೆ ಇನ್ಸೆಂಟಿವ್.
ಪ್ರೋತ್ಸಾಹಧನ ಪಡೆಯಲು ಇರುವ ಷರತ್ತುಗಳೇನು? ಬ್ಯಾಂಕ್‌ಗಳು ಗುರುತಿಸಿದ ಹೊಸ ವ್ಯಾಪಾರಿಗಳು ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ಎರಡು ತಿಂಗಳಾದರೂ ಸಕ್ರಿಯವಾಗಿರಬೇಕು. ಅಂದರೆ, ಒಂದು ತಿಂಗಳಲ್ಲಿ ಕನಿಷ್ಠ 25 ಅರ್ಹ ಯುಪಿಐ ವಹಿವಾಟುಗಳು ನಡೆಯಬೇಕು ಮತ್ತು ಆ ತಿಂಗಳ ಒಟ್ಟು ವಹಿವಾಟಿನ ಮೌಲ್ಯ 5,000 ರೂ. ದಾಟಿರಬೇಕು. ಈ ನಿಯಮವನ್ನು ತ್ರೈಮಾಸಿಕ ಅವಧಿಯಲ್ಲಿ ಕನಿಷ್ಠ ಎರಡು ತಿಂಗಳ ಕಾಲ ಪೂರೈಸಿದರೆ ಮಾತ್ರ ಆಯಾ ಬ್ಯಾಂಕ್‌ಗಳಿಗೆ ಇನ್ಸೆಂಟಿವ್ ದೊರೆಯುತ್ತದೆ.
ಉದಾಹರಣೆಗೆ, ಬ್ಯಾಂಕೊಂದು 1,000 ಕ್ಯೂಆರ್ ಕೋಡ್ ಮತ್ತು 200 ಸೌಂಡ್‌ಬಾಕ್ಸ್‌ಗಳನ್ನು ಯಶಸ್ವಿಯಾಗಿ ಅಳವಡಿಸಿ, ಆ ವರ್ತಕರು ನಿಗದಿತ ವಹಿವಾಟು ಪೂರ್ಣಗೊಳಿಸಿದರೆ ಆ ಬ್ಯಾಂಕಿಗೆ ಬರೋಬ್ಬರಿ 4.5 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಸಿಗಲಿದೆ. ಬ್ಯಾಂಕ್‌ಗಳು ಸಲ್ಲಿಸುವ ಕ್ಲೈಮ್‌ಗಳನ್ನು ಪರಿಶೀಲಿಸಿ 30 ದಿನಗಳೊಳಗೆ ಇತ್ಯರ್ಥಪಡಿಸಲಾಗುತ್ತದೆ.
ನಿಧಿಯ ಮೂಲ ಮತ್ತು ಎನ್‌ಪಿಸಿಐ ಗುರಿ: ಯುಪಿಐ ಎಂಡಿಆರ್ (MDR) ಶುಲ್ಕದ ಮೂಲಕ ಸಂಗ್ರಹವಾಗುವ ಒಟ್ಟು ಮೊತ್ತದಲ್ಲಿ ಶೇಕಡಾ 5ರಷ್ಟನ್ನು ಈ ಯೋಜನೆಗಾಗಿ ಬಳಸಲಾಗುತ್ತದೆ. ಈ ಹಣವನ್ನು ಹೊಸ ವ್ಯಾಪಾರಿಗಳ ಸೇರ್ಪಡೆ ಮತ್ತು ಡಿಜಿಟಲ್ ಮೂಲಸೌಕರ್ಯದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ.
ಪ್ರತಿವರ್ಷ ದೇಶಾದ್ಯಂತ ಸುಮಾರು 60 ಲಕ್ಷದಿಂದ 1 ಕೋಟಿ ಹೊಸ ಕ್ಯೂಆರ್ ಕೋಡ್‌ಗಳನ್ನು ಹಾಗೂ 5 ರಿಂದ 10 ಲಕ್ಷ ಹೊಸ ಸೌಂಡ್‌ಬಾಕ್ಸ್‌ಗಳನ್ನು ತಳಮಟ್ಟದ ವ್ಯಾಪಾರಿಗಳಿಗೆ ತಲುಪಿಸುವ ಬೃಹತ್ ಗುರಿಯನ್ನು ಎನ್‌ಪಿಸಿಐ ಹೊಂದಿದೆ. ಇದರಿಂದಾಗಿ ದೇಶದ ಮೂಲೆ ಮೂಲೆಗೂ ಡಿಜಿಟಲ್ ಕ್ರಾಂತಿ ವಿಸ್ತರಿಸಲಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು