Jasprit Bumrah: ಜಸ್ಪ್ರೀತ್ ಬುಮ್ರಾಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಮೈದಾನಕ್ಕೆ ರೀ ಎಂಟ್ರಿ ಯಾವಾಗ ಗೊತ್ತಾ?

jasprit bumraj operation need 6 months for comeback indian cricket team

ಹೋಳಿ ಹಬ್ಬದಂದು ಟೀಂ ಇಂಡಿಯಾ (Team India) ಹಾಗೂ ಜಸ್ಪ್ರೀತ್ ಬುಮ್ರಾ (Jasprit Bumrah) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಬಹಳ ದಿನಗಳಿಂದ ಗಾಯದಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಬುಮ್ರಾ ಶಸ್ತ್ರಚಿಕಿತ್ಸೆ ನಡೆದಿದ್ದು, ಫೋರ್ಟೆ ಆರ್ಥೋಪೆಡಿಕ್ಸ್ ಆಸ್ಪತ್ರೆಯಲ್ಲಿ ಡಾ. ರೋವನ್ ಶೋಟೆನ್ ಅವರು ನಡೆಸಿದ ಶಸ್ತ್ರಚಿಕಿತ್ಸೆ (surgery) ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಈಗ ಪ್ರಶ್ನೆ ಏನೆಂದರೆ, ಈ ಶಸ್ತ್ರಚಿಕಿತ್ಸೆಯ ನಂತರ ಜಸ್ಪ್ರೀತ್ ಬುಮ್ರಾ ಯಾವಾಗ ಮೈದಾನಕ್ಕೆ ಮರಳುತ್ತಾರೆ? ಎಂಬುದು. ಕ್ರಿಕ್‌ಬಝ್‌ನ ವರದಿಯ ಪ್ರಕಾರ, ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಲು ಗರಿಷ್ಠ 24 ವಾರಗಳು ಅಂದರೆ 6 ತಿಂಗಳು ಬೇಕಾಗುತ್ತದೆ. ಆದರೆ ಜಸ್ಪ್ರೀತ್ ಬುಮ್ರಾ ಈ ಸಮಯಕ್ಕಿಂತ ಮುಂಚೆಯೇ ಚೇತರಿಸಿಕೊಳ್ಳಬಹುದು ಎಂತಲೂ ಹೇಳಲಾಗುತ್ತಿದೆ.

ಬುಮ್ರಾ ವಿಶ್ವಕಪ್ ಆಡಬಹುದು

ಒಂದು ವೇಳೆ ಈಗಿನ ವರದಿಯಂತೆ 6 ತಿಂಗಳ ನಂತರ ಬುಮ್ರಾ ಸಂಪೂರ್ಣ ಫಿಟ್‌ ಆದರೆ, ಆಗ ಅವರು ಏಕದಿನ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆಗಳು ಹೆಚ್ಚಿವೆ. 2023ರ ವಿಶ್ವಕಪ್ ಭಾರತದಲ್ಲಿಯೇ ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಹೀಗಾಗಿ ಟೀಂ ಇಂಡಿಯಾದ ಮ್ಯಾಚ್ ವಿನ್ನರ್‌ಗಳಲ್ಲಿ ಬುಮ್ರಾ ಕೂಡ ಒಬ್ಬರಾಗಿದ್ದು, ಈ ಆಟಗಾರ ಫಿಟ್‌ ಆಗಿದ್ದರೆ, ಭಾರತದ ಗೆಲುವಿನ ಸಾಧ್ಯತೆಗಳು ಬಲಗೊಳ್ಳುತ್ತವೆ.

ಟೀಂ ಇಂಡಿಯಾಕ್ಕೆ ಬಿಗ್ ಶಾಕ್! ಐಪಿಎಲ್ ಜೊತೆಗೆ ಡಬ್ಲ್ಯುಟಿಸಿ ಫೈನಲ್, ಏಷ್ಯಾಕಪ್‌ನಿಂದಲೂ ಬುಮ್ರಾ ಔಟ್?

ಆದರೆ ಈ ಶಸ್ತ್ರಚಿಕಿತ್ಸೆಯಿಂದಾಗಿ ಜಸ್ಪ್ರೀತ್ ಬುಮ್ರಾ ಈ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿಯಲಿದ್ದಾರೆ. ಇದರೊಂದಿಗೆ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಗಾಯದ ಸಮಸ್ಯೆಗೆ ತುತ್ತಾಗಿರುವ ಬುಮ್ರಾಗೆ ಕಳೆದ ಏಷ್ಯಾಕಪ್, ಟಿ20 ವಿಶ್ವಕಪ್ ಕೂಡ ಆಡಲಾಗಲಿಲ್ಲ.

ಬಾಂಡ್‌ ಸಲಹೆ ಮೇರೆಗೆ ಬುಮ್ರಾಗೆ ಶಸ್ತ್ರಚಿಕಿತ್ಸೆ?

ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಮತ್ತು ನ್ಯೂಜಿಲೆಂಡ್ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ಅವರ ಸಲಹೆಯ ಮೇರೆಗೆ ಜಸ್ಪ್ರೀತ್ ಬುಮ್ರಾ ಅವರನ್ನು ಕ್ರೈಸ್ಟ್‌ಚರ್ಚ್‌ಗೆ ಕಳುಹಿಸಲಾಗಿದೆ ಎಂಬ ಸುದ್ದಿಯೂ ಇದೆ. ಆದರೆ ಈ ಬಗ್ಗೆ ಯಾವದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬುಮ್ರಾಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಜೋಫ್ರಾ ಆರ್ಚರ್, ಜೇಮ್ಸ್ ಪ್ಯಾಟಿನ್ಸನ್, ಜೇಸನ್ ಬೆಹ್ರೆಂಡಾರ್ಫ್ ಅವರಂತಹ ಬೌಲರ್‌ಗಳಿಗೂ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/jasprit-bumraj-operation-need-6-months-for-comeback-indian-cricket-team-psr-au14-532696.html

Views: 0

Leave a Reply

Your email address will not be published. Required fields are marked *