ಚಿತ್ರದುರ್ಗ: ಪಾರಿವಾಳದ ಜೀವ ಉಳಿಸಿ ಪ್ರಾಣ ಕಳೆದುಕೊಂಡ ಬಾಲಕ!

ಚಿತ್ರದುರ್ಗ: ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕನೋರ್ವ ಪ್ರಾಣ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಹನುಮಾಪುರ ಗ್ರಾಮದ ಓಬಳಸ್ವಾಮಿ ಎಂಬವರ ಪುತ್ರ ರಾಮಚಂದ್ರ (12) ಮೃತ ಬಾಲಕ. ಗ್ರಾಮದ ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳ ಕಂಡು ಜೀವ ಉಳಿಸಲು ಕಂಬ ಏರಿದ್ದ ಬಾಲಕ ವಿದ್ಯುತ್ ಹರಿದು ಮೃತಪಟ್ಟಿದ್ದಾನೆ.

ವಿದ್ಯುತ್ ಶಾಕ್‌ನಿಂದಾಗಿ ಬಾಲಕನ ಶವ ವಿದ್ಯುತ್ ಕಂಬದಲ್ಲಿನ ತಂತಿಗೆ ಸಿಲುಕಿ ನೇತಾಡುತ್ತಿದ್ದು, ಮಾನವೀಯತೆಯಿಂದ ಪಾರಿವಾಳದ ಜೀವ ಉಳಿಸಲು ಮುಂದಾಗಿದ್ದ ಬಾಲಕ ತನ್ನ ಜೀವವನ್ನೇ ಬಲಿ ನೀಡಿದ್ದಾನೆ. ಸ್ಥಳಕ್ಕೆ ರಾಂಪುರ ಸಬ್ ಇನ್ಸ್‌ಪೆಕ್ಟರ್‌ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source : https://www.kannadaprabha.com/karnataka/2024/Jul/24/chitradurga-boy-get-electrocuted-while-trying-to-rescue-pigeon

 

Views: 0

Leave a Reply

Your email address will not be published. Required fields are marked *