ಜ್ಯೋತಿಷಿ ಮಾತು ನಂಬಿ ನಿಧಿ ಆಸೆಗೆ ಮನೆಯಲ್ಲೇ 20 ಅಡಿ ಗುಂಡಿ ತೆಗೆದ ಮಹಿಳೆ!!

ವಿ.ಎಸ್ ದೊಡ್ಡಿ ಗ್ರಾಮದ ಭಾಗ್ಯ ಎಂಬುವರು ಕಳೆದ ನಾಲ್ಕೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ ಎಂದು ತಿಳಿದು ಮನೆಯನ್ನು ತೊರೆದು  ಬೆಂಗಳೂರಿನಲ್ಲಿ ತಳ್ಳುವ ಗಾಡಿಯಲ್ಲಿ ಮಜ್ಜಿಗೆ, ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದರು. 

ಚಾಮರಾಜನಗರ:  ಜ್ಯೋತಿಷಿ ತೋರಿದ್ದ ನಿಧಿಯಾಸೆಗೆ ಮಹಿಳೆಯೊಬ್ಬಳು ಕುಟುಂಬದೊಟ್ಟಿಗೆ ಸೇರಿ ಮನೆಯಲ್ಲಿ 20 ಅಡಿ ಗುಂಡಿ ತೆಗೆದ ಘಟನೆ ಹನೂರು ತಾಲೂಕಿನ ವಿ.ಎಸ್. ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ವಿ.ಎಸ್.ದೊಡ್ಡಿ ಗ್ರಾಮದ ಭಾಗ್ಯ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು ನಿಧಿಯಾಸೆಗೆ ಗುಂಡಿ ತೋಡಿದ ಮಾಹಿತಿ ಬೇರೆಯವರಿಗೆ ತಿಳಿಯುತ್ತಿದ್ದಂತೆ ಮನೆಮಂದಿ ನಾಪತ್ತೆಯಾಗಿದ್ದಾರೆ.

ವಿ.ಎಸ್ ದೊಡ್ಡಿ ಗ್ರಾಮದ ಭಾಗ್ಯ ಎಂಬುವರು ಕಳೆದ ನಾಲ್ಕೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ ಎಂದು ತಿಳಿದು ಮನೆಯನ್ನು ತೊರೆದು  ಬೆಂಗಳೂರಿನಲ್ಲಿ ತಳ್ಳುವ ಗಾಡಿಯಲ್ಲಿ ಮಜ್ಜಿಗೆ, ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದರು. 

ಈ ವೇಳೆ ಸಹೋದರಿಯ ಸಂಬಂಧಿಕ ಪರಶಿವ ಎಂಬುವರು ಭಾಗ್ಯಳಿಗೆ ಸ್ಥಳೀಯ  ಜೋತಿಷಿರೊಬ್ಬರ ಬಳಿ ಕರೆದುಕೊಂಡು ಹೋಗಿ ಮನೆಯ ಬಗ್ಗೆ ಶಾಸ್ತ್ರ ಕೇಳಿಸಿದ್ದರಂತೆ. 

ಮನೆಯಲ್ಲಿ ನಿಧಿ ಇರುವುದಾಗಿ ಜೋತಿಷಿ ತಿಳಿಸಿದಾಗ ನಿಧಿ ಶೋಧನೆಗಾಗಿ ಭಾಗ್ಯ ಅನುಮತಿ ನೀಡಿದ್ದರು ಎನ್ನಲಾಗಿದೆ. 

ಈ ಹಿನ್ನಲೆ ಜೋತಿಷಿ ತನ್ನ ಜತೆಗಾರನೊಂದಿಗೆ ಕಳೆದ ವಾರದ ಹಿಂದೆ ವಿ.ಎಸ್ ದೊಡ್ಡಿಗೆ ಆಗಮಿಸಿ ಭಾಗ್ಯ ಅವರ ಸಮ್ಮುಖದಲ್ಲೇ ರಾತ್ರಿ ವೇಳೆ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆಯನ್ನು ನೆರವೇರಿಸಿ ಯಾರಿಗೂ ತಿಳಿಯದಂತೆ ನಿಧಿಗಾಗಿ ಗುಂಡಿ ತೆಗೆಯುವ ಕಾರ್ಯವನ್ನು ಆರಂಭಿಸಿದ್ದರು. 3 ಅಡಿ ಅಗಲ ಹಾಗೂ 20 ಅಡಿ ಆಳವನ್ನು ತೆಗೆದಿದ್ದು, ಶೋಧ ಕಾರ್ಯ ಮುಂದುವರಿದಿತ್ತು. ಈ ಬಗ್ಗೆ ಸ್ಥಳೀಯರಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿದಿರುವುದು ಗೊತ್ತಾಗುತ್ತಿದ್ದಂತೆ ಭಾಗ್ಯ ಸೇರಿದಂತೆ ಜ್ಯೋತಿಷಿ ಹಾಗೂ ಇನ್ನಿತರರು ಕಣ್ಮರೆಯಾಗಿದ್ದಾರೆ.

Source : https://zeenews.india.com/kannada/karnataka/a-woman-dug-a-20-foot-hole-at-home-for-the-desire-of-wealth-by-believing-an-astrologer-153753

Leave a Reply

Your email address will not be published. Required fields are marked *