YouTube ತನ್ನ Shorts ವಿಭಾಗದಲ್ಲಿ ಸಮಯ ಮಿತಿ ಹೊಂದಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು ತಮ್ಮ ವೀಕ್ಷಣಾ ಅವಧಿಗೆ ಕಾಲಮಿತಿಯನ್ನು ನಿಗದಿಪಡಿಸಬಹುದು. ಈ ವೈಶಿಷ್ಟ್ಯವು ದೀರ್ಘಕಾಲದ ಸ್ಕ್ರೋಲಿಂಗ್ ತಡೆಗಟ್ಟಿ, ಡಿಜಿಟಲ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
YouTube ಶಾರ್ಟ್ಸ್‌ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುವವರಿಗೆ ಒಳ್ಳೆಯ ಸುದ್ದಿ! Google ಮಾಲೀಕತ್ವದ YouTube ತನ್ನ Shorts ವಿಭಾಗಕ್ಕೆ Instagram ತರಹದ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯ ಬಳಕೆದಾರರಿಗೆ ಶಾರ್ಟ್ಸ್ ವೀಕ್ಷಣೆಗೆ ಸಮಯ ಮಿತಿಯನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ. ಈ ಮಿತಿಯನ್ನು ತಲುಪಿದಾಗ, ಬಳಕೆದಾರರು Shorts ವೀಕ್ಷಿಸಲು ನಿಗದಿಪಡಿಸಿದ ಸಮಯ ತಲುಪಿದೆ ಎಂದು ತಿಳಿಸುವ ಸೂಚನೆ ಬರುತ್ತದೆ. ಇದು ದೀರ್ಘಕಾಲದ ಸ್ಕ್ರೋಲಿಂಗ್ ತಡೆಗಟ್ಟಲು ಮತ್ತು ಸಮಯವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯಕವಾಗಿದೆ.
ಕಸ್ಟಮೈಸ್ ಮಾಡಬಹುದಾದ ಸಮಯ ಮಿತಿ:
ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ 30 ನಿಮಿಷ, ಒಂದು ಗಂಟೆ ಅಥವಾ ಎರಡು ಗಂಟೆಗಳಂತಹ ಸಮಯ ಮಿತಿಯನ್ನು ಕಸ್ಟಮೈಸ್ ಮಾಡಬಹುದು. ಮಿತಿಯನ್ನು ತಲುಪಿದಾಗ, ನೊಟಿಫಿಕೇಶನ್ ಪಾಪ್-ಅಪ್ ಆಗಿ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಇದನ್ನ ರಿಜಾಕ್ಟ್ ಮಾಡಬಹುದಾದರೂ ಇದು ಸಮಯದ ಮಿತಿಯನ್ನು ನೆನಪಿಸುವ ಕೆಲಸ ಮಾಡುತ್ತದೆ.
ಹೇಗೆ ಬಳಸುವುದು?
YouTube ಸೆಟ್ಟಿಂಗ್‌ಗಳಲ್ಲಿ ಬಳಕೆದಾರರು ಈ ವೈಶಿಷ್ಟ್ಯಕ್ಕೆ ಸಮಯವನ್ನು ಸರಳವಾಗಿ ಹೊಂದಿಸಬಹುದು. ಕಂಪನಿಯು ಈ ವೈಶಿಷ್ಟ್ಯವನ್ನು ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಕ್ರಮೇಣ ಹೊರತರುತ್ತಿದೆ. ಭವಿಷ್ಯದಲ್ಲಿ, ಇದನ್ನು ಪೋಷಕರ ನಿಯಂತ್ರಣಗಳೊಂದಿಗೆ ಸಂಯೋಜಿಸಲಾಗುವುದು, ಇದರಿಂದ ಮಕ್ಕಳು ಪೋಷಕರು ನಿಗದಿಪಡಿಸಿದ ಮಿತಿಯನ್ನು ಬದಲಾಯಿಸಲು ಸಾಧ್ಯವಾಗದು. ಇದು ಪೋಷಕರಿಗೆ ತಮ್ಮ ಮಕ್ಕಳ ಡಿಜಿಟಲ್ ಬಳಕೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ಒದಗಿಸಲಿದೆ.
ಈ ಹೊಸ ವೈಶಿಷ್ಟ್ಯವು YouTube ಶಾರ್ಟ್ಸ್ ಬಳಕೆದಾರರಿಗೆ ಸಮಯವನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಡಿಜಿಟಲ್ ಹೆಲ್ತ್ ಕಾಪಾಡಿಕೊಳ್ಳಲು ಸಹಾಯಕವಾಗಲಿದೆ.
Views: 4