ಕಳೆದ ಫೆಬ್ರವರಿಯಲ್ಲಿ ಟರ್ಕಿಯಲ್ಲಿ ಭೂಕಂಪವಾಗಿತ್ತು. ನೂರಾರು ಜನ ಆ ಭೂಕಂಪದ ಒಡೆತನಕ್ಕೆ ಸಿಲುಕಿ ಸಾವನ್ನಪ್ಪಿದ್ದರು. ಆ ಭೂಕಂಪನದ ಸಂದರ್ಭದಲ್ಲಿ ಒಂದಷ್ಟು ಮನಕಲುಕುವ ಘಟನೆಯೂ ನಡೆದಿದೆ. ಒಂದು ಮಗು ಭೂಕಂಪನದ ನಡುವೆಯೂ ಜನಿಸಿತ್ತು. ಆದ್ರೆ ಅವರ ತಾಯಿ ಆ ಕ್ಷಣಕ್ಕೆ ಅದೆಲ್ಲಿ ನಾಪತ್ತೆಯಾದರೋ ತಿಳಿಯದು.
ಆ ಮಗುವಿನ ಅದೃಷ್ಟ ತುಂಬಾ ಚೆನ್ನಾಗಿತ್ತು ಎನಿಸುತ್ತೆ. ಅದಕ್ಕೆ ಮಗು ಅಷ್ಟು ಒತ್ತಡದ ನಡುವೆಯೂ ಜನ್ಮ ತಾಳಿತ್ತು. ಈಗ ತಾಯಿಯನ್ನು ಮರಳಿ ಪಡೆದಿದೆ. ಅಂದು ಕಾಣೆಯಾಗಿದ್ದ ತಾಯಿ ಈಗ ಸಿಕ್ಕಿದ್ದಾರೆ ಎನ್ನಲಾಗುತ್ತಿದೆ. ಸುಮಾರು 128 ಗಂಟೆಗಳ ಕಾಲ ಕಟ್ಟಡದಡಿ ಸಿಲುಕಿದ್ದ ಮಗುವಿನ ತಾಯಿ ಈಗ ಸಿಕ್ಕಿದ್ದಾರೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರಬಲ ಭೂಕಂಪದ ನಡುವೆ ಬದುಕುಳಿದವರೆಷ್ಟೋ, ಸತ್ತವರೆಷ್ಟೋ. ಮಗುವಿಗೆ ಜನ್ಮ ನೀಡಿದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಡಿಎನ್ಎ ಪರೀಕ್ಷೆಯ ಮೂಲಕ ಇವರೇ ಮಗುವಿನ ತಾಯಿ ಎಂಬ ಸತ್ಯ ಗೊತ್ತಾಗಿದೆ. ಸದ್ಯ ತಾಯಿ ಮಗು ಒಂದಾಗುವ ಕಾಲ ಬಂದಿದೆ. ಆ ಮಗುವಿಗೆ ಎಲ್ಲರು ಹಾರೈಸಿದ್ದಾರೆ.
The post ಟರ್ಕಿಯ ಭೂಕಂಪದಲ್ಲಿ ಜನಿಸಿದ್ದ ಮಗುಗೆ ಇನ್ನಷ್ಟು ಅದೃಷ್ಟ : ಕಳೆದೋಗಿದ್ದ ಅಮ್ಮನು ಸಿಕ್ಕಿದ್ರು..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/7MGjuAS
via IFTTT