ಬಾಲಕನೊಬ್ಬ ತನ್ನ ಸಮಯ (Time) ಪ್ರಜ್ನೆ ಹಾಗೂ ಜಾಣ್ಮೆಯಿಂದ ಹಲವಾರು ಜನರ ಪ್ರಾಣ ಕಾಪಾಡಿದ್ದಾನೆ. ಆತ ಮಾಡಿದ್ದೇನು ಎಂಬ ಕೂತೂಹಲ ನಿಮಗಿದ್ದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ. ಪಶ್ಚಿಮ ಬಂಗಾಳದಲ್ಲಿ (West Bengal) 12 ವರ್ಷದ ಬಾಲಕನೊಬ್ಬ ತನ್ನ ಕೆಂಪು (Red) ಟೀ ಶರ್ಟ್ ಅನ್ನು ಧ್ವಜವಾಗಿ ಬಳಸಿ ಹಾನಿಗೊಳಗಾದ ರೈಲು ಹಳಿಗಳ ಬಗ್ಗೆ ಎಚ್ಚರಿಸಿದ್ದಾನೆ. ಈ ಸುದ್ದಿ (News) ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ವೇಗವಾಗಿ ಚಲಿಸುತ್ತಿದ್ದ ರೈಲಿನ ಚಾಲಕನಿಗೆ ಎಚ್ಚರಿಕೆ ನೀಡುವ ಮೂಲಕ ದೊಡ್ಡ ರೈಲು ಅಪಘಾತವನ್ನು ತಪ್ಪಿಸಿದ್ದಾನೆ. ಕಳೆದ ಗುರುವಾರ ಪಶ್ಚಿಮ ಬಂಗಾಳದ ಮಾಲ್ಡಾದ ರೈಲ್ವೆ ಯಾರ್ಡ್ ಬಳಿ ಈ ಘಟನೆ ನಡೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಮುರ್ಸಲೀನ್ ಶೇಖ್ ಎಂಬ ಹುಡುಗ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕನ ಮಗ. ಘಟನೆ ವೇಳೆ ಮುಸಲೀನ್ ಕೆಲ ಕಾರ್ಮಿಕರೊಂದಿಗೆ ಹೊಲದಲ್ಲಿ ಇದ್ದ.ಅಲ್ಲಿ, ಯಾರ್ಡ್ ಬಳಿಯ ರೈಲ್ವೆ ಹಳಿಗಳ ಒಂದು ಭಾಗವು ಹಾನಿಗೊಳಗಾಗಿರುವುದನ್ನು ಆ ಬಾಲಕ ಗಮನಿಸಿದ್ದಾನೆ. ಪ್ಯಾಸೆಂಜರ್ಗಳನ್ನು ತುಂಬಿಕೊಂಡಿದ್ದ ರೈಲು ವೇಗವಾಗಿ ಆ ಹಳಿಯ ಮೇಲೇ ಬರುತ್ತಿತ್ತು. ತಕ್ಷಣ ಆ ಹುಡುಗ ತನ್ನ ಕೆಂಪು ಟೀ ಶರ್ಟ್ ತೆಗೆದು ಮುಂದೆ ಬರುತ್ತಿದ್ದ ರೈಲಿಗೆ ಕೈ ಬೀಸತೊಡಗಿದ. ರೈಲಿನ ಲೊಕೊಮೊಟಿವ್ ಪೈಲಟ್ ಸಿಗ್ನಲ್ ಗುರುತಿಸಿ ತುರ್ತು ಬ್ರೇಕ್ ಹಾಕಿದ್ದರಿಂದ ಅಪಘಾತ ತಪ್ಪಿದೆ.
ಘಟನೆಯ ಕುರಿತು ಮಾತನಾಡಿದ ಈಶಾನ್ಯ ಗಡಿ ರೈಲ್ವೆಯ ವಕ್ತಾರ ಸಬ್ಯಸಾಚಿ ಡಿ, ಮಾಲ್ಡಾದಲ್ಲಿ 12 ವರ್ಷದ ಮಗು ತನ್ನ ಕೆಂಪು ಶರ್ಟ್ ಅನ್ನು ರೈಲಿಗೆ ಬೀಸಿದ್ದಾನೆ ಇದರಿಂದಾಗಿ ಲೊಕೊ-ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ ಎಂದು ಹೇಳಿದ್ದಾರೆ. ಬಂದ ಭಾರೀ ಮಳೆಯಿಂದಾಗಿ ರೈಲು ಹಳಿ ಈ ರೀತಿಯಾಗಿತ್ತು ಎಂದು ಅವರು ಹೇಳಿದ್ದಾರೆ. ಮತ್ತು ಆ ಬಾಲಕ ಮಾಡಿದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಹಳಿಗಳ ಕೆಳಗೆ ಮಳೆಯಿಂದ ಹಾನಿಗೊಳಗಾದ ಭಾಗವನ್ನು ನೋಡಿದ ಹುಡುಗ ಸರಿಯಾದ ಸಮಯದಲ್ಲಿ ಸಂವೇದನಾಶೀಲನಾಗಿ ವರ್ತಿಸಿದ್ದಾನೆ.
ರೈಲ್ವೆ ಅಧಿಕಾರಿಗಳು ಬಾಲಕನಿಗೆ ಶೌರ್ಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು ಮತ್ತು ನಗದು ಬಹುಮಾನವನ್ನು ಸಹ ನೀಡಿದರು. ಸ್ಥಳೀಯ ಸಂಸದರು ಮತ್ತು ವಿಭಾಗೀಯ ರೈಲು ವ್ಯವಸ್ಥಾಪಕರು ಬಾಲಕನ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ನಂತರ ಹಳಿಗಳ ಹಾನಿಗೊಳಗಾದ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1