“100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ ಸಿಕ್ಕ ರೋಚಕ ಜಯ”!

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನ ದ್ವಿತೀಯ ಪಂದ್ಯವು ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿತ್ತು. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಈ ಟೂರ್ನಿಯ ದ್ವಿತೀಯ ಪಂದ್ಯದಲ್ಲಿ ಸದರ್ನ್ ಬ್ರೇವ್ ಹಾಗೂ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ ಫಿಲ್ ಸಾಲ್ಟ್ (60) ಭರ್ಜರಿ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವು 100 ಎಸೆತಗಳಲ್ಲಿ 4 ವಿಕೆಟ್ ಕಳೆದುಕೊಂಡು 131 ರನ್​ ಗಳಿಸಿದ್ದರು.

100 ಎಸೆತಗಳಲ್ಲಿ 132 ರನ್​ಗಳ ಗುರಿ ಪಡೆದ ಸದರ್ನ್ ಬ್ರೇವ್ ತಂಡಕ್ಕೆ ಡು ಪ್ಲೂಯ್ (25) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಜೇಸನ್ ರಾಯ್ 30 ರನ್​ಗಳ ಕೊಡುಗೆ ನೀಡಿದರು. ಆದರೆ ಆ ಬಳಿಕ ದಿಢೀರ್ ಕುಸಿತಕ್ಕೊಳಗಾದ ಸದರ್ನ್ ಬ್ರೇವ್ ತಂಡಕ್ಕೆ ಕೊನೆಯ ಮೂರು ಎಸೆತಗಳಲ್ಲಿ 3 ರನ್​ಗಳು ಬೇಕಿದ್ದವು.

ಅತ್ತ ಮ್ಯಾಚೆಂಸ್ಟರ್ ಒರಿಜಿನಲ್ಸ್ ತಂಡಕ್ಕೆ ಗೆಲ್ಲಲು ಕೇವಲ 2 ವಿಕೆಟ್​ಗಳ ಅಗತ್ಯವಿತ್ತು. ಇದೇ ವೇಳೆ ಗ್ರೆಗೊರಿ ಎಸೆದ ಎಸೆತದಲ್ಲಿ ಟೈಮಲ್ ಮಿಲ್ಸ್ ಬೌಲ್ಡ್ ಆದರು. ಪರಿಣಾಮ ಕೊನೆಯ 2 ಎಸೆತಗಳಲ್ಲಿ 3 ರನ್​ಗಳು ಬೇಕಿದ್ದವು. ಅಂತಿಮ ದಾಂಡಿಗನಾಗಿ ಕ್ರೀಸ್​ಗೆ ಬಂದ ರೀಸ್ ಟೋಪ್ಲಿ ಫೋರ್ ಬಾರಿಸುವ ಮೂಲಕ ಸದರ್ನ್​ ಬ್ರೇವ್ ತಂಡಕ್ಕೆ 1 ವಿಕೆಟ್​ನ ರೋಚಕ ತಂದುಕೊಟ್ಟರು. ಇದೀಗ ಈ ರಣರೋಚಕ ಪಂದ್ಯದ ವಿಡಿಯೋ ವೈರಲ್ ಆಗಿದೆ.

Views: 10

Leave a Reply

Your email address will not be published. Required fields are marked *