ಆಟವಾಡುತ್ತಾ ಮೂರನೇ ಮಹಡಿ ಮೇಲಿಂದ ಬಿದ್ದ ಒಂದೂವರೆ ವರ್ಷದ ಮಗು: ಸ್ಥಿತಿ ಚಿಂತಾಜನಕ!!

ಗುರುವಾರ ಕೆಜಿಎಂಯು ನೇತ್ರ ವಿಭಾಗದ ಒಪಿಡಿಯ ಮೂರನೇ ಮಹಡಿಯಿಂದ ಒಂದೂವರೆ ವರ್ಷದ ಕಂದಮ್ಮ ಬಿದ್ದಿದ್ದು, ಆ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

ಲಖನೌ, ಉತ್ತರಪ್ರದೇಶ: ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಕೆಜಿಎಂಯುನಲ್ಲಿರುವ ಹಳೆಯ ಹೊರ ರೋಗಿಗಳ ವಿಭಾದ ಕಟ್ಟಡದ ಮೂರನೇ ಮಹಡಿಯಿಂದ ಒಂದೂವರೆ ವರ್ಷದ ಮಗು ಬಿದ್ದಿರುವುದು ಬೆಳಕಿಗೆ ಬಂದಿದೆ.

ಆ ಮಗುವಿನ ತಲೆ ಮತ್ತು ದೇಹದ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಕೂಡಲೇ ಕುಟುಂಬಸ್ಥರು ಹಾಗೂ ಭದ್ರತಾ ಸಿಬ್ಬಂದಿ ಮಗುವನ್ನು ಟ್ರಾಮಾ ಸೆಂಟರ್‌ಗೆ ದಾಖಲಿಸಿದ್ದಾರೆ. ಅಲ್ಲಿ ಆ ಮಗುವಿಗೆ ಅಂಬು ಬ್ಯಾಗ್ ಸಹಾಯದಿಂದ ಆಕ್ಸಿಜನ್​ ನೀಡಲಾಗುತ್ತಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿರುವುದು ತಿಳಿದು ಬಂದಿದೆ.

ಗೊಂಡದ ಪರ್ಸೋನಾ ಗ್ರಾಮದ ನಿವಾಸಿ ಮಹಿ ಸಾಬಗೆ ನೇತ್ರ ಚಿಕಿತ್ಸೆ ಕೆಜಿಎಂಯುನಲ್ಲಿ ನಡೆಯುತ್ತಿದೆ. ಫೆಬ್ರವರಿ 13 ರಂದು ಮಹಿಯ ಕಣ್ಣಿನ ಆಪರೇಷನ್ ಮಾಡಲಾಗಿತ್ತು. ಮಗಳಿಗೆ ಕಣ್ಣಿನ ಪೊರೆ ಸಮಸ್ಯೆ ಇತ್ತು ಎನ್ನುತ್ತಾರೆ ತಂದೆ ಜುಬೇರ್. ಶಸ್ತ್ರ ಚಿಕಿತ್ಸೆಯ ನಂತರ ಗುರುವಾರದಂದು ಕುಟುಂಬ ಸದಸ್ಯರು ಮಾಹಿ ಅವರೊಂದಿಗೆ ಹಳೆ ಒಪಿಡಿ ಕಟ್ಟಡದ ಮೂರನೇ ಮಹಡಿಯಲ್ಲಿ ಸಾಮಾನ್ಯ ತಪಾಸಣೆಗಾಗಿ ಹಾಜರಾಗಿದ್ದರು.

ಮೂರನೇ ಮಹಡಿಯಲ್ಲಿ ನೇತ್ರ ವಿಭಾಗದ ಒಪಿಡಿ ಕಾರ್ಯನಿರ್ವಹಿಸುತ್ತಿದೆ. ವೈದ್ಯರ ಸಲಹೆ ಮೇರೆಗೆ ಬೆಳಗ್ಗೆ ಒಂಬತ್ತರ ಸುಮಾರಿಗೆ ಮಹಿಯ ಕಣ್ಣಿಗೆ ಔಷಧ ಹಾಕಲಾಯಿತು. ಅಷ್ಟರಲ್ಲಿ ತಾಯಿ ತನ್ನ ಇತರ ಮಕ್ಕಳನ್ನು ನೋಡಿಕೊಳ್ಳತೊಡಗಿದರು. ಆಟವಾಡುತ್ತಾ ರ‍್ಯಾಂಪ್​​ ಬಳಿ ಮಾಹಿ ತಲುಪಿದ್ದಾಳೆ. ಬಳಿಕ ಮಾಹಿ ಕಾಲು ಜಾರಿ ಮೂರನೇ ಮಹಡಿಯಿಂದ ನೇರವಾಗಿ ನೆಲ ಮಹಡಿಗೆ ಬಿದ್ದಿದ್ದಾಳೆ ಎನ್ನುತ್ತಾರೆ ಕುಟುಂಬಸ್ಥರು.

ಬೆಚ್ಚಿಬಿದ್ದ ಆಸ್ಪತ್ರೆ ಜನ: ಅಮೃತ್ ಫಾರ್ಮಸಿ ಎದುರು ಮಗು ರಕ್ತಸಿಕ್ತ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದಳು. ಇದರಿಂದಾಗಿ ಅಲ್ಲಿ ಗೊಂದಲ ಉಂಟಾಗಿತ್ತು. ಔಷಧ ಖರೀದಿಸಲು ತೆರಳಿದ್ದ ಜನರು ಘಟನೆ ಕಂಡು ಬೆಚ್ಚಿಬಿದ್ದರು. ಕೂಡಲೇ ಭದ್ರತಾ ಸಿಬ್ಬಂದಿ ಬಾಲಕಿಯನ್ನು ಎತ್ತಿಕೊಂಡರು. ಅಷ್ಟೊತ್ತಿಗಾಗಲೇ ಕುಟುಂಬಸ್ಥರೂ ಕೆಳಗಿಳಿದು ಬಂದಿದ್ದರು. ಮಗುವನ್ನು ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದ್ದು, ವೈದ್ಯರು ರಕ್ತ ಮತ್ತು ರೆಡಿಯೋಲಾಜಿಗೆ ಸಂಬಂಧಿಸಿದ ಇತರ ಪರೀಕ್ಷೆಗಳನ್ನು ಮಾಡಿದರು.

ವೈದ್ಯಕೀಯ ವರದಿ ಪ್ರಕಾರ, ಮಗುವಿನ ತಲೆಗೆ ಗಂಭೀರ ಗಾಯವಾಗಿದೆ. ದೇಹದ ಇತರ ಭಾಗಗಳಲ್ಲೂ ಗಾಯಗಳಾಗಿವೆ. ಉಸಿರಾಟದ ತೊಂದರೆಯಿಂದಾಗಿ ವೈದ್ಯರು ಮಗುವಿಗೆ ಅಂಬು ಬ್ಯಾಗ್‌ ಮೂಲಕ ಆಕ್ಸಿಜನ್​ ಒದಗಿಸುತ್ತಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಆರೋಗ್ಯಕ್ಕೆ 24 ರಿಂದ 48 ಗಂಟೆಗಳ ಕಾಲ ಮುಖ್ಯವಾಗಿದೆ ಎಂದು ಕೆಜಿಎಂಯು ವೈದ್ಯರು ತಿಳಿಸಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/aatavaadutta+murane+mahadi+melindha+biddha+onduvare+varshadha+magu+sthiti+chintaajanaka+-newsid-n524869272?listname=newspaperLanding&topic=homenews&index=10&topicIndex=0&mode=pwa&action=click

Leave a Reply

Your email address will not be published. Required fields are marked *