ಬಳ್ಳಾರಿ: ಮೊಹರಂ ಆಚರಣೆ ವೀಕ್ಷಿಸಲು ಅಂಗಡಿಗೆ ಹಾಕಿದ್ದ ತಗಡಿನ ಶೆಡ್ ಮೇಲೆ ಹತ್ತಾರು ಮಂದಿ ನಿಂತು ವೀಕ್ಷಿಸುತ್ತಿದ್ದರು. ಈ ವೇಳೆ ಜನ ಹೆಚ್ಚಾದಂತೆ ತಗಡಿನ ಶೆಡ್ ಭಾರ ತಡೆಯಲಾರದೇ ನೋಡನೋಡುತ್ತಲೇ ಕುಸಿದಿದೆ.
![](https://samagrasuddi.co.in/wp-content/uploads/2024/07/image-138-1024x576.png)
ಬಳ್ಳಾರಿ: ಮುಸ್ಲಿಮರ (Muslims) ಪವಿತ್ರ ಆಚರಣೆ ಮೊಹರಂ ಹಬ್ಬ (Muharram Festival)ದ ವೇಳೆ ದುರಂತವೊಂದು ಸಂಭವಿಸಿದ್ದು, ಆಚರಣೆ ವೀಕ್ಷಿಸುತ್ತಿದ್ದ ಹಲವು ಮಂದಿ ಶೆಡ್ ರೂಫ್ ಕುಸಿದು ಗಾಯಗೊಂಡಿದ್ದಾರೆ.
ಬಳ್ಳಾರಿ ಹೊರವಲಯದ ಹಳೇ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೊಹರಂ ಆಚರಣೆ ವೀಕ್ಷಿಸಲು ಅಂಗಡಿಗೆ ಹಾಕಿದ್ದ ತಗಡಿನ ಶೆಡ್ ಮೇಲೆ ಹತ್ತಾರು ಮಂದಿ ನಿಂತು ವೀಕ್ಷಿಸುತ್ತಿದ್ದರು.ಈ ವೇಳೆ ಜನ ಹೆಚ್ಚಾದಂತೆ ತಗಡಿನ ಶೆಡ್ ಭಾರ ತಡೆಯಲಾರದೇ ನೋಡನೋಡುತ್ತಲೇ ಕುಸಿದಿದೆ. ಆಚರಣೆ ವೀಕ್ಷಿಸಲು ಶೆಡ್ ಮೇಲೆ ಜನರೆಲ್ಲ ಹತ್ತಿಕೊಂಡಿದ್ದು, ಅವರ ಭಾರಕ್ಕೆ ಶೆಡ್ ಏಕಾಏಕಿ ಕುಸಿದಿದೆ. ಅಷ್ಟೇ ಅಲ್ಲದೇ, ಕುಸಿದು ಕೆಳಕ್ಕೆ ಬೀಳೋ ವೇಳೆ ಜನರ ಮೇಲೆ ಬಿದ್ದಿದೆ. ಈ ವೇಳೆ ನೂರಾರು ಮಂದಿ ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಮೇಲಿನಿಂದ ಹತ್ತಾರು ಮಂದಿ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದು, ರೂಫ್ ಕೆಳಗಡೆಯೂ ಜನದಟ್ಟಣೆ ಇತ್ತು. ಅವರ ಮೇಲೆ ಶೆಡ್ ಸಮೇತ ಜನ ಬಿದ್ದಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.