IND vs AUS: ಮೊದಲ ಪಂದ್ಯಕ್ಕೆ 5+3+2+1 ಸೂತ್ರದೊಂದಿಗೆ ಕಣಕ್ಕಿಳಿಯುತ್ತಾ ಭಾರತ? ಹೀಗಿದೆ ಸಂಭಾವ್ಯ ತಂಡ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಉಭಯ ತಂಡಗಳು ಮುಂಬೈನಲ್ಲಿ ಬಿರುಸಿನ ಅಭ್ಯಾಸ ನಡೆಸುತ್ತಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವುದು ಉಭಯ ತಂಡಗಳ ಗುರಿಯಾಗಿದೆ. ಾದರೆ ಟೀಂ ಇಂಡಿಯಾ ಯಾವ ಪ್ಲೇಯಿಂಗ್ ಇಲೆವೆನ್‌ನೊಂದಿಗೆ ಕಣಕ್ಕಿಳಿಯಲಿದೆ ಎಂಬುದು ಇಲ್ಲಿನ ದೊಡ್ಡ ಪ್ರಶ್ನೆಯಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಲಿದ್ದು, ಪಾಂಡ್ಯಗೆ ಆಡುವ ಹನ್ನೊಂದರ ಬಳಗ ಕಟ್ಟುವುದೇ ದೊಡ್ಡ ತಲೆನೋವಾಗಿದೆ. ಆದರೆ ಸದ್ಯಕ್ಕೆ ಹೊರಬಿದ್ದಿರುವ ಮಾಹಿತಿ ಪ್ರಕಾರ ಟೀಂ ಇಂಡಿಯಾ ಕೇವಲ 5 ಬ್ಯಾಟ್ಸ್‌ಮನ್‌ಗಳು, 3 ಆಲ್ ರೌಂಡರ್‌ಗಳು, ಇಬ್ಬರು ವೇಗದ ಬೌಲರ್‌ಗಳು ಮತ್ತು ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆಗಳಿವೆ.ಟೀಮ್ ಇಂಡಿಯಾದ ಆರಂಭಿಕ ಜವಾಬ್ದಾರಿಯನ್ನು ಶುಭ್​ಮನ್ ಗಿಲ್ ಮತ್ತು ಇಶಾನ್ ಕಿಶನ್ ನಿರ್ವಹಿಸಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿದ್ದು, ಸೂರ್ಯಕುಮಾರ್ ಯಾದವ್ ನಾಲ್ಕನೇ ಮತ್ತು ಕೆಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಆಡಬಹುದು. ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡುತ್ತಾರಾ ಅಥವಾ ಇಶಾನ್ ಕಿಶನ್ ಕೀಪಿಂಗ್ ಮಾಡುತ್ತಾರಾ ಎಂಬುದು ಪ್ರಶ್ನೆಯಾಗಿದೆ.ಭಾರತ ತಂಡವು ಮೂವರು ಆಲ್‌ರೌಂಡರ್‌ಗಳನ್ನು ಕಣಕ್ಕಿಳಿಸಬಹುದಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಈ ಕೋಟಾದಲ್ಲಿ ಕಣಕ್ಕಿಳಿಯಬಹುದಾಗಿದೆ. ಅದೇ ವೇಳೆ ವೇಗದ ಬೌಲಿಂಗ್ ಜವಾಬ್ದಾರಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ಮೇಲಿರಲಿದ್ದು,ಕುಲ್ದೀಪ್ ಯಾದವ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಮೈದಾನಕ್ಕಿಳಿಯಬಹುದು.ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ- ಶುಭ್​ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್.

source https://tv9kannada.com/photo-gallery/cricket-photos/india-vs-australia-1st-odi-probable-playing-xi-wankhede-stadium-mumbai-psr-au14-537509.html

Leave a Reply

Your email address will not be published. Required fields are marked *