Space Debris: ಇದು ಉಪಗ್ರಹ ಉಡಾವಣೆಗಾಗಿ ಬಳಸಲಾದ 20 ವರ್ಷಗಳಷ್ಟು ಹಳೆಯದಾದ ಭಾರತೀಯ ರಾಕೆಟ್‌ನ ತುಣುಕಾಗಿರಬಹುದು ಎಂದು ಹೇಳಲಾಗುತ್ತಿದೆ. ಪರ್ತ್ ನಿಂದ ಉತ್ತರಕ್ಕೆ 250 ಕಿಲೋಮೀಟರ್ ದೂರದಲ್ಲಿರುವ ಗ್ರೀನ್ ಹೆಡ್ ಬೀಚ್‌ನಲ್ಲಿ ಈ ಗುಮ್ಮಟದ ಆಕಾರದ ವಸ್ತು ಕಂಡುಬಂದಿದೆ.

Space Debris: ಚಂದ್ರಯಾನ 3 ಚಂದ್ರನ ಮೇಲೆ ಇಳಿಯುವ ಕ್ಷಣವನ್ನು ನೋಡಲು ಇಡೀ ದೇಶವೇ ಕಾಯುತ್ತಿದೆ, ಆದರೆ ಈ ಮಧ್ಯೆ, ಆಸ್ಟ್ರೇಲಿಯಾದ ದೂರದ ಕಡಲತೀರದಲ್ಲಿ ಗುಮ್ಮಟದ ಆಕಾರದ ನಿಗೂಢ ವಸ್ತುವೊಂದು ಪತ್ತೆಯಾಗಿದೆ. ಈ ವಸ್ತುವಿನ ಬಗ್ಗೆ ನಾನಾ ಊಹಾಪೋಹಗಳು ಹರಿದಾಡುತ್ತಿವೆ. ಇದು ಉಪಗ್ರಹ ಉಡಾವಣೆಗಾಗಿ ಬಳಸಲಾದ 20 ವರ್ಷಗಳಷ್ಟು ಹಳೆಯದಾದ ಭಾರತೀಯ ರಾಕೆಟ್‌ನ ತುಣುಕಾಗಿರಬಹುದು ಎಂದು ಹೇಳಲಾಗುತ್ತಿದೆ. ಪರ್ತ್ ನಿಂದ ಉತ್ತರಕ್ಕೆ 250 ಕಿಲೋಮೀಟರ್ ದೂರದಲ್ಲಿರುವ ಗ್ರೀನ್ ಹೆಡ್ ಬೀಚ್‌ನಲ್ಲಿ ಈ ಗುಮ್ಮಟದ ಆಕಾರದ ವಸ್ತು ಕಂಡುಬಂದಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂಲಗಳು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆಯಿಂದ ಔಪಚಾರಿಕ ಸಂವಹನದ ಸ್ವೀಕೃತಿಯನ್ನು ದೃಢಪಡಿಸಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ವಿವರಗಳನ್ನು ನೀಡಿಲ್ಲ.
ಸ್ಪೇಸ್ ಜಂಕ್ ತುಂಡು: ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ (ASA) ಸೇರಿದಂತೆ ರಾಷ್ಟ್ರೀಯ ಏಜೆನ್ಸಿಗಳು ವಸ್ತುವನ್ನು ವಿಶ್ಲೇಷಿಸಿಮ ವಿಚಿತ್ರವಾಗಿ ಕಾಣುವ ಈ ವಸ್ತುವನ್ನು ಬಾಹ್ಯಾಕಾಶ ಅವಶೇಷಗಳ ತುಂಡು ಎಂದು ಘೋಷಿಸಿದೆ. ಈ ವಸ್ತುವು 20 ವರ್ಷಗಳಷ್ಟು ಹಳೆಯದಾದ ಭಾರತೀಯ ರಾಕೆಟ್‌ನ ತುಣುಕಾಗಿರಬಹುದು ಎಂದು ಬಾಹ್ಯಾಕಾಶ ತಜ್ಞರು ಹೇಳುತ್ತಾರೆ.
‘ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್’ನ ಸುದ್ದಿ ಪ್ರಕಾರ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಎಂಜಿನಿಯರ್ ಆಂಡ್ರಿಯಾ ಬಾಯ್ಡ್ ಅವರು ಉಪಗ್ರಹವನ್ನು ಉಡಾವಣೆ ಮಾಡುವ ಭಾರತೀಯ ರಾಕೆಟ್‌ನಿಂದ ಈ ವಸ್ತು ಬಿದ್ದಿದೆ ಎಂದು ಹೇಳಿದ್ದಾರೆ.
ಆಂಡ್ರಿಯಾ ಬಾಯ್ಡ್ ಪ್ರಕಾರ, ಅದರ ಗಾತ್ರವನ್ನು ಆಧರಿಸಿ, ಇದು ಭಾರತೀಯ ರಾಕೆಟ್‌ನ ಮೇಲಿನ ಹಂತದಲ್ಲಿರುವ ಎಂಜಿನ್ ಆಗಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ. ಇದನ್ನು ವಿವಿಧ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹ:
‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ಪತ್ರಿಕೆಯ ಸುದ್ದಿ ಪ್ರಕಾರ, ಅನೇಕ ಜನರು ಈ ವಸ್ತುವು ಭಾರತೀಯ ರಾಕೆಟ್‌ನಿಂದ ಬಂದ ಬಾಹ್ಯಾಕಾಶ ಕಸ ಎಂದು ಸಾಮಾಜಿಕ ಮಾಧ್ಯಮದಲ್ಲಿ ಊಹೆ ಮಾಡಲು ಪ್ರಾರಂಭಿಸಿದ್ದಾರೆ.
ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ ಖಗೋಳಶಾಸ್ತ್ರಜ್ಞ ಡಾ. ಡೋರಿಸ್ ಗ್ರೋಸ್ ಮತ್ತು ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಬಾಹ್ಯಾಕಾಶ ಪುರಾತತ್ವಶಾಸ್ತ್ರಜ್ಞ ಡಾ. ಆಲಿಸ್ ಗೊರ್ಮನ್ ಅವರು ಇದು ಬಹುಶಃ ಭಾರತದ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆಯ ಮೂರನೇ ಹಂತದ ಇಂಧನ ಸಿಲಿಂಡರ್ ಆಗಿರಬಹುದು ಎಂದು ಅಂದಾಜಿಸಿದ್ದಾರೆ.
ಇದು ಜನರಿಗೆ ಅಪಾಯವನ್ನುಂಟುಮಾಡುತ್ತದೆಯೇ ಎಂದು ಖಚಿತಪಡಿಸಿಕೊಳ್ಳುತ್ತಿರುವ ಕಾರಣ ಪೊಲೀಸರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮತ್ತು ರಸಾಯನಶಾಸ್ತ್ರ ಕೇಂದ್ರದ ಸಹಾಯ ಪಡೆದಿದೆ. ಈ ಬಳಿಕ ಸಮುದಾಯಕ್ಕೆ ಅಪಾಯವನ್ನುಂಟುಮಾಡುವುದಿಲ್ಲ ಎಂದು ಬಹಿರಂಗವಾಗಿದೆ. “ಇದರಲ್ಲಿ ಇನ್ನೂ ಸ್ವಲ್ಪ ಇಂಧನ ಇರಬಹುದು, ಜನರು ಅದನ್ನು ಮುಟ್ಟಬಾರದು” ಎಂದು ಅವರು ಹೇಳಿದರು.