ಮೋದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ : ನಮಗೂ ಅವರೇ ಪ್ರಧಾನಿ ಆಗಲಿ ಅಂತಿದ್ದಾರೆ ಪಾಕಿಗಳು..!

ಭಾರತವನ್ನು ಕಂಡರೆ ಕೆಂಡಕಾರುತ್ತಿದ್ದ ಪಾಕಿಸ್ತಾನ ಇದೀಗ ಭಾರತದ ಸಹಾಯಹಸ್ತ ಬೇಡುತ್ತಿದೆ. ಅಲ್ಲಿನ ಪರಿಸ್ಥಿತಿ ಕಂಡು ನಮಗೂ ಭಾರತದ ಪ್ರಧಾನಿ ಮೋದಿಯವರೇ ಪ್ರಧಾನಿಯಾಗಲಿ ಅಂತಿದ್ದಾರೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ.

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಶುರುವಾಗಿ ಸುಮಾರು ತಿಂಗಳುಗಳೇ ಕಳೆದಿವೆ. ಇನ್ನು ಯಾವುದು ಸರಿಯಾಗುತ್ತಿಲ್ಲ. ಒಂದೊತ್ತಿನ ಊಟಕ್ಕೂ ಅಲ್ಲಿನ ಜನ ಪರದಾಡುತ್ತಿದ್ದಾರೆ. ಹಾಲು, ಕಾಫಿ, ಟೀ, ಗೋಧಿ ಹಿಟ್ಟು ಹೀಗೆ ಎಲ್ಲಾ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಕೇಳಿ ಕೇಳಿ ಶಾಕ್ ಆಗಿದ್ದಾರೆ.

ಪಾಕಿಸ್ತಾ‌ನದ ಪ್ರಜೆಗಳೇ ಪ್ರಧಾನಿ ಶೆಹಬಾಜ್ ಶರೀಫ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪತ್ರಕರ್ತರ ಜೊತೆಗೆ ವ್ಯಕ್ತಿಯೊಬ್ಬ ಮಾತನಾಡಿದ ವಿಡಿಯೋವೊಂದು ವೈರಲ್ ಆಗಿದೆ. “ನರೇಂದ್ರ ಮೋದಿ ಪಾಕಿಸ್ತಾನದ ಪ್ರಧಾನಿಯಾದರೆ ಸಾಕು. ನಮಗೆ ಼ರೀಪೊ್, ಇಮ್ರಾನ್ ಖಾನ್, ಮುಷರಫ್ ಅಂತ ಸರ್ವಾಧಿಕಾರಿಗಳು ಬೇಡವೇ ಬೇಡ. ಮೋದಿ ಪಾಕಿಸ್ತಾನದ ಪ್ರಧಾನಿಯಾದರೆ ನಾವೂ ಅಗತ್ಯ ವಸ್ತಿಗಳನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದು” ಎಂದಿದ್ದಾರೆ.

The post ಮೋದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ : ನಮಗೂ ಅವರೇ ಪ್ರಧಾನಿ ಆಗಲಿ ಅಂತಿದ್ದಾರೆ ಪಾಕಿಗಳು..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/ps5o3iJ
via IFTTT

Leave a Reply

Your email address will not be published. Required fields are marked *