ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮಾ.17) : ಮುಂದಿನ ದಿನದಲ್ಲಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸಮಿತಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮದ್ಯಪಾನವನ್ನು ನಿಷೇಧ ಮಾಡುವುದಲ್ಲದೆ, ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಉದ್ಯೋಗಗಳನ್ನು ಭರ್ತಿ, ಬಡತನ ನಿರ್ಮೂಲನ ನಿವಾರಣೆಗೆ ಬೇಕಾದ ಅಗತ್ಯವಾದ ಕ್ರಮಗಳನ್ನು ಜಾರಿ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ಸಮಿತಿ ಪಕ್ಷದ ಯುವ ಘಟಕದ ಅಧ್ಯಕ್ಷ ಬಾಲರಾಜ್ ಎಸ್ ಯಾದವ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದಿನ ಸರ್ಕಾರಗಳು ಭ್ರಷ್ಠಾಚಾರದಲ್ಲಿ ತೂಡಗಿದ್ದರಿಂದ ರಾಜ್ಯದ ಅಭಿವೃದ್ದಿಯಲ್ಲಿ ಕುಂಠಿತವಾಗಿದೆ. ಕಾಮಗಾರಿಗಳು ಕಳಪೆಯಾಗಿದೆ. ನಮ್ಮ ಪಕ್ಷ ಕಳೆದ 4 ವರ್ಷದಿಂದ ರಾಜ್ಯದಲ್ಲಿ ನಿರಂತರವಾಗಿ ಜನತೆಯ ಸಂಪರ್ಕದಲ್ಲಿ ಇದ್ದು ಅವರ ಸಮಸ್ಯೆಗಳಿಗೆ ಸ್ಫಂದಿಸುತ್ತಿದ್ದು, ಈ ಭಾರಿ ರಾಜ್ಯದಲ್ಲಿ ಕೆ.ಆರ್.ಎಸ್. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಹಲವಾರು ಜನಪರವಾದ ಯೋಜನೆಗಳನ್ನು ಮತ್ತು ಕಾಮಗಾರಿಗಳನ್ನು ಜಾರಿ ಮಾಡುವುದರ ಮೂಲಕ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ 224 ಕ್ಷೇತ್ರಗಳಿಗೂ ಸಹಾ ಪಕ್ಷದವತಿಯಿಂದ ಅಭ್ಯರ್ಥಿಗಳನ್ನು ಹಾಕಲಾಗುವುದು. ಇದಕ್ಕೆ ಬೇಕಾದ ಸಿದ್ದತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ಕ್ಷೇತ್ರಗಳಿಗೆ ಪಕ್ಷದವತಿಯಿಂದ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದ್ದು ಉಳಿದ ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಿಗೆ ಶೀಘ್ರವಾಗಿ ನೇಮಕ ಮಾಡಲಾಗುವುದೆಂದು ಬಾಲರಾಜ್ ಎಸ್ ಯಾದವ್ ತಿಳಿಸಿದರು.
ಪಕ್ಷದ ಮುಖಂಡರಾದ ಚಂದ್ರಣ್ಣ ಮಾತನಾಡಿ, ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರ ಬರೀ ಕಮಿಷನ್‍ನಲ್ಲಿ ಮುಳಗಿದೆ ಅಭೀವೃದ್ದಿ ಕುಂಠಿತವಾಗಿದೆ. ಜಾತಿ ಧರ್ಮದಲ್ಲಿ ರಾಜಕಾರಣವನ್ನು ಮಾಡುವುದರ ಮೂಲಕ ಅಭಿವೃದ್ದಿಯನ್ನು ಮರೆತ್ತಿದ್ದಾರೆ. ನಮ್ಮ ಸರ್ಕಾರ ಮುಂದಿನ ದಿನದಲ್ಲಿ ಅಧಿಕಾರಕ್ಕೆ ಬಂದಲ್ಲಿ ಮಧ್ಯಪಾನವನ್ನು ನಿಷೇಧ ಮಾಡುವುದರ ಮೂಲಕ ಅದರಿಂದ ಬರುವ ಆದಾಯವನ್ನು ತಿರಸ್ಕಾರ ಮಾಡಿ ಬೇರೆ ಮೂಲಗಳಿಂದ ಸಕಾರವನ್ನು ನಡೆಸಲಾಗುವುದು ಎಂದರು.
ನಾವು ಚುನಾವಣೆಯಲ್ಲಿ ಮತದಾರರಿಗೆ ಮಧ್ಯ ಮತ್ತು ಹಣವನ್ನು ಹಂಚಿಕೆ ಮಾಡದೇ ಮುಂದಿನ ದಿನದಲ್ಲಿ ಅಭೀವೃದ್ದಿಯನ್ನು ಮಾಡುತ್ತೇವೆ ಎಂದು ಮತವನ್ನು ಯಾಚನೆ ಮಾಡಲಾಗುವುದು. ಸೂರುವಿಕೆಯನ್ನು ತಡೆಗಟ್ಟಿದ್ದರೆ ಅದರಿಂದ ಅಭೀವೃದ್ದಿಯನ್ನು ಮಾಡಬಹುದಾಗಿದೆ ಇದನ್ನು ನಮ್ಮ ಪಕ್ಷ ಮಾಡಿ ತೋರಿಸುತ್ತದೆ ಎಂದ ಅವರು, ಹೊಳಲ್ಕೆರೆಯಲ್ಲಿ ನಿರ್ಮಾಣವಾಗಿರುವ ಕಟ್ಟಡಗಳು ಹೊರಗಡೆ ಮಾತ್ರ ಚನ್ನಾಗಿ ಇದ್ದು ಒಳಗಡೆ ಸರಿಯಿಲ್ಲ ಇದರ ಬಗ್ಗೆ ಅಧಿಕಾರಿಗಳಾಗಲೀ ಚುನಾಯಿತ ಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಂಡಿಲ್ಲ ಎಂದು ಚಂದ್ರಣ್ಣ ತಿಳಿಸಿದರು.
ಗೋಷ್ಠಿಯಲ್ಲಿ ಸಿದ್ದರಾಮಪ್ಪ, ಅಂಜಿನಪ್ಪ, ವಿನಾಯಕ ಪುಟ್ಟಮ್ಮ ಭಾಗವಹಿಸಿದ್ದರು.
The post ಕರ್ನಾಟಕ ರಾಜ್ಯ ಸಮಿತಿ ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯಪಾನ ನಿಷೇಧ : ಬಾಲರಾಜ್ ಎಸ್ ಯಾದವ್ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/iLmuBCv
via IFTTT