G-20 controlled zone in Delhi : ಜಿ-20 ಶೃಂಗಸಭೆ ಹಿನ್ನೆಲೆ ದೆಹಲಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಿಗೆ ಸೆಪ್ಟೆಂಬರ್ 8 ರಿಂದ 10 ರವರೆಗೆ ರಜೆ ಘೋಷಿಸಲಾಗಿದೆ.
![](https://kannada.cdn.zeenews.com/kannada/sites/default/files/2023/09/01/332578-delhi-g20.jpg)
G-20 Summit : ಈ ಜಾಗತಿಕ ಸನ್ನಿವೇಶದಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲಿರುವ 43 ದೇಶಗಳಿಗೆ ದೆಹಲಿ ಆತಿಥ್ಯವಹಿಸಲಿದ್ದು, ದೆಹಲಿ ನಗರದಲ್ಲಿ ಅಗತ್ಯಕ್ಕನುಸಾರವಾಗಿ ಕೆಲವೊಂದು ತಾತ್ಕಾಲಿಕ ಕಟ್ಟುಪಾಡುಗಳನ್ನು ಸಿದ್ಧಗೊಳಿಸಿದೆ. ಅವುಗಳಲ್ಲಿ ಟ್ರಾಫಿಕ್‌ನ ಸೂಚನೆಗಳಲ್ಲಿನ ಮಾದರಿಗಳ ಬದಲಾವಣೆಗಳು, ಅದರೊಂದಿಗೆ ತಯಾರಿಗೆ ಅವಶ್ಯಕ ಸರಕು ಮತ್ತು ಸೇವೆಗಳಿಗೂ ಏರ್ಪಾಡು ನಡೆಯುತ್ತಿದೆ.
ಈ ಹಿನ್ನೆಲೆ ಜಿ-20 ಶೃಂಗಸಭೆಯ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಿಗೆ ಸೆಪ್ಟೆಂಬರ್ 8 ರಿಂದ 10 ರವರೆಗೆ ರಜೆ ಘೋಷಿಸಲಾಗಿದೆ. ಯಾವುದೇ ಅಡಚಣೆಗಳಿಗೆ ಆಸ್ಪದ ಕೊಡದಂತೆ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಅದಲ್ಲದೇ ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳು, ದಿನಬಳಕೆಯ ಸಾಮಗ್ರಿಗಳು, ಔಷಧಿಯ ವಸ್ತುಗಳು ಎಲ್ಲವೂ ಎಂದಿನಂತೆ ಲಭ್ಯವಿದ್ದು, ತಾತ್ಕಾಲಿಕ ಕಟ್ಟುಪಾಡುಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ದೆಹಲಿಯ ಕೆಲವು ಪ್ರದೇಶಗಳನ್ನು ನಿರ್ಬಂಧಗೊಳಿಸಲಾಗಿರುತ್ತದೆ ಮತ್ತು ಅಕ್ಷರಧಾಮ, ಡಿಎನ್‌ಡಿ ರಸ್ತೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಆದರೆ ಕೆಲವೊಂದು ರಸ್ತಗಳು ತಾತ್ಕಾಲಿಕವಾಗಿ ನಿರ್ಬಂಧವಾಗಿರುತ್ತವೆ. ಜಿ-20 ಶೃಂಗಸಭೆಯ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಈ ಎಲ್ಲಾ ಅಗತ್ಯ ಕಟ್ಟುಪಾಡುಗಳನ್ನು ಹೇರಲಾಗಿದ್ದು, ದೆಹಲಿಯು ಅಂತರರಾಷ್ಟ್ರೀಯ ಮಟ್ಟದ ಸಂದರ್ಭಕ್ಕೆ ಸಾಕ್ಷಿಯಾಗಿ,ಜಿ-20 ಶೃಂಗಸಭೆಗೆ ಆತಿಥ್ಯವಹಿಸಲು ಸಿದ್ಧವಾಗಿದೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii
Source : https://zeenews.india.com/kannada/india/delhi-to-be-declared-mini-lockdown-during-g20-summit-155650