ಐಮಂಗಲದ ಬಳಿ ಬಸ್-ಲಾರಿ ಭೀಕರ ಅಪಘಾತ: 25ಕ್ಕೂ ಹೆಚ್ಚು ಮಂದಿ ಗಾಯಾಳು, ಚಿತ್ರದುರ್ಗ ಸಂಸದರಿಂದ ಸಾಂತ್ವನ.

ಚಿತ್ರದುರ್ಗ ಸೆ. 28

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ಐಮಂಗಲದ ಉಪಾಧ್ಯ ಹೋಟೆಲ್ ಬಳಿ ಸರ್ಕಾರಿ ಬಸ್ ಮತ್ತು ತಮಿಳುನಾಡಿನ ಲಾರಿ ನಡುವೆ ಬೀಕರ ಅಪಘಾತ ನಡೆದು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ. ಬಾನುವಾರ ಬೆಳಗಿನ ಜಾವ 2.45 ರ ವೇಳೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿಯ ಉಪಾಧ್ಯ ಹೋಟೆಲ್ ಬಳಿ ಘಟನೆ ನಡೆದಿದ್ದು ಇಪ್ಪತ್ತೈದಕ್ಕೂ ಹೆಚ್ಚು ಪ್ರಯಾಣಿಕರು ಗಂಬೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನ ಹಿರಿಯೂರು ಹಾಗೂ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ. 


ಸರ್ಕಾರಿ ಬಸ್ಸು ಬೀಳಿಗಿಯಿಂದ ಬೆಂಗಳೂರಿಗೆ ಹೂರಟ್ಟಿದ್ದು, ಐಮಂಗಲದ ಉಪಾಧ್ಯ ಹೋಟೆಲ್ ಬಳಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಇದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸುನಲ್ಲಿದ್ದ ಚಾಲಕ ಮತ್ತು ನಿರ್ವಾಹಕ ಸೇರಿದಂತೆ 45 ಜನರಲ್ಲಿ ಸುಮಾರು 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಚಿತ್ರದುರ್ಗದ ಸಂಸದರಾದ ಗೋವಿಂದ ಕಾರಜೋಳ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಮುಖಂಡರು ಇಂದು ಸರ್ಕಾರಿ ಆಸ್ಪತ್ರೆಗೆ ಭೇಟಿ ಗಾಯಾಳುಗಳ ಯೋಗ ಕ್ಷೇಮವನ್ನು ವಿಚಾರ ಮಾಡಿದರು.


ಈ ಸಮಯದಲ್ಲಿ ಗಾಯಾಗಳು ಅಫಘಾತದಲ್ಲಿ ತಮಗೆ ಅದ ನೋವನ್ನು ಸಂಸದರಿಗೆ ಮಾಜಿ ಶಾಸಕರಿಗೆ ತಿಳಿಸಿದರು. ಸಂಸದರು ಎಲ್ಲಾ ಗಾಯಾಳುಗಳನ್ನು ಬೇಟಿ ಮಾಡಿ ಮಾತನಾಡಿಸಿ ಅವರಿಗೆ ಸ್ವಾಂತಾನವನ್ನು ತಿಳಿಸಿ ಹೆದರ ಬೇಡಿ ನಾನು ಇದ್ದೇನೆ ಎಂದು ಭರವಸೆಯನ್ನು ನೀಡಿದರು, ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರುಗಳಿಗೆ ಗಾಯಾಳುಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಿ ಉತ್ತಮವಾದ ಚಿಕಿತ್ಸೆಯನ್ನು ನೀಡಿ, ಅದೇ ರೀತಿ ಉತ್ತಮವಾದ ಔಷಧಿಗಳನ್ನು ಕೂಡಿ ಇವರು ನಮ್ಮ ಊರಿನವರು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದರು ದಾರಿ ಮಧ್ಯದಲ್ಲಿ ಅಪಘಾತವಾಗಿದೆ, ಇವರನ್ನು ಸರಿಯಾಗಿ ನೋಡಿಕೊಳ್ಳಿ ಎಂದು ವ್ಯದ್ಯರಿಗೆ ಸಂಸದರು ಸೂಚನೆಯನ್ನು ನೀಡಿದರು.


ಈ ಸಂದರ್ಭದಲ್ಲಿ ಬಿಜೆಪಿ ಖಂಜಾಚಿ ಮಾಧುರಿ ಗೀರಿಶ್, ಮುಖಂಡರಾದ ಡಾ.ಸಿದ್ದಾರ್ಥ ಗುಡಾರ್ಪಿ ಮಾಜಿ ಅಧ್ಯಕ್ಷರಾದ ಎ.ಮುರಳಿ, ನಗರಸಭಾ ಸದಸ್ಯರಾದ ಸುರೇಶ್, ಶ್ರೀನಿವಾಸ್ ಮಾಜಿ ಸದಸ್ಯರಾದ ರವಿಶಂಕರ್, ನಗರಾಧ್ಯಕ್ಷರಾದ ಲೋಕೇಶ್, ಗ್ರಾಮಾಂತರ ಅಧ್ಯಕ್ಷರಾದ ಕೆ.ನಾಗರಾಜ್ ಉಪ್ಪೇರಿಗೆನಹಳ್ಳಿ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ, ಸೇರಿದಂತೆ ಇತರರು ಉಪಸ್ಥಿತರಿದ್ದರು

Views: 45

Leave a Reply

Your email address will not be published. Required fields are marked *