ಹಜ್ ಯಾತ್ರೆಗೆ ತೆರಳಿದ್ದ ಹಿರಿಯೂರಿನ ಮಹಿಳೆ ಸಾವು.

ಬೆಸ್ಕಾಂ ನಿವೃತ್ತ ನೌಕರ ರಫೀಕ್ ಅಹಮದ್ ಅವರ ಪತ್ನಿ ಷಾಕಿರಾ ಬಾನು (69) ಮೃತಪಟ್ಟವರು. ಅವರಿಗೆ ಪುತ್ರ, ಮೂವರು ಪುತ್ರಿಯರು ಇದ್ದಾರೆ. ಸೋಮವಾರ ಮೆಕ್ಕಾದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೇ 10ರಂದು ರಫೀಕ್ ಅಹಮದ್ ದಂಪತಿ ಯಾತ್ರೆಗೆ ತೆರಳಿದ್ದರು. ಜೂನ್ 23 ರಂದು ರಾತ್ರಿ 12 ಗಂಟೆಯ ವಿಮಾನದಲ್ಲಿ ಅವರು ಬೆಂಗಳೂರಿಗೆ ವಿಮಾನ ಹತ್ತಬೇಕಿತ್ತು. ರಾತ್ರಿ 10 ಗಂಟೆ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಇದ್ದಕ್ಕಿದ್ದಂತೆ ಅನಾರೋಗ್ಯ ಉಂಟಾಗಿ ಷಾಕಿರಾಬಾನು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ರಫೀಕ್ ಅಹಮದ್ ಇನ್ನೂ ಮೆಕ್ಕಾದಲ್ಲಿ ಇದ್ದಾರೆ.

Source : https://www.prajavani.net/district/chitradurga/a-woman-from-hiriyuru-who-had-gone-for-hajj-died-2859708

Views: 0

Leave a Reply

Your email address will not be published. Required fields are marked *