IND vs AUS: ಸರಣಿಯ ಮಧ್ಯದಲ್ಲಿ ತವರಿಗೆ ಮರಳಿದ 5 ಆಸೀಸ್ ಆಟಗಾರರು; ಇಬ್ಬರು ವಾಪಸ್ ಬರುವುದು ಅನುಮಾನ!

IND vs AUS test series pat cummins david warner ashton agar matt renshaw josh hazlewood will return home report

ಸದ್ಯ ಭಾರತ ಪ್ರವಾಸದಲ್ಲಿರುವ ಆಸೀಸ್ ತಂಡಕ್ಕೆ (India Vs Australia) ಇಲ್ಲಿಯವರೆಗೆ ಯಾವುದು ಶುಭವಾಗಿಲ್ಲ. ಪ್ರವಾಸಿ ತಂಡ ಈಗಾಗಲೇ ಆಡಿರುವ ಆರಂಭಿಕ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಸೋತಿದ್ದು, ಇದೀಗ ಸರಣಿ ಸೋಲುವ ಆತಂಕದಲ್ಲಿದೆ. ಆದರೆ ಈ ನಡುವೆ ಶಾಕಿಂಗ್ ಸುದ್ದಿ ಎಂಬಂತೆ ಸರಣಿಯ ಮಧ್ಯದಲ್ಲಿಯೇ ಆಸ್ಟ್ರೇಲಿಯಾದ 5 ಆಟಗಾರರು ತವರಿಗೆ ಮರಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ 5 ಆಟಗಾರರಲ್ಲಿ ಇಬ್ಬರು ಆಟಗಾರರು ಮತ್ತೆ ಭಾರತಕ್ಕೆ ಹಿಂದಿರುಗುವುದಿಲ್ಲ ಎಂದು ತಿಳಿದುಬಂದಿದೆ. ಕೌಟುಂಬಿಕ ಕಾರಣಗಳಿಗಾಗಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ. ಅದೇ ಸಮಯದಲ್ಲಿ, ಆರಂಭಿಕ ಡೇವಿಡ್ ವಾರ್ನರ್ ಮತ್ತು ಜೋಶ್ ಹ್ಯಾಜಲ್‌ವುಡ್ (David Warner and Josh Hazlewood) ಕೂಡ ಅವರೊಂದಿಗೆ ಮನೆಗೆ ಹಿಂದಿರುಗಲಿದ್ದಾರೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾಕ್ಕೆ ಹಾರಲಿರುವ ಕಮಿನ್ಸ್

ವಾಸ್ತವವಾಗಿ ಎರಡನೇ ಮತ್ತು ಮೂರನೇ ಟೆಸ್ಟ್ ನಡುವೆ ಸುಮಾರು 10 ದಿನಗಳ ಸಮಯವಿದೆ. ಹೀಗಾಗಿ ಮಾಧ್ಯಮ ವರದಿಗಳ ಪ್ರಕಾರ, ಆಸೀಸ್ ನಾಯಕ ಕಮಿನ್ಸ್ ವೈಯಕ್ತಿಕ ಕಾರಣಗಳಿಂದಾಗಿ ಸಿಡ್ನಿಗೆ ತೆರಳುತ್ತಾರೆ. ಆದರೆ ಅವರು ಮೂರನೇ ಟೆಸ್ಟ್ ಪ್ರಾರಂಭವಾಗುವ ಮೊದಲು ತಂಡ ಸೇರಿಕೊಳ್ಳಲಿದ್ದಾರೆ.

ಕಮಿನ್ಸ್ ಜೊತೆಗೆ ವಾರ್ನರ್ ಮತ್ತು ಹ್ಯಾಜಲ್‌ವುಡ್ ಕೂಡ ಆಸ್ಟ್ರೇಲಿಯಾಕ್ಕೆ ವಾಪಸ್ಸಾಗುತ್ತಿರುವುದು ಆಸ್ಟ್ರೇಲಿಯಾ ಪಾಳಯದಲ್ಲಿ ಸಂಚಲನ ಉಂಟಾಗಿದೆ. ಕಳೆದ ತಿಂಗಳು ಸಿಡ್ನಿ ಟೆಸ್ಟ್‌ನಲ್ಲಿ ಗಾಯಕ್ಕೆ ತುತ್ತಾಗಿದ್ದ ಹ್ಯಾಜಲ್‌ವುಡ್ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಹೀಗಾಗಿ ಅವರು ಸಂಪೂರ್ಣ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ.

NZ vs ENG: ಆಂಗ್ಲರ ಹೊಡಿಬಡಿ ಆಟಕ್ಕೆ ಸುಸ್ತಾದ ಕಿವೀಸ್; ಮೊದಲ ಟೆಸ್ಟ್​ನಲ್ಲಿ 267 ರನ್​ಗಳ ಬೃಹತ್ ಸೋಲು!

ವಾರ್ನರ್ ಚೇತರಿಸಿಕೊಂಡಿಲ್ಲ

ಹ್ಯಾಜಲ್‌ವುಡ್ ಜೊತೆಗೆ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಗಾಯಗೊಂಡಿದ್ದ ವಾರ್ನರ್ ಕೂಡ ಚೇತರಿಸಿಕೊಂಡಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ವಾರ್ನ್​ರ್ ಉಳಿದ ಎರಡು ಟೆಸ್ಟ್​ಗಳಿಂದ ಹೊರಗುಳಿಯಲಿದ್ದು, ತವರಿಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. ವಾಸ್ತವವಾಗಿ ವಾರ್ನರ್ ಅವರ ಭಾರತ ಪ್ರವಾಸ ಅವರ ವೃತ್ತಿಜೀವನಕ್ಕೆ ಬಹಳ ಮುಖ್ಯವಾಗಿತ್ತು. ಹೀಗಾಗಿ ವಾರ್ನರ್ ಟೆಸ್ಟ್ ಕ್ರಿಕೆಟ್​ನಲ್ಲಿ ಉಳಿಯಲು ಭಾರತ ಪ್ರವಾಸದಲ್ಲಿ ಮಿಂಚಲೇಬೇಕಿತ್ತು.

ಆದರೆ ವಾರ್ನರ್, ಸರಣಿಯ ಮೊದಲ ಟೆಸ್ಟ್ನಲ್ಲಿ ಕೇವಲ 11 ರನ್ ಗಳಿಸಿದರೆ, ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್ ಮಾತ್ರ ಗಳಿಸಿದರು. ಆದರೆ ಈ ಸಮಯದಲ್ಲಿ ಮೊಣಕೈ ಗಾಯಕ್ಕೆ ತುತ್ತಾದ ವಾರ್ನರ್ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಮೂವರನ್ನು ಹೊರತುಪಡಿಸಿ, ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ನ ಸುದ್ದಿ ಪ್ರಕಾರ, ಆಷ್ಟನ್ ಆಗರ್ ಮತ್ತು ಮ್ಯಾಟ್ ರೆನ್‌ಶಾ ಕೂಡ ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-aus-test-series-pat-cummins-david-warner-ashton-agar-matt-renshaw-josh-hazlewood-will-return-home-report-psr-au14-523548.html

Leave a Reply

Your email address will not be published. Required fields are marked *