ರಾಮನಗರ ಜಿಲ್ಲೆಯಲ್ಲೊಂದು ವೈದ್ಯಕೀಯ ಲೋಕಕ್ಕೂ ಮೀರಿದ ಅಚ್ಚರಿಯ ಘಟನೆಯೊಂದು ನಡೆದಿದೆ. ಬೆಳಗ್ಗೆ 6.30ಕ್ಕೆ ಮೃತಪಟ್ಟಿದ್ದ ವ್ಯಕ್ತಿಗೆ ಮಧ್ಯಾಹ್ನ 12 ಗಂಟೆಗೆ ಮರುಜೀವ ಬಂದಿದೆ. ಬಳಿಕ ಮಧ್ಯಾಹ್ನ 12.45ಕ್ಕೆ ಮತ್ತೆ ಮೃತಪಟ್ಟಿದ್ದಾರೆ. ಶಿವರಾಮು ಶವವನ್ನು ಮತ್ತೆ ಹುಚ್ಚಯ್ಯನದೊಡ್ಡಿಗೆ ಸಂಬಂಧಿಕರು ತಂದಿದ್ದು, ಮತ್ತೆ ಜೀವಬರಬಹುದೆಂದು ಮನೆ ಬಳಿ ಶವವಿಟ್ಟು ಸಂಬಂಧಿಕರು ಕಾಯಿದಿದ್ದಾರೆ.

ರಾಮನಗರ, ಏಪ್ರಿಲ್ 08: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿಯಲ್ಲಿ ಬೆಳಗ್ಗೆ 6.30ಕ್ಕೆ ಮೃತಪಟ್ಟಿದ್ದ (dead) ವ್ಯಕ್ತಿಗೆ ಮಧ್ಯಾಹ್ನ 12 ಗಂಟೆಗೆ ಮರುಜೀವ ಬಂದಿದೆ. ಬಳಿಕ ಮಧ್ಯಾಹ್ನ 12.45ಕ್ಕೆ ಮತ್ತೆ ಮೃತಪಟ್ಟಿರುವುದು ವೈದ್ಯಕೀಯ ಲೋಕದಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ಕೂಲಿ ಕಾರ್ಮಿಕ ಶಿವರಾಮು(55) ಮೃತ ವ್ಯಕ್ತಿ. ಬೆಳಗ್ಗೆ 6.30ಕ್ಕೆ 55 ವರ್ಷದ ಶಿವರಾಮು ಕುಸಿದುಬಿದ್ದು ಮೃತಪಟ್ಟಿದ್ದಾರೆ. ತಕ್ಷಣ ವೈದ್ಯರನ್ನು ಕರೆಸಿ ತಪಾಸಣೆ ನಡೆಸಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಹೇಳಿದ್ದಾರೆ. ಆದರೆ ಶವಸಂಸ್ಕಾರಕ್ಕೆ ಕೊಂಡೊಯ್ಯುವಾಗ ಶಿವರಾಮು ಎದ್ದು ಕುಳಿತಿದ್ದಾರೆ.
ಶಿವರಾಮು ಎದ್ದು ಕೂರುತ್ತಿದ್ದಂತೆ ವೈದ್ಯರಿಗೆ ಕುಟುಂಬಸ್ಥರಿಂದ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ವೈದ್ಯರಿಂದ ಶಿವರಾಮು ದೇಹಸ್ಥಿತಿ ಬಗ್ಗೆ ತಪಾಸಣೆ ಮಾಡಲಾಗಿದೆ. ಹಾರ್ಟ್ಅಟ್ಯಾಕ್ ಆಗುತ್ತಿದೆ, ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಿದ್ದಾರೆ. ಜಯದೇವ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆ ಮತ್ತೆ ಕೊನೆಯುಸಿರೆಳೆದ್ದಾರೆ.
ಶಿವರಾಮು ಶವವನ್ನು ಮತ್ತೆ ಹುಚ್ಚಯ್ಯನದೊಡ್ಡಿಗೆ ಸಂಬಂಧಿಕರು ತಂದಿದ್ದು, ಮತ್ತೆ ಜೀವಬರಬಹುದೆಂದು ಮನೆ ಬಳಿ ಶವವಿಟ್ಟು ಸಂಬಂಧಿಕರು ಕಾಯಿದಿದ್ದಾರೆ. ಮತ್ತೊಂದೆಡೆ ಗ್ರಾಮಸ್ಥರು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿಯ ಪ್ರಕರಣ ಕಂಡುಬಂದಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1