ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. ೦೮ ಸ್ವಚ್ಚ ವಿಧಾನ ಸಭೆ ಅಭಿಯಾನಕ್ಕಾಗಿ ಯುವಕನೊಬ್ಬ ಬಾಗಲಕೋಟೆ ಯಿಂದ ಬೆಂಗಳೂರು ಪಾದಯಾತ್ರೆ ನಡೆಸುತ್ತಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಸಮೀಪದ ರಾಷ್ಟೀಯ ಹೆದ್ದಾರಿ-೪ರಸ್ತೆಯ ಮೂಲಕ ಬೆಂಗಳೂರಿಗೆ ಹೊರಟ್ಟಿದ್ದಾರೆ.
ಬಾಗಲಕೋಟೆಯ ಎಂಎಸ್ಸಿ,ಎಂಟೆಕ್ ಓದಿಕೊಂಡಿರುವ ನಾಗರಾಜ ಕಲಕುಟಗರ ಎಂಬ ಯುವಕ ಪಾದಯಾತ್ರೆ ಆರಂಬಿಸಿದ್ದು ಕೈನಲ್ಲಿ ನನ್ನ ಮತ ಮಾರಾಟಕ್ಕಿಲ್ಲ, ಸ್ವಾತಂತ್ರ್ಯ ಸಮಾನತೆ ಪ್ರಜಾಪ್ರಭುತ್ವ ಉಳಿವಿಗಾಗಿ ಭ್ರಷ್ಟರಲ್ಲದ, ಕೋಮುವಾದಿಯಲ್ಲದ, ಪ್ರಬುದ್ಧ ಜನಪರ ಸುಸಂಸ್ಕೃತ ವ್ಯಕ್ತಿತ್ವವುಳ್ಳವರು ಬೇಕಾಗಿದ್ದಾರೆ ಎಂಬ ಶೀರ್ಷಿಕೆ ಅಡಿಯಲ್ಲಿ ಪಾದಯಾತ್ರೆ ಆರಂಬಿಸಿದ್ದಾರೆ. ಈ ಅಭಿಯಾನವನ್ನ ಮಿತಿ ಮೀರುತ್ತಿರುವ ಅನ್ಯಾಯ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು ಇದನ್ನ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ
ಕೇಳಲು ಹೋದಲ್ಲಿ ದೌರ್ಜನ್ಯ ಮಾಡಿ ಸುಳ್ಳು ಕೇಸುಗಳನ್ನ ದಾಖಲಿಸುತ್ತಿದ್ದಾರೆ. ನಾವು ಆಯ್ಕೆ ಮಾಡಿದ ಸರ್ಕಾರಗಳೇ ದಬ್ಬಾಳಿಕೆ ಮಾಡುತ್ತಿವೆ.
ವಿದ್ಯಾವಂತರು ಮುಂದೆ ಬಂದು ಪ್ರಾಮಾಣಿಕತೆಯಿಂದ ಮತ ಚಲಾಯಿಸಿ ಹೆಂಡ, ಹಣ, ಸೀರೆ ಪಂಚೆ ಇತಂಹ ಆಮಿಷಕ್ಕೆ ಒಳಗಾಗದೆ ಮತಹಾಕಿ. ಭ್ರಷ್ಟ ಕೋಮುವಾದಿಗಳನ್ನ ದೂರವಿಟ್ಟು ಪ್ರಬುದ್ಧರನ್ನ ಆಯ್ಕೆ ಮಾಡಿ ಒಳ್ಳೆಯ ಬದಲಾವಣೆ ತರಬೇಕಿದೆ. ಈ ನಿಟ್ಟಿನಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನ, ಪಾದಯಾತ್ರೆ ಮೂಲಕ ಬೆಂಗಳೂರು ತಲುಪಿ ಚುನಾವಣಾ ಆಯೋಗ ಹಾಗೂ ಸರ್ಕಾರಕ್ಕೂ ಮನವಿ ಸಲ್ಲಿಸುವುದಾಗಿ ನಾಗರಾಜ ಕಲಕುಟಗರ ಅವರು ತಿಳಿಸಿದ್ದಾರೆ.