Skip to content
  • Sunday, July 6, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • ಸೆಲ್ಫಿ ಕೇಳಿದ ಅಭಿಯಾನಿಯನ್ನೇ ಮದುವೆಯಾಗಲಿರುವ ಖ್ಯಾತ ಟೆನಿಸ್ ಆಟಗಾರ್ತಿ
Sports

ಸೆಲ್ಫಿ ಕೇಳಿದ ಅಭಿಯಾನಿಯನ್ನೇ ಮದುವೆಯಾಗಲಿರುವ ಖ್ಯಾತ ಟೆನಿಸ್ ಆಟಗಾರ್ತಿ

May 31, 2023
samagrasuddi

ಖ್ಯಾತನಾಮರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯ ವಿಷಯ. ಅದರಲ್ಲೂ ಕೆಲವೊಮ್ಮೆ ತಮ್ಮ ನೆಚ್ಚಿನ ತಾರೆಯರ ಜೊತೆ ಒಂದೇ ಒಂದು ಫೋಟೋಗಾಗಿ ಹರಸಾಹಸಪಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಅಭಿಮಾನಿಗೆ ಅಂತಹ ಯಾವುದೇ ಸಾಹಸ ಎದುರಾಗಿಲ್ಲ. ಒಂದೇ ಒಂದು ಸೆಲ್ಫಿ ಕ್ಲಿಕ್​ನಿಂದ ಟೆನಿಸ್ ತಾರೆಯನ್ನೇ ಮೋಡಿ ಮಾಡಿದ್ದಾರೆ.ಹೌದು, ವೆನೆಜುವೆಲಾ-ಸ್ಪೇನ್​ನ ಖ್ಯಾತ ಟೆನಿಸ್ ಆಟಗಾರ್ತಿ ಗಾರ್ಬಿನ್ ಮುಗುರೂಝ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಅದು ಕೂಡ ತಮ್ಮ ಅಭಿಮಾನಿ ಜೊತೆ ಎಂಬುದೇ ಇಲ್ಲಿ ವಿಶೇಷ.2016 ರಲ್ಲಿ ಫ್ರೆಂಚ್ ಓಪನ್ ಹಾಗೂ 2017 ರಲ್ಲಿ ವಿಂಬಲ್ಡನ್ ಕಿರೀಟ ಗೆದ್ದಿದ್ದ ಗಾರ್ಬಿನ್ ಮುಗುರೂಝ ವಿಶ್ವದ ನಂಬರ್ 1 ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಇದೀಗ ಟೆನಿಸ್ ಅಂಗಳದಿಂದ ದೂರವೇ ಉಳಿದಿರುವ ಮುಗುರೂಝ ತಮ್ಮ ಬಹುಕಾಲದ ಗೆಳೆಯ ಆರ್ಥರ್ ಬೋರ್ಗೆಸ್ ಜೊತೆ ವಿವಾಹವಾಗಲು ನಿರ್ಧರಿಸಿದ್ದಾರೆ.ವಿಶೇಷ ಎಂದರೆ ಆರ್ಥರ್ ಬೋರ್ಗೆಸ್ ಹಾಗೂ ಗಾರ್ಬಿನ್ ಮುಗುರೂಝ ನಡುವಣ ಪರಿಚಯ ಶುರುವಾಗಿದ್ದು ಒಂದೇ ಒಂದು ಸೆಲ್ಫಿಯಿಂದ. 2021 ರಲ್ಲಿ ನ್ಯೂಯಾರ್ಕ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರ್ಥರ್ ಬೋರ್ಗೆಸ್ ಬಂದು ಸೆಲ್ಫಿ ಕೇಳಿದ್ದರು. ಈ ಸೆಲ್ಫಿ ಕ್ಲಿಕ್​ನೊಂದಿಗೆ ಇಬ್ಬರೂ ಬಂಧಿಯಾಗಿದ್ದು ವಿಶೇಷ.ತಮ್ಮ ಪ್ರೇಮಕಥೆಯ ಬಗ್ಗೆ ಮಾತನಾಡಿರುವ ಗಾರ್ಬಿನ್ ಮುಗುರೂಝ, ನನಗೆ ಆರ್ಥರ್ ಸಿಕ್ಕಿದ್ದೇ ಆಕಸ್ಮಿಕ. ನ್ಯೂಯಾರ್ಕ್​ನ ಸೆಂಟ್ರಲ್ ಪಾರ್ಕ್​ನ ಸಮೀಪವೇ ನನ್ನ ಹೋಟೇಲ್ ಇತ್ತು. ಹೋಟೇಲ್​ನಲ್ಲಿದ್ದು ಬೋರ್ ಆಗಿದ್ದ ಕಾರಣ ಅಂದು ನಾನು ವಾಕಿಂಗ್ ಹೊರಟಿದ್ದೆ. ಈ ವೇಳೆ ಆರ್ಥರ್ ಎದುರಾಗಿದ್ದ.ಅಲ್ಲದೆ ನನ್ನ ಬಳಿ ಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡ ಆರ್ಥರ್ ಬೋರ್ಗೆಸ್, ಯುಎಸ್ ಓಪನ್ ಟೂರ್ನಿಯಲ್ಲಿ ನಿಮಗೆ ಒಳ್ಳೆದಾಗಲಿ ಎಂದು ಹಾರೈಸಿದ್ದ. ಅಂದು ಆರ್ಥರ್ ಮಾತಿಗಿಂತ, ಆತನ ಸೌಂದರ್ಯ ನನ್ನನ್ನು ಆಕರ್ಷಿತು. ಇದಾದ ಬಳಿಕ ನಾವಿಬ್ಬರೂ ಹಲವು ಬಾರಿ ಭೇಟಿಯಾಗಿದ್ದೆವು.ವೃತ್ತಿಯಲ್ಲಿ ಮಾಡೆಲ್ ಆಗಿರುವ ಆರ್ಥರ್ ಬೋರ್ಗೆಸ್ ಆ ಬಳಿಕ ನನ್ನ ಆತ್ಮೀಯ ಗೆಳೆಯನಾಗಿಬಿಟ್ಟಿದ್ದ. ಇದಾಗಿ ಎರಡು ವರ್ಷಗಳ ಬಳಿಕ ಸ್ಪೇನ್​ನ ಮಾರ್ಬಲಾದಲ್ಲಿ ನನ್ನನ್ನು ಪ್ರೊಪೋಸ್ ಮಾಡಿದ್ದ. ನಿಜ ಹೇಳಬೇಕೆಂದರೆ ಅಂತಹದೊಂದು ಪ್ರೊಪೋಸ್ ಅನ್ನು ನಾನು ನಿರೀಕ್ಷಿಸುತ್ತಿದ್ದೆ. ಹೀಗಾಗಿ ಆನಂದಬಾಷ್ಪದೊಂದಿಗೆ ಅಂದು ನಾನು ಮರು ಮಾತನಾಡದೇ ಯೆಸ್ ಎಂದಿದ್ದೆ ಎಂದು ಗಾರ್ಬಿನ್ ಮುಗುರೂಝ ತಮ್ಮ ಹಳೆಯ ಲವ್​ಸ್ಟೋರಿಯನ್ನು ಮೆಲುಕು ಹಾಕಿದ್ದಾರೆ.ಇದೀಗ ಗಾರ್ಬಿನ್ ಮುಗುರೂಝ-ಆರ್ಥರ್ ಬೋರ್ಗೆಸ್ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು, ಅದರ ಮೊದಲ ಹೆಜ್ಜೆಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಶುಭ ಸುದ್ದಿಯನ್ನು ಗಾರ್ಬಿನ್ ಮುಗುರೂಝ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

source https://tv9kannada.com/photo-gallery/wimbledon-champion-garbine-muguruza-gets-engaged-to-fan-who-asked-for-selfie-kannada-news-zp-591191.html

Tags: samagrasuddi, Sports news, ಸಮಗ್ರ ಸುದ್ದಿ

Post navigation

WTC Final 2023: ಡಬ್ಲ್ಯುಟಿಸಿ ಫೈನಲ್​ನಲ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ಅಜಿಂಕ್ಯ ರಹಾನೆ..!
Wrestlers Protest: ನಿಮಗೆ ಹಾನಿಯಾಗುವ ಕ್ರಮಗಳನ್ನು ತೆಗೆದುಕೊಳ್ಳಬೇಡಿ: ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್

Leave a Reply Cancel reply

Your email address will not be published. Required fields are marked *

Recent Comments

  1. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  2. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  3. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  4. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

  5. Darshan K M on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Meaning full program..✨❤️

CITIES

Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi

📅 ದಿನಾಂಕ: 4 ಜುಲೈ 2025✍️ ಸಮಗ್ರ ಸುದ್ದಿ ವಿಶೇಷ ✅ ಮಹತ್ವದ ನಿರ್ಧಾರ: ಕರ್ನಾಟಕ ಸರ್ಕಾರವು 2025–26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ…

Cities

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳು

July 4, 2025
samagrasuddi
Cities

ದಾವಣಗೆರೆ ಜಿಲ್ಲೆಯ ಮಾರುತಿ ಹೆಚ್ ಗೆ 2025ರ ಇಂಟರ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರದಾನ.

July 4, 2025
samagrasuddi
Cities

“ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ – ರೈತರಿಗೆ ಮುನ್ನೆಚ್ಚರಿಕೆ ಅಗತ್ಯ!”

July 4, 2025
samagrasuddi
Cities Health

ಚಿಂತೆ ಬೇಡ, ಹೃದಯ ಸೇಫ್! — ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಪ್ರಕರಣಗಳಿಗೆ ತಡೆಗಟ್ಟಲು ಸರ್ಕಾರದಿಂದ ಕ್ರಮ

July 2, 2025
samagrasuddi

You may Missed

Health

“Health Tips”: ವಿಟಮಿನ್‌ ಡಿ: ನಮಗೇಕೆ ಬೇಕು?

July 6, 2025
samagrasuddi
Health

ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”

July 5, 2025
samagrasuddi
Health

“ಕರ್ನಾಟಕದಲ್ಲಿ COVID-19 ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ – ಆರೋಗ್ಯ ಇಲಾಖೆ ಎಚ್ಚರಿಕೆ”

July 4, 2025
samagrasuddi
Health

🌿 ತುಳಸಿಯ ಸೌಂದರ್ಯ ಮತ್ತು ಆರೋಗ್ಯ ಮಹತ್ವ

July 4, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • 2025-2026ನೇ ಸಾಲಿನ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭ.
  • ನಮ್ಮ ಜನಾಂಗದಿಂದಲೇ ಸರ್ವೆಯನ್ನು ಮಾಡಿಸುವುದರ ಮೂಲಕ ಮುಂದಿನ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿಯನ್ನು ನೀಡಲಾಗುವುದು: ಬಿ.ಎಸ್.ಸೋಮಶೇಖರ್.
  • ಕಾಂಗ್ರೆಸ್ ಪಕ್ಷದವರಿಂದ ಸುಳ್ಳಿನ ಅಪ ಪ್ರಚಾರ ; ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ.
  • ಸ್ಥಗಿತಗೊಂಡ ಕಾಮಗಾರಿ ಪುನರಾರಂಭಿಸಿ: ಪಪ್ಪಿ ಸ್ಟೂಡೆಂಟ್ ಸದಸ್ಯರು ಮನವಿ.
  • 2025-2026ನೇ ಸಾಲಿನ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭ.
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress