ಸಾಬೂನು ಬಳಸದೆ ಅಡುಗೆ ಮನೆಯ ಪಾತ್ರೆ ಫಳ ಫಳ ಹೊಳೆಯುವಂತೆ ಮಾಡುವ ಸರಳ ವಿಧಾನ

ಸಾಬೂನು ಇಲ್ಲದೆ ಪಾತ್ರೆ ಹೇಗೆ ತೊಳೆಯುವುದು ಎಂದು ಚಿಂತಿಸಬೇಕಾಗಿಲ್ಲ. ಇಂದು ಸಾಬೂನು ಇಲ್ಲದೆ ಪಾತ್ರೆಗಳನ್ನು ತೊಳೆಯುವ ಸುಲಭ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. 

ಬೆಂಗಳೂರು : ಅನೇಕ ಬಾರಿ ಮನೆಯಲ್ಲಿ ಪಾತ್ರೆ ತೊಳೆಯುವ ಸೋಪ್ ಖಾಲಿಯಾಗುತ್ತದೆ.  ಕೆಲವೊಮ್ಮೆ ಮಾರುಕಟ್ಟೆಗೆ ಹೋಗಿ ಸಾಬೂನು ತರಲು  ಸೋಮಾರಿತನವೂ ಕಾಡಬಹುದು. ಪಾತ್ರೆಗಳೆಂದರೆ ಅಡುಗೆ ಮನೆಯ ಒಂದು ಭಾಗವೇ ಸರಿ. ಅಂತಹ ಪರಿಸ್ಥಿತಿಯಲ್ಲಿ ಸಾಬೂನು ಇಲ್ಲದೆ ಪಾತ್ರೆ ಹೇಗೆ ತೊಳೆಯುವುದು ಎಂದು ಚಿಂತಿಸಬೇಕಾಗಿಲ್ಲ. ಅದಕ್ಕಾಗಿಯೇ ಇಂದು ಸಾಬೂನು ಇಲ್ಲದೆ ಪಾತ್ರೆಗಳನ್ನು ತೊಳೆಯುವ ಸುಲಭ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. 

ಸೋಪ್ ಇಲ್ಲದೆ  ಪಾತ್ರೆಗಳನ್ನ್ ಸ್ವಚ್ಛಗೊಳಿಸುವ ಮಾರ್ಗಗಳು  : 
ಅಡಿಗೆ ಸೋಡಾ : 
ಕೆಲವೊಮ್ಮೆ ಮಾಡಿದ ಅಡುಗೆ ಪಾತ್ರೆಯ ತಳ ಹಿಡಿಯುತ್ತದೆ. ಆಗ ಅವುಗಳಲ್ಲಿ ಬಹಳಷ್ಟು ಕೊಳಕು ಸಂಗ್ರಹವಾಗುತ್ತದೆ. ಅವುಗಳನ್ನು ಸೋಪಿನ ಸಹಾಯದಿಂದಲೂ ಸ್ವಚ್ಛಗೊಳಿಸುವುದು ಸಾಧ್ಯವಾಗುವುದಿಲ್ಲ.  ಅಂತಹ ಪರಿಸ್ಥಿತಿಯಲ್ಲಿ, ಅಡಿಗೆ ಸೋಡಾ ತುಂಬಾ ಉಪಯುಕ್ತವಾಗಿದೆ.  ಇದಕ್ಕಾಗಿ, ನೀವು ಮೊದಲು ಪಾತ್ರೆಗಳನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು ಕೊಳ್ಳಬೇಕು. ನಂತರ ಅವುಗಳ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ  ಸ್ವಲ್ಪ ಸಮಯ ಹಾಗೆಯೇ ಬಿಡಿ. ನಂತರ ಪಾತ್ರೆಗಳನ್ನು ಸ್ಪಂಜಿನ ಸಹಾಯದಿಂದ ಉಜ್ಜುವ ಮೂಲಕ ಸ್ವಚ್ಛಗೊಳಿಸಿ. 

ಇದಕ್ಕಾಗಿ ವಿನೆಗರ್ ಅನ್ನು ಬಳಸಿ : 
1 ಕಪ್ ನೀರು ಮತ್ತು 4-5 ಟೀ ಚಮಚ ವಿನೆಗರ್ ಅನ್ನು ಸ್ಪ್ರೇ ಬಾಟಲಿಯಲ್ಲಿ ಮಿಶ್ರಣ ಮಾಡಿ. ನಂತರ ನೀವು ಅದನ್ನು ಪಾತ್ರೆಗಳ ಮೇಲೆ ಸಿಂಪಡಿಸಿ ಸ್ವಲ್ಪ ಸಮಯದವರೆಗೆ ಬಿಡಿ.  ಇದಾದ ಬಳಿಕ ಬಿಸಿನೀರಿನ ಸಹಾಯದಿಂದ ಪಾತ್ರೆಗಳನ್ನು ತೊಳೆದು ಸ್ವಚ್ಛಗೊಳಿಸಿ.  ಇಲ್ಲಿ ಅಗತ್ಯವಿದ್ದರೆ ನೀವು ಅದಕ್ಕೆ ಅಡಿಗೆ ಸೋಡಾ ಮತ್ತು ನಿಂಬೆ ರಸವನ್ನು ಕೂಡಾ ಸೇರಿಸಬಹುದು. ಇದು ಪಾತ್ರೆಯನ್ನು ಆಳವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. 

ಬೂದಿ ಬಳಸಿ :
ಪ್ರಾಚೀನ ಕಾಲದಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬೂದಿ ಬಳಸುತ್ತಿದ್ದರು. ಪಾತ್ರೆಗಳನ್ನು ಬೂದಿಯಿಂದ ಸ್ವಚ್ಛಗೊಳಿಸಿದರೆ, ವಾಸನೆಯು ಅವುಗಳಿಂದ ದೂರ ಉಳಿಯುತ್ತದೆ. ಇದಕ್ಕಾಗಿ, ನೀವು ಪಾತ್ರೆಯಲ್ಲಿ ಮರದ ಬೂದಿ ಹಾಕಿ ಸ್ಪಾಂಜ್ ಸಹಾಯದಿಂದ ಸ್ವಚ್ಛಗೊಳಿಸಬಹುದು. 

Source :https://zeenews.india.com/kannada/lifestyle/how-to-clean-kitchen-utensils-without-soap-143505

Leave a Reply

Your email address will not be published. Required fields are marked *