ಚಿತ್ರದುರ್ಗ |ಗರುಡವಾಹನದ ಮೇಲೆ ವಿರಾಜಮಾನನಾಗಿರುವ ಗಣಪನಿಗೆ ಅದ್ದೂರಿ ಸ್ವಾಗತ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಹೊರ ವಲಯದ ಶ್ರೀ ಮಾದಾರ ಗುರುಪೀಠದಿಂದ ನಗರದ ಬಿ.ಡಿ.ರಸ್ತೆಯ ಜೈನಧಾಮದಲ್ಲಿ ನಿರ್ಮಾಣ ಮಾಡಿರುವ ಮಹಾ ಮಂಟಪದವರೆಗೂ ಗಣಪತಿಯನ್ನು ಭಕ್ತಾಧಿಗಳು ದ್ವಿಚಕ್ರವಾಹನದಲ್ಲಿ ಗಣಪತಿಯ ಪರವಾಗಿ ಜೈಕಾರಗಳನ್ನು ಕೂಗುತ್ತಾ ಹಿಂದು ಸಮಾಜದ ಸಂಕೇತವಾದ ಕೇಸರಿ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಗಣಪತಿಯನ್ನು ಸ್ವಾಗತ ಮಾಡಿದರು. ನಗರದ ಚಳ್ಳಕೆರೆ ಗೇಟಿನಿಂದ ಶಾರದ ಬ್ರಾಸ್ ಬ್ಯಾಂಡ್ ಹಾಗೂ ಟಾಷ್ಯೂ ಸೇರಿದಂತೆ ವಿವಿಧ ಜಾನಪದ ಕಲಾಮೇಳದೊಂದಿಗೆ ಹಿಂದೂ ಮಹಾ ಗಣಪತಿಯನ್ನು ಸ್ವಾಗತ ಮಾಡಲಾಯಿತು. ಗಣಪತಿಯ ಮುಂದೆ ಯುವ ಜನತೆ ನೃತ್ಯವನ್ನು ಮಾಡುವುದರ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಚಿಕ್ಕಬಳಾಪುರದಲ್ಲಿ ನಿರ್ಮಾಣವಾದ ಗರುಡವಾಹನದ ಮೇಲೆ ವಿರಾಜಮಾನವಾಗಿ ಕುಳಿತಿರುವ ಹಿಂದು ಮಹಾ ಗಣಪತಿಯನ್ನು ಸಮಿತಿಯವರು ವರ್ಷದಿಂದ ವರ್ಷಕ್ಕೆ ವಿಭಿನ್ನ ರೀತಿಯಲ್ಲಿ ನಿರ್ಮಾಣ ಮಾಡುವುದರ ಮೂಲಕ ರಾಜ್ಯದಲ್ಲಿಯೇ ಚಿತ್ರದುರ್ಗದ ಹಿಂದೂ ಮಹಾಗಣಪತಿ ವಿಭಿನ್ನ ಎಂದು ತೋರಿಸುತ್ತಿದ್ದಾರೆ. ಇಂದು ಮಂಟಪಕ್ಕೆ ಆಗಮಿಸಿ ಗಣಪತಿಯನ್ನು ಕುಳ್ಳರಿಸಿ ತದ ನಂತರ ವಿವಿಧ ರೀತಿಯ ಅಲಂಕಾರಗಳನ್ನು ಮಾಡಲಾಗುತ್ತದೆ ಸೆ.7ಕ್ಕೆ ಪೂಜೆಗೆ ಸಿದ್ದಗೊಳಿಸಲಾಗುತ್ತದೆ. ಆರು ಕೈಗಳನ್ನು ಹೊಂದಿರುವ ಗಣಪತಿ ವಿವಿಧ ರೀತಿಯ ಆಯುಧಗಳನ್ನು ಹಿಡಿದಿದ್ದಾನೆ, ಕೆಳಗಡೆ ಗರುಡ ತನ್ನ ಹಾರಾಟವನ್ನು ಮಾಡುತ್ತಿದೆ. ಗಣಪತಿಯ ಹಿಂದೆಗಡೆಯಲ್ಲಿ ಚಕ್ರವನ್ನು ನಿರ್ಮಾಣ ಮಾಡಲಾಗಿದ್ದು, ಪೀಠದಿಂದ ಗಣಪತಿ ಸುಮಾರು 17 ರಿಂದ 18 ಅಡಿ ಎತ್ತರ ಇದೆ.

ಈಗಾಗಲೇ ಜೈನಧಾಮದಲ್ಲಿ ಹಿಂದು ಮಹಾಗಣಪತಿಯನ್ನು ಸ್ಥಾಪನೆ ಮಾಡಲು ಸಕಲ ಸಿದ್ದತೆಯನ್ನು ಸಹಾ ಮಾಡಲಾಗಿದೆ. ಮುಂದಗಡೆಯಲ್ಲಿ ಸಾಗರ ಕಾರ್ಕಳದಿಂದ ಬಂದ ಶಿಲ್ಪಿಗಳು ಸಭಾ ಮಂಟಪವನ್ನು ನಿರ್ಮಾಣ ಮಾಡುತ್ತಿದ್ದಾರೆ, ಗಣಪತಿ ಕುಳ್ಳರಿಸುವ ಸಭಾಮಂಟಪದಲ್ಲಿ ದಶಾವತಾರದ ಮಂಟಪವನ್ನು ನಿರ್ಮಾಣ ಮಾಡಲಾಗುತ್ತಿದೆ. ಮಂಟಪ ಮಹಾರಾಜರ ಆರಮನೆಯ ಮಾದರಿಯನ್ನು ಹೋಲುತ್ತಿದೆ. 21 ದಿನಗಳ ಕಾಲ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. 26 ರಂದು ಕನಕ ವೃತ್ತದಿಂದ ಹೊರಡುವ ಬೈಕ್ ರ್ಯಾಲಿ ನಗರದೆಲ್ಲೆಡೆ ಸಂಚರಿಸಲಿದ್ದು, 28 ರಂದು ವಿಸರ್ಜಿಸಲಾಗುವುದೆಂದರು. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಹದಿಮೂರಕ್ಕೂ ಹೆಚ್ಚು ರೀತಿಯ ಮಹಾ ಮಂಗಳಾರತಿ ನಡೆಯಲಿದೆ.

Leave a Reply

Your email address will not be published. Required fields are marked *