New Generation Beta: ಮೂಲಗಳ ಪ್ರಕಾರ ಹೊಸ ವರ್ಷದಿಂದ ಅಂದರೆ ಜನವರಿ 1, 2025 ರಿಂದ ಜನಿಸುವವರೆಲ್ಲರೂ ಹೊಸ ಜನರೇಷನ್ ಭಾಗವಾಗಲಿದ್ದಾರೆ. ಅಂದರೆ ಜನವರಿ ಒಂದರಿಂದ ಜನಿಸುವವರೆಲ್ಲರೂ ಜನರೇಷನ್ ಬೀಟಾದ ಭಾಗವಾಗಲಿದ್ದಾರೆ.
ಹೊಸ ವರ್ಷದಿಂದ ಅಂದರೆ ಜನವರಿ 1, 2025 ರಿಂದ, ಹೊಸ ಜನರೇಷನ್ (New Generation) ಪ್ರಾರಂಭವಾಗಲಿದೆ. ಹೌದು ಜನರೇಷನ್ ಬೀಟಾವು (Generation Beta) ಪ್ರಪಂಚಕ್ಕೆ ತನ್ನ ಪ್ರವೇಶವನ್ನು ಮಾಡಲು ಸಿದ್ಧವಾಗಿದೆ. ಮೂಲಗಳ ಪ್ರಕಾರ 2025 ಮತ್ತು 2039 ರ ನಡುವೆ ಜನಿಸಿದ ಮಕ್ಕಳನ್ನು ಒಳಗೊಂಡಿರುವ ಈ ಗುಂಪು 2035 ರ ವೇಳೆಗೆ ಜಾಗತಿಕ ಜನಸಂಖ್ಯೆಯ (Global Population) 16 ಪ್ರತಿಶತವನ್ನು ಹೊಂದುವ ನಿರೀಕ್ಷೆಯಿದೆ, ಈ ಸಂದರ್ಭದಲ್ಲಿ ಜನಿಸುವ ಅನೇಕರು 22 ನೇ ಶತಮಾನದ (22nd Century) ಉದಯವನ್ನು ಅರ್ಥಾತ್ ಪ್ರಾರಂಭವನ್ನು ನೋಡುವ ಸಾಧ್ಯತೆಯಿದೆ ಎಂದು ಸಾಮಾಜಿಕ ಸಂಶೋಧಕ ಮಾರ್ಕ್ ಮೆಕ್‌ಕ್ರಿಂಡಲ್ ಹೇಳಿದ್ದಾರೆ.
ಯಾರು ಈ ಜನರೇಷನ್ ಬೀಟಾ?
ಜನರೇಷನ್ ಬೀಟಾ ಎನ್ನುವುದು ಜನರೇಷನ್ ಆಲ್ಫಾವನ್ನು ಅನುಸರಿಸುತ್ತದೆ. ಅಂದರೆ 2010 ರಿಂದ 2024ರ ನಡುವೆ ಜನಿಸಿದವರು ಈ ಜನರೇಷನ್ ಆಲ್ಫಾ. ಇವರ ಮುಂದುವರಿದ ಪೀಳಿಗಯೇ ಜನರೇಷನ್ ಆಲ್ಫಾ ವಾಗಿದೆ. ಇದಕ್ಕೂ ಮೊದಲು ಜನರೇಷನ್ Z ಅಂದರೆ 1996 ರಿಂದ 2010 ರ ನಡುವೆ ಜನಿಸಿದವರು, ಇನ್ನು ಇದಕ್ಕೂ ಮೊದಲು ಅಂದರೆ 1981 ರಿಂದ 1996ರ ನಡುವೆ ಜನಿಸಿದವರು ಮಿಲೇನಿಯಲ್ಸ್. ಇನ್ನು ಹೊಸ ಜನರೇಷನ್ ಹೆಸರಿಸುವ ಸಮಾವೇಶವು ಹೊಸ ಪೀಳಿಗೆಯ ಯುಗದ ಆರಂಭವನ್ನು ಗುರುತಿಸಲು ಗ್ರೀಕ್ ವರ್ಣಮಾಲೆಯನ್ನು ಬಳಸುತ್ತದೆ. ಈ ಹೊಸ ಪೀಳಿಗೆಯು ಮುಂದಿನ ದಿನಗಳಲ್ಲಿ ವಿಶ್ವದಾದ್ಯಂತ ಆರ್ಥಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ತರಲಿದೆ.
ಪೀಳಿಗೆಯ ಹೆಸರುಗಳು ಮತ್ತು ವರ್ಷಗಳು
➤ ಶ್ರೇಷ್ಠ ಪೀಳಿಗೆ (1922 ಮತ್ತು 1927 ರ ನಡುವೆ ಜನಿಸಿದವರು)
➤ ಸೈಲೆಂಟ್ ಜನರೇಷನ್ (1928 ಮತ್ತು 1945 ರ ನಡುವೆ ಜನಿಸಿದವರು)
➤ ಬೇಬಿ ಬೂಮರ್‌ಗಳು (1946 ಮತ್ತು 1964 ರ ನಡುವೆ ಜನಿಸಿದವರು)
➤ ಜನರೇಷನ್ X (1965 ಮತ್ತು 1980 ರ ನಡುವೆ ಜನಿಸಿದವರು)
➤ ಮಿಲೇನಿಯಲ್ಸ್ (1981 ರಿಂದ 1996ರ ನಡುವೆ ಜನಿಸಿದವರು)
➤ ಜನರೇಷನ್ Z (1996 ರಿಂದ 2010 ರ ನಡುವೆ ಜನಿಸಿದವರು)
➤ ಜನರೇಷನ್ ಆಲ್ಫಾ (2010 ರಿಂದ 2024ರ ನಡುವೆ ಜನಿಸಿದವರು)
ಹೊಸ ಪೀಳಿಗೆಯ ಕುರಿತು ಐದು ವಿಷಯಗಳು ಇಲ್ಲಿವೆ:
1.) ಜನರೇಷನ್ ಬೀಟಾವು ಕೃತಕ ಬುದ್ಧಿಮತ್ತೆ ಮತ್ತು ಸ್ಮಾರ್ಟ್ ಡಿವೈಸ್ಗಳ ಅತ್ಯುತ್ತಮ ಬಳಕೆಯನ್ನು ಮಾಡುವ ನಿರೀಕ್ಷೆಯಿದ್ದು, ಬಹುಶಃ ಈ ಪರಿಕರಗಳನ್ನು ಅವರ ತಮ್ಮ ದೈನಂದಿನ ದಿನಚರಿಯಲ್ಲಿಯೇ ಬಳಸುತ್ತಾರೆ.
ಜಾಹೀರಾತು
2.) ಸಾಮಾಜಿಕ ಜಾಲತಾಣವು ಹಿಂದಿನ ತಲೆಮಾರುಗಳಿಗಿಂತ ವಿಶಿಷ್ಟ ಲಕ್ಷಣಗಳೊಂದಿಗೆ ಇವರ ಪೀಳಿಗೆಯ ಸಮಯದಲ್ಲಿ ವಿಕಸನಗೊಳ್ಳಬಹುದು ಎನ್ನಲಾಗಿದೆ.
3.) ಈ ಪೀಳಿಗೆಯು ಹಿಂದಿನ ತಲೆಮಾರುಗಳ ಮೇಲೆ ಭಾರೀ ಪ್ರಭಾವ ಬೀರಿದ ಶಾಲೆಗಳ ಮುಚ್ಚುವಿಕೆ ಮತ್ತು ಸಾಮಾಜಿಕ ಪ್ರತ್ಯೇಕತೆಯಂತಹ ನೇರ ಪರಿಣಾಮಗಳಿಂದ ಹೊರಗಿರುತ್ತದೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
4.) ಜನಸಂಖ್ಯಾಶಾಸ್ತ್ರಜ್ಞ ಮತ್ತು ಫ್ಯೂಚರಿಸ್ಟ್ ಮಾರ್ಕ್ ಮೆಕ್‌ಕ್ರಿಂಡಲ್ ತನ್ನ ಲೇಖನದಲ್ಲಿ ಜನರೇಷನ್ ಬೀಟಾದವರು “ಪ್ರಮುಖ ಸಾಮಾಜಿಕ ಸವಾಲುಗಳೊಂದಿಗೆ ಜಗತ್ತನ್ನು ಆನುವಂಶಿಕವಾಗಿ ಪಡೆಯುತ್ತಾರೆ” ಎಂದು ಬರೆದಿದ್ದಾರೆ. “ಹವಾಮಾನ ಬದಲಾವಣೆ, ಜೊತೆಗೆ ಜಾಗತಿಕ ಜನಸಂಖ್ಯೆಯ ಬದಲಾವಣೆ ಮತ್ತು ಮುಂಚೂಣಿಯಲ್ಲಿರುವ ತ್ವರಿತ ನಗರೀಕರಣದೊಂದಿಗೆ ಅವರು ಬದುಕುತ್ತಾರೆ. ಹಾಗೂ ಅವರು ಪರಿಸರದ ಸವಾಲುಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಎತ್ತಿಯಿಡಿಯುತ್ತಾರೆ ಎಂದಿದ್ಧಾರೆ.
5.) ಪೀಳಿಗೆಯ ಸಂಶೋಧಕರಾದ ಜೇಸನ್ ಡಾರ್ಸೆ ಅವರು ತಮ್ಮ Gen Z ವಿಲ್ ಚೇಂಜ್ ದಿ ಫ್ಯೂಚರ್ ಆಫ್ ಬ್ಯುಸಿನೆಸ್ – ಮತ್ತು ವಾಟ್ ಟು ಡು ಅಬೌಟ್ ಇಟ್ ಪುಸ್ತಕದಲ್ಲಿ “ನಾವು ಮಕ್ಕಳಂತೆ ಮಿಲೇನಿಯಲ್‌ಗಳ ಬಗ್ಗೆ ಮಾತನಾಡುತ್ತಿರುವುದು ಕೆಲುವು ಸಮಯದಿಂದ ಮಾತ್ರ! ಆದರೆ ಈ ಪೀಳಿಗೆಯ ಬೀಟಾವು ತಮ್ಮ ಜನರಲ್ ಆಲ್ಫಾ ಕೌಂಟರ್ಪಾರ್ಟ್ಸ್ಗಿಂತ ವಿಭಿನ್ನವಾಗಿ ಜೀವನವನ್ನು ಪ್ರಾರಂಭಿಸುತ್ತಾರೆ ಎಂದಿದ್ದಾರೆ. ಜೊತೆಗೆ ಇವರಲ್ಲಿ ಅನೇಕರು 22 ನೇ ಶತಮಾನವನ್ನು ನೋಡಲು ಬದುಕುತ್ತಾರೆ ಎಂದು ತಿಳಿಸಿದರು.