ನನಸಾಯ್ತು ಕನಸು… ಆಟೋ ಚಾಲಕನ ಮಗನಿಗೆ ಕೊನೆಗೂ Team Indiaದಲ್ಲಿ ಸಿಕ್ಕೇಬಿಡ್ತು ಸ್ಥಾನ!

India vs West Indies Test Series: ಕ್ರಿಕೆಟಿಗನಾಗುವ ಪಯಣದಲ್ಲಿ ವೇಗದ ಬೌಲರ್ ಮುಖೇಶ್ ಕುಮಾರ್ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದು, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಆಯ್ಕೆಯಾದ ಬಳಿಕ “ಕನಸು ನನ್ನ ಮುಂದಿದೆ” ಎಂದು ಹೇಳಿಕೆ ನೀಡಿದ್ದಾರೆ.

India vs West Indies Test Series: ಟೀಮ್ ಇಂಡಿಯಾದ 2023-25 ​​ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರವು ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ಜುಲೈ 12 ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿರುವ ಭಾರತದ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಪ್ರಕಟಿಸಲಾಗಿದೆ. ಮಾರಣಾಂತಿಕ ವೇಗದ ಬೌಲರ್ ಒಬ್ಬರು ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಆಟಗಾರ ತಂಡಕ್ಕೆ ಆಯ್ಕೆಯಾದ ಬಳಿಕ ಹೇಳಿಕೆ ನೀಡಿದ್ದಾರೆ.

ಈ ಆಟಗಾರನಿಗೆ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಅವಕಾಶ:

ಕ್ರಿಕೆಟಿಗನಾಗುವ ಪಯಣದಲ್ಲಿ ವೇಗದ ಬೌಲರ್ ಮುಖೇಶ್ ಕುಮಾರ್ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದು, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಆಯ್ಕೆಯಾದ ಬಳಿಕ “ಕನಸು ನನ್ನ ಮುಂದಿದೆ” ಎಂದು ಹೇಳಿಕೆ ನೀಡಿದ್ದಾರೆ. ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಆಯ್ಕೆಯಾದ ನಂತರ, ಬಂಗಾಳದ ವೇಗದ ಬೌಲರ್ ಮಾತನಾಡಿದ್ದು, “ಕ್ರಿಕೆಟ್ ಬದುಕಿನಲ್ಲಿ ಟೆಸ್ಟ್ ಆಡದಿದ್ದರೆ, ಬೇರೆ ಯಾವುದೇ ಪಂದ್ಯ ಆಡಿದ್ದರೂ, ಏನನ್ನು ಆಡಿದ್ದೀರಿ ಎಂದು ಕೇಳಲಾಗುತ್ತದೆ. ಟೆಸ್ಟ್ ಆಡುವುದು ನನ್ನ ಕನಸು, ಆ ಕನಸು ಈಗ ನನ್ನ ಮುಂದಿದೆ. ನಾನು ಯಾವಾಗಲೂ ಟೆಸ್ಟ್ ಪ್ರವೇಶಿಸಲು ಆಸೆ ಪಡುತ್ತಿದ್ದೆ. ಇದೀಗ ಅಂತಿಮವಾಗಿ ಆ ಸ್ಥಾನಕ್ಕೆ ಏರಿದ್ದೇನೆ” ಎಂದರು.  

ಮುಖೇಶ್ ಕುಮಾರ್ ತಂದೆ ಆಟೋ ಚಾಲಕ:

ಬಿಹಾರದ ಗೋಪಾಲಗಂಜ್ ನಿವಾಸಿ ಮುಖೇಶ್ ಕುಮಾರ್ ಅವರ ತಂದೆ ಆಟೋ ಓಡಿಸುತ್ತಿದ್ದರು. ಆದರೆ 2019 ರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಮುಖೇಶ್ ಕುಮಾರ್ ಅವರ ಜೀವನವು ಹೋರಾಟಗಳಿಂದ ತುಂಬಿತ್ತು ಎಂದು ಹೇಳಲಾಗುತ್ತದೆ. ಆದರೆ ಅವರ ಹೋರಾಟದಿಂದಾಗಿಯೇ ಟೀಂ ಇಂಡಿಯಾದವರೆಗೂ ಪ್ರಯಾಣಿಸಿದ್ದಾರೆ. ಅವರ ತಂದೆ ಕಾಶಿನಾಥ್ ಸಿಂಗ್ ಅವರು ಕ್ರಿಕೆಟ್ ಆಡುವುದನ್ನು ವಿರೋಧಿಸುತ್ತಿದ್ದರು. ತಂದೆಗೆ ಸಿ ಆರ್‌ ಪಿ ಎಫ್‌ ಗೆ ಸೇರಲು ಆಸೆ. ಇದೇ ಕಾರಣದಿಂದ ಮುಖೇಶ್ ಎರಡು ಬಾರಿ ಸಿ ಆರ್‌ ಪಿ ಎಫ್ ಪರೀಕ್ಷೆ ಬರೆದಿದ್ದರೂ ಸಹ ಅದರಲ್ಲಿ ಅನುತ್ತೀರ್ಣರಾದರು. ಆ ಬಳಿಕ ಬಿಹಾರದ ಅಂಡರ್-19 ತಂಡವನ್ನು ಪ್ರತಿನಿಧಿಸಿದ ಮುಖೇಶ್ ಕ್ರಿಕೆಟ್ ವೃತ್ತಿಜೀವನವೂ ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಆನಂತರ ಅವರು ಬಂಗಾಳದಲ್ಲಿ ಕ್ರಿಕೆಟ್ ಆಡಲು ನಿರ್ಧರಿಸಿದರು.

ದೇಶೀಯ ಕ್ರಿಕೆಟ್‌ ನಲ್ಲಿ ಅದ್ಭುತ ಸಾಧನೆ:

ಮುಖೇಶ್ ಕುಮಾರ್ ಇದುವರೆಗೆ 39 ಪ್ರಥಮ ದರ್ಜೆ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ. ಲಿಸ್ಟ್-ಎಯಲ್ಲಿ 24 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶ-ಎ ವಿರುದ್ಧ ಆಡಿದ ಸರಣಿಯಲ್ಲಿ ಮುಕೇಶ್ ಕುಮಾರ್ ಭಾರತ ಎ ಪರ ಆಡಿದ್ದರು, ಆ ಸರಣಿಯಲ್ಲಿ ಅವರು 2 ಪಂದ್ಯಗಳಲ್ಲಿ ಒಟ್ಟು 9 ವಿಕೆಟ್ ಪಡೆದಿದ್ದರು. ಈ ವರ್ಷ ಅವರು ಐಪಿಎಲ್‌ನಲ್ಲಿಯೂ ಆಡುವ ಅವಕಾಶವನ್ನು ಪಡೆದಿದ್ದರು.

Source : https://zeenews.india.com/kannada/sports/ind-vs-wi-mukhesh-kumar-son-of-auto-driver-got-a-place-in-team-india-141922

Leave a Reply

Your email address will not be published. Required fields are marked *