UPI ಪೇಮೆಂಟ್‌ನಲ್ಲಿ ಮಹತ್ವದ ಬದಲಾವಣೆ; ನಾಳೆಯಿಂದ ವಿಶೇಷ ಅಕ್ಷರ/ ಚಿಹ್ನೆ ಹೊಂದಿರುವ UPI ಐಡಿಯಿಂದ ಹಣ ಸೆಂಡ್‌ ಆಗಲ್ಲ.

ನವದೆಹಲಿ: ನಾಳೆಯಿಂದ ಯುಪಿಐ (UPI) ಪೇಮೆಂಟ್‌ನಲ್ಲಿ ಮಹತ್ವದ ಬದಲಾವಣೆಯಾಗಲಿದೆ. ವಿಶೇಷ ಅಕ್ಷರ/ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕಾರ ಆಗುವುದಿಲ್ಲ.

ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (NPCI) ಯುಪಿಐ ಐಡಿಯಲ್ಲಿ ವಿಶೇಷ ಅಕ್ಷರ, ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕರಿಸಲಾಗುವುದಿಲ್ಲ ಎಂದು ಸುತ್ತೋಲೆ ಪ್ರಕಟಿಸಿದೆ.

ಯುಪಿಐ ವಹಿವಾಟು ಐಡಿಯನ್ನು ಕ್ರಿಯೇಟ್ ಮಾಡುವಾಗ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಬೇಕು. ಯುಪಿಐ ಐಡಿಯಲ್ಲಿ @, $, #. ^ ,%, * ಸೇರಿದಂತೆ ಇಂತಹ ಯಾವುದೇ ಚಿಹ್ನೆಗಳನ್ನು ಬಳಸಬಾರದು. ಒಂದು ವೇಳೆ ಈ ರೀತಿ ಚಿಹ್ನೆ ಇರುವ ಯುಪಿಐ ಐಡಿ ಬಳಸಿದ್ದರೆ ಪೇಮೆಂಟ್ ಸ್ವೀಕಾರ ಆಗುವುದಿಲ್ಲ ಎಂದು ತಿಳಿಸಿದೆ. 

ಯುಪಿಐ ವಹಿವಾಟು ಐಡಿಗಳನ್ನು ರಚಿಸಲು ಆಲ್ಫಾನ್ಯೂಮರಿಕ್ ಅಕ್ಷರಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಈ ಸೂಚನೆಯ ಹೊರತಾಗಿಯೂ ಕೆಲವರು ವಿಶೇಷ ಅಕ್ಷರಗಳನ್ನು ಬಳಸುವುದನ್ನು ಮುಂದುವರೆಸಿದ್ದಾರೆ. ಇದು ತಾಂತ್ರಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದೆ.

ಫೆಬ್ರವರಿ 1 ರಿಂದ UPI ಐಡಿಗಳು ಸಂಖ್ಯೆಗಳು (0-9) ಮತ್ತು ವರ್ಣಮಾಲೆಯ (A-Z) ಸೇರಿಸಲು ಮಾತ್ರ ಅನುಮತಿಸಲಾಗುತ್ತದೆ.

ವ್ಯಾಲಿಡ್‌ ಐಡಿ: abcd123
ಇನ್‌ವ್ಯಾಲಿಡಿ ಐಡಿ: abc@123#456!

Source : https://publictv.in/big-change-in-upi-rules-npci-bans-special-characters-in-upi-transaction-ids-from-february-1

Leave a Reply

Your email address will not be published. Required fields are marked *