ಚಿತ್ರದುರ್ಗ ನ. 18
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಹಲವು ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿದ್ದು, ಹೊಸದಾಗಿ ಸಿ.ಸಿ. ರಸ್ತೆ ಮಾಡುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಕೆ.ಕೆ.ಎನ್. ಎಸ್.ಎಸ್. ಜಿಲ್ಲಾ ಸಮಿತಿಯ ಅಧ್ಯಕ್ಷ ಗಣೇಶ್ ಏಕಾಂಗಿಯಾಗಿ ಮೆದೇಹಳ್ಳಿ ರಸ್ತೆಯಲ್ಲಿ ವೆಂಕಟೇಶ್ವರ ಟಾಕೀಸ್ ತಿರುವಿನಲ್ಲಿ ಪ್ರತಿಭಟನೆಯನ್ನು ನಡೆಸಿದರು.
ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆ ವೆಂಕಟೇಶ್ವರ ಟಾಕೀಸ್ ಮುಂಭಾಗದಿಂದ ಗೋಪಾಲಪುರ ರಸ್ತೆಗೆ ಲಿಂಕ್ ಆಗಿರುವ ರಸ್ತೆಯು ತುಂಬಾ ಹದಗೆಟ್ಟಿದ್ದು, ತಗ್ಗು-ಗುಂಡಿಗಳಿಂದ ಕೂಡಿದ್ದು, ಅದೇ ರೀತಿ ಎಸ್.ಪಿ. ಆಫೀಸ್ ಮುಂಭಾಗ ರಸ್ತೆಯಿಂದ ಆದಿಜಾಂಬವ ನಿಗಮದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ರವರ ಮನೆಯವರೆಗೆ, ಅದೇ ರೀತಿ ರೀಜನಲ್ ಸ್ಕೂಲ್ ಮುಂಭಾಗದ ರಸ್ತೆ ಮತ್ತು ಪ್ರಸನ್ನ ಟಾಕೀಸ್ ರಸ್ತೆಯ ಕಾಮಗಾರಿಗಳು ಅಪೂರ್ಣವಾಗಿದ್ದು ಈ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲು, ವಾಹನ ಸವಾರರು ಸಂಚರಿಸಲು ಸದರಿ ರಸ್ತೆಗಳು ಯೋಗ್ಯವಾಗಿರುವುದಿಲ್ಲ ಮತ್ತು ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಸವಾರರು ವಾಹನಗಳ ಚಲಾಯಿಸುವಾಗ ಕೆಳಗಡೆ ಬಿದ್ದು ನೋವು ಅನುಭವಿಸುತ್ತಿದ್ದಾರೆ. ಅದೇ ರೀತಿ ದೂಳಿನಿಂದ ಕೂಡಿದ ರಸ್ತೆಗಳಾಗಿದ್ದು ಇದರಿಂದ ಸಾರ್ವಜನಿಕರು ಹಲವಾರು ಕಾಯಿಲೆಗಳಿಗೆ ಒಳಗಾಗುತ್ತಿ ದ್ದಾರೆ. ರಸ್ತೆಯ ಅಕ್ಕ ಪಕ್ಕದ ಮನೆಯವರಿಗೂ ಸಹ ದೂಳಿನಿಂದ ತೊಂದರೆಯಾಗುತ್ತದೆ ಎಂದು ದೂರಿದ್ದಾರೆ.
ಈ ರಸ್ತೆಗಳನ್ನು ಕೂಡಲೇ ಒಂದು ತಿಂಗಳ ಒಳಗಾಗಿ ಸಿ.ಸಿ. ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿ ಇಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕೆಂದು ಕೆ.ಕೆ.ಎನ್.ಎಸ್.ಎಸ್. ಜಿಲ್ಲಾ ಸಮಿತಿ ಅಧ್ಯಕ್ಷರಾದ ಗಣೇಶ, ಏಕವ್ಯಕ್ತಿ ಈ ರಸ್ತೆಯ ಮೇಲೆ ಊಟ, ತಿಂಡಿ ಮಾಡುವ ಮೂಲಕ ಧರಣಿ ಮಾಡಿ ಜಿಲ್ಲಾಡಳಿತಕ್ಕೆ ಮತ್ತು ನಗರಸಭೆ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದು, ಒಂದು ವೇಳೆ ವಿಳಂಬವಾದಲ್ಲಿ ಈ ರಸ್ತೆ ಸಾರ್ವಜನಿಕರಿಗೆ ಓಡಾಡಲು ಯೋಗ್ಯವಾಗಿಲ್ಲದಿರುವುದರಿಂದ ಇಲ್ಲಿ ವಾಸ ಮಾಡಲು ಗುಡಿಸಲು ಗಳನ್ನು ಹಾಕಬೇಕಾಗುತ್ತದೆ ಎಂದು ಗಣೇಶ್ ಎಚ್ಚರಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು