ಜಾರ್ಖಂಡ್ ನರ್ಸಿಂಗ್ ಹೋಂನಲ್ಲಿ ಬೆಂಕಿ : ಇಬ್ಬರು ವೈದ್ಯರು ಸೇರಿದಂತೆ ಐವರು ಸಜೀವ ದಹನ..!

ಜಾರ್ಖಂಡ್ : ನರ್ಸಿಂಗ್ ಹೋಂನಲ್ಲಿ ಇದ್ದಕ್ಕಿದ್ದ ಹಾಗೇ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ನೋಡ ನೋಡುತ್ತಲೇ ಇಬ್ಬರು ಡಾಕ್ಟರ್ ಸೇರಿದಂತೆ ಐವರು ಸಜೀವ ದಹನವಾಗಿರುವ ಘಟನೆ ನಡೆದಿದೆ. ಘಟನೆ ಧನ್ ಭಾಗ್ ನಲ್ಲಿ ನಡೆದಿದೆ.

ಬೆಳ್ಳಂ ಬೆಳಗ್ಗೆ ಆಸ್ಪತ್ರೆಯ ಸ್ಟೋರ್ ರೂಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಬೆಂಕಿ ನೋಡ ನೋಡುತ್ತಿದ್ದಂತೆಯೇ ಇಡೀ ಬಿಲ್ಡಿಂಗ್ ಗೆ ಆವರಿಸಿಕೊಂಡಿದೆ. ಒಳಗಿದ್ದವರು ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ, ಆತಂಕಗೊಂಡಿದ್ದರು. ಆಸ್ಪತ್ರೆಯ ಮಾಲೀಕರು ಸೇರಿದಂತೆ ಒಳಗಿದ್ದವರು ಹೊಗೆಗೆ ಒದ್ದಾಡುತ್ತಿದ್ದರು.

ಒಳಗಿದ್ದವರನ್ನು ರಕ್ಷಿಸಲು ಆಗಿಲ್ಲ, ಅವರು ಹೊರ ಬರುವುದಕ್ಕೆ ಸಾಧ್ಯವಾಗಲಿಲ್ಲ. ಇಬ್ಬರು ವೈದ್ಯರು ಸೇರಿದಂತೆ ಐದು ಜನ ಸಜೀವ ದಹನವಾಗಿದ್ದಾರೆ. ಮೃತರನ್ನು ವೈದ್ಯಕೀಯ ಮಾಲೀಕ ಡಾ.ವಿಕಾಸ್ ಹಜ್ರಾ, ಪತ್ನಿ ಡಾ.ಪ್ರೇಮಾ ಹಜ್ರಾ, ಅಳಿಯ ಸೋಹಾನ್ ಮತ್ತು ಮನೆ ಕೆಕಲಸದಾಕೆ ಸಾವನ್ನಪ್ಪಿರುವುದು ಎಂದು ತಿಳಿದು ಬಂದಿದೆ. ಆದರೆ ಬೆಂಕಿಯ ಅವಘಡಕ್ಕೆ ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.

The post ಜಾರ್ಖಂಡ್ ನರ್ಸಿಂಗ್ ಹೋಂನಲ್ಲಿ ಬೆಂಕಿ : ಇಬ್ಬರು ವೈದ್ಯರು ಸೇರಿದಂತೆ ಐವರು ಸಜೀವ ದಹನ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/8VOqHcY
via IFTTT

Leave a Reply

Your email address will not be published. Required fields are marked *