ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡು ಕಳ್ಳತನಕ್ಕೆ ಇಳಿದಿದ್ದ ಪಕ್ಷೇತರ ಅಭ್ಯರ್ಥಿ ಅರೆಸ್ಟ್

ಚಿತ್ರದುರ್ಗ: ಲೋಕಸಭಾ ಚುನಾವಣೆ (Lok sabha Elections 2024) ಪಕ್ಷೇತರಯಾಗಿ (Independent candidate) ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್​ ಆಗಿದ್ದಾನೆ. ರಘು ಕುಮಾರ್ ಬಂಧಿತ ಆರೋಪಿಯಾಗಿದ್ದು,(Accused and his Gang)  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲುಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಚಾರದ ವೇಳೆ ಕಳ್ಳತನದ ಪ್ಲ್ಯಾನ್ ಮಾಡಿದ್ದ ರಘು ಅಂಡ್ ಗ್ಯಾಂಗ್ ಕ್ಯಾಂಪೇನ್ ಮಾಡುತ್ತ ಕಳ್ಳತನ ಸ್ಕೆಚ್ ಹಾಕಿದ್ದರಂತೆ.ಒಂಟಿ ಬಾರ್ ಗಳನ್ನ ಟಾರ್ಗೆಟ್ ಮಾಡಿದ್ದ ರಘು ಅಂಡ್ ಗ್ಯಾಂಗ್ ಚುನಾವಣೆಯಲ್ಲಿ ಸೋತ ಬಳಿಕ ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದನಂತೆ. ಈ ಗ್ಯಾಂಗ್ ಇತ್ತೀಚೆಗೆ ಮೊಳಕಾಲ್ಮುರಿನ ಶಿಲ್ಪ ಬಾರ್ ನಲ್ಲಿ ಕಳ್ಳತನ ಮಾಡಿದ್ದ ಗ್ಯಾಂಗ್ ಅನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಗ್ಯಾಂಗ್ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ಕೈಚಳಕ ತೋರಿತ್ತಂತೆ. ಈ ನಡುವೆ ಚಿಕ್ಕಮಗಳೂರಿನಲ್ಲಿ ಕಳ್ಳತನ ಮಾಡುವ ವೇಳೆ ರಘು ಸಿಕ್ಕಿಬಿದ್ದಿದ್ದನಂತೆ. ಆ ವೇಳೆ ಆತನನ್ನು ಬಂಧಿಸಿದ್ದ ಚಿಕ್ಕಮಗಳೂರು ಪೊಲೀಸರು ಖದೀಮರನ್ನ ಜೈಲಿಗೆ ಕಳಿಸಿದ್ದರಂತೆ.

ಇನ್ನು, ಮೊಲಕಾಲ್ಮುರಿನಲ್ಲಿ ನಡೆದ ಕಳ್ಳತನ ಸಂಬಂಧ ಪ್ರಕಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೊಳಕಾಲ್ಮೂರು ಕಳ್ಳತನದ ಪ್ರಕರಣದ ಬಗ್ಗೆ ಗ್ಯಾಂಗ್ ನ ವಿಚಾರಣೆ ನಡೆಸಿ ಚಿಕ್ಕಮಗಳೂರಿಂದ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕಳ್ಳತನ ಮಾಹಿತಿಯನ್ನು ಆರೋಪಿ ರಘು ಕುಮಾರ್ ಬಾಯಿಬಿಟ್ಟಿದ್ದನಂತೆ.

ರಘು ಅ್ಯಂಡ್ ಗ್ಯಾಂಗ್ ಬಾರ್ ಡೋರ್ ಮುರಿದು ಅಲ್ಲಿದ್ದ ಮದ್ಯ ಹಾಗೂ ಹಣ ದೋಚುತ್ತಿದ್ದರಂತೆ. ಗ್ಯಾಂಗ್ ನ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂದಹಾಗೇ, ಬಂಧಿತ ಆರೋಪಿ ಚಿಕ್ಕಮಂಗಳೂರು ಜಿಲ್ಲೆ ಅಜ್ಜಾಂಪುರ ತಾಲೂಕಿನ ತಿಮ್ಮಾಪುರ ಗ್ರಾಮದ ನಿವಾಸಿ ಎನ್ನಲಾಗಿದ್ದು, ಆತನ ಗ್ಯಾಂಗ್ ನಲ್ಲಿದ್ದ ಮತ್ತೋರ್ವ ಆರೋಪಿ ದರ್ಶನ್ ಬೀರೂರು ತಾಲೂಕಿನ ಹುರಿ ತಿಮ್ಮನಹಳ್ಳಿ ಗ್ರಾಮದ ನಿವಾಸಿಯಾ ಹಾಗೂ ಹೊಳೆನರಸಿಪುರ ತಾಲೂಕಿನ ಜಗದೀಶ್ ಆಗಿದ್ದಾನೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ರಘು ಕುಮಾರ್, ಟೆಲಿಫೋನ್ ಗುರುತಿನಿಂದ ಸ್ಪರ್ಧಿಸಿ 2,337 ಮತಗಳನ್ನ ಪಡೆದುಕೊಂಡು ಸೋಲುಂಡಿದ್ದನಂತೆ. 

Source : https://kannada.news18.com/news/state/independent-candidate-who-contested-to-lok-sabha-elections-turned-into-thief-sns-1770331.html

 

Leave a Reply

Your email address will not be published. Required fields are marked *